ನೌಕಾಪಡೆ ಉಪಮುಖ್ಯಸ್ಥರಾಗಿ ತರುಣ್ ಸೋಬ್ತಿ
ನವದೆಹಲಿ, ಅ. ೧: ಉಪ ಅಡ್ಮಿರಲ್ ತರುಣ್ ಸೋಬ್ತಿ ನೌಕಾಪಡೆ ಸಿಬ್ಬಂದಿಗಳ ಉಪಮುಖ್ಯಸ್ಥರಾಗಿ ಇಂದು ಅಧಿಕಾರ ಸ್ವೀಕರಿಸಿದರು. ಉಪ ಅಡ್ಮಿರಲ್ ಸಂಜಯ್ ಮಹಿಂದ್ರು ಅವರು ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರ ಉತ್ತರಾಧಿಕಾರಿಯಾಗಿ ತರುಣ್ ಸೋಬ್ತಿ ಅಧಿಕಾರ ಸ್ವೀಕರಿಸಿದ್ದಾರೆ. ಉಪ ಅಡ್ಮಿರಲ್ ಸೋಬ್ತಿ ಅವರು ೧೯೮೮ ರ ಜುಲೈ ೧ ರಂದು ನೌಕಾಪಡೆಗೆ ಸೇರ್ಪಡೆಯಾದರು. ೩೫ ವರ್ಷಗಳ ವೃತ್ತಿ ಜೀವನದಲ್ಲಿ ಸೋಬ್ತಿ ಅವರು ಕಮಾಂಡ್ ಮತ್ತು ಸಿಬ್ಬಂದಿ ವಿಭಾಗದಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ೨೦೧೯ ರಲ್ಲಿ ರಿಯರ್ ಅಡ್ಮಿರಲ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರನ್ನು ಎಜಿಮಲದ ಇಂಡಿಯನ್ ನೇವಲ್ ಅಕಾಡೆಮಿಯಲ್ಲಿ ಡೆಪ್ಯೂಟಿ ಕಮಾಂಡೆAಟ್ ಮತ್ತು ಮುಖ್ಯ ಬೋಧಕರಾಗಿ, ನಂತರ ಈಸ್ಟರ್ನ್ ಫ್ಲೀಟ್ನ ಪ್ಲಾಗ್ ಆಫೀಸರ್ರನ್ನಾಗಿ ನೇಮಕ ಮಾಡಲಾಗಿತ್ತು. ೨೦೨೧ ರಲ್ಲಿ ವೈಸ್ ಅಡ್ಮಿರಲ್ ಹುದ್ದೆಗೆ ಏರಿದ ನಂತರ, ಅವರು ‘ಪ್ರಾಜೆಕ್ಟ್ ಸೀಬರ್ಡ್'ನ ಡೈರೆಕ್ಟರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು, ಅದರ ಅಡಿಯಲ್ಲಿ ಭಾರತ ಕಾರವಾರ ನೌಕಾ ನೆಲೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಏಷ್ಯನ್ ಗೇಮ್ಸ್ - ಭಾರತದ ಚಿನ್ನದ ಸಾಧನೆ
ಹ್ಯಾಂಗ್ಝೌ, ಅ. ೧: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ೨೦೨೩ರಲ್ಲಿ ಭಾರತದ ಪದಕಗಳ ಭೇಟೆ ಮುಂದುವರೆದಿದ್ದು, ಷಾಟ್ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಪುರುಷರ ೩,೦೦೦ ಮೀಟರ್ ಸ್ಟೀಪಲ್ ಚೇಸ್ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ. ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಫೌಲ್ ಮಾಡಿದ ಹೊರತಾಗಿಯೂ ಭಾನುವಾರ ನಡೆದ ಪುರುಷರ ಷಾಟ್ಪುಟ್ ಫೈನಲ್ನಲ್ಲಿ ತಜಿಂದರ್ ಪಾಲ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. ೨೦.೩೬ ಮೀಟರ್ ದೂರ ಎಸೆಯುವ ಮೂಲಕ ತಜೇಂದರ್ ಪಾಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಮತ್ತೊಂದೆಡೆ ಪುರುಷರ ೩,೦೦೦ ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾರತದ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದರು. ಅವಿನಾಶ್ ೮.೧೯ ೫೪ ಸೆಕೆಂಡ್ನಲ್ಲಿ ನಿಗದಿತ ಗುರಿ ತಲುಪುವ ಮೂಲಕ ಭಾರತಕ್ಕೆ ೧೨ನೇ ಚಿನ್ನದ ಪದಕ ತಂದುಕೊಟ್ಟರು. ಪುರುಷರ ೩,೦೦೦ ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಈ ಮೂಲಕ ಭಾರತ ೧೩ ಚಿನ್ನದ ಪದಕ ಪಡೆದುಕೊಂಡಿದ್ದು, ಪದಕಗಳ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ
ಬಾಗಲಕೋಟೆ, ಅ. ೧: ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ಮದ್ಯ ನಿಷೇಧ ಆಂದೋಲನ ಸದಸ್ಯರು ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ರಾಜ್ಯ ಮಹಿಳಾ ಒಕ್ಕೂಟ ಸಹಯೋಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರು, ಮದ್ಯ ಮಾರಾಟ ಪರವಾನಗಿ ನೀಡುವ ನಿರ್ಧಾರವನ್ನು ಕರ್ನಾಟಕ ಪಂಚಾಯಿತಿ ಕಾನೂನಿನ್ವಯ ಗ್ರಾಮಸಭೆಗೆ ಪರಮಾಧಿಕಾರ ಕೊಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ಟೀಕೆ
ಬೆಂಗಳೂರು, ಅ. ೧: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅಡಳಿತದಲ್ಲಿ ರಾಜ್ಯದ ಕನ್ನಡಿಗರು ನೆಮ್ಮದಿಯಾಗಿಲ್ಲ ಎಂಬುದು ಎಷ್ಟು ಸತ್ಯವೋ, ಹಾಗೆಯೇ ಸ್ವಪಕ್ಷೀಯರಿಗೂ ಅವರ ಆಡಳಿತ ತೃಪ್ತಿ ತಂದಿಲ್ಲ ಎಂಬುದು ಅಷ್ಟೇ ಸತ್ಯ ಎಂದು ಬಿಜೆಪಿ ಟೀಕಿಸಿದೆ. ಸಿದ್ದರಾಮಯ್ಯ ಅವರು, ತಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದು ಸಂಪೂರ್ಣ ಸುಳ್ಳು ಎಂಬುದು ಅವರ ನಾಲ್ಕು ತಿಂಗಳ ಆಡಳಿತದಲ್ಲಿ ಸಾಬೀತಾಗಿದೆ. ಜಾತಿ ರಾಜಕಾರಣವನ್ನೇ ಅಸ್ತç ಮಾಡಿಕೊಂಡಿರುವ ಅವರು ಕೆಲವೇ ಆಯ್ದ ಜನಾಂಗಕ್ಕೆ ಅನುಕೂಲ ಮಾಡಿ ಉಳಿದವರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬುದು ಅವರ ಸ್ವಪಕ್ಷೀಯರೇ ನುಡಿದಿರುವ ಸತ್ಯವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಶಿವಾಜಿ ಬಳಸಿದ ಅಸ್ತç ೩೫೦ ವರ್ಷಗಳ ಬಳಿಕ ಭಾರತಕ್ಕೆ
ಮುಂಬೈ, ಅ. ೧: ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಾಘ್ನಖ್ ಅಥವಾ ಹುಲಿ ಉಗುರು (ವ್ಯಾಘ್ರನಖ) ಮಾದರಿ ಅಸ್ತç ಬರೊಬ್ಬರಿ ೩೫೦ ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿದೆ. ೧೬೫೯ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ್ದ ‘ಹುಲಿ ಉಗುರು' ಆಯುಧವು ನವೆಂಬರ್ನಲ್ಲಿ ಲಂಡನ್ನಿAದ ಮಹಾರಾಷ್ಟçಕ್ಕೆ ಮರಳಲಿದೆ ಎಂದು ಹೇಳಲಾಗಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ೩೫೦ ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿAದ ಹುಲಿ ಪಂಜದ ಆಯುಧ ವ್ಯಾಘ್ರನಖವನ್ನು ಮರಳಿ ತರಲಾಗುತ್ತಿದೆ. ಮಹಾರಾಷ್ಟçದ ಸಂಸ್ಕೃತಿ ಸಚಿವ ಸುಧೀರ್ ಮುಂಗAತಿವಾರ್ ಅವರು ಮಂಗಳವಾರ ಲಂಡನ್ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊAದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಮೊದಲ ಹಂತದಲ್ಲಿ, ನಾವು ಶಿವಾಜಿ ಮಹಾರಾಜರ ವಾಘ್ ನಖ್ (ವ್ಯಾಘ್ರನಖ) ಅನ್ನು ಮರಳಿ ತರುತ್ತಿದ್ದೇವೆ. ಅದನ್ನು ನವೆಂಬರ್ನಲ್ಲಿ ಇಲ್ಲಿಗೆ ತರಬೇಕು ಮತ್ತು ಅದಕ್ಕಾಗಿ ನಾವು ಎಂಒಯು(ಒಪ್ಪAದ)ಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನ ಎಂದು ಸಚಿವ ಮುಂಗAತಿವಾರ್ ಹೇಳಿದರು. ವಾಘ್ ನಖ್ ಅನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ.
ಭಯೋತ್ಪಾದಕರೊಂದಿಗೆ ನಂಟು - ಇಬ್ಬರು ಪೊಲೀಸರ ಅಮಾನತ್ತು
ಶ್ರೀನಗರ, ಅ. ೧: ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪ ಸಂಬAಧ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ಡಿಎಸ್ಪಿ ಆದಿಲ್ ಮುಸ್ತಾಕ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೌಹಾರ್ ಅಹ್ಮದ್ ಖಾನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಭಾನುವಾರ ಅಮಾನತುಗೊಳಿಸಿದೆ. ಆದಿಲ್ ಮುಸ್ತಾಕ್ ವಿರುದ್ಧ ಭ್ರಷ್ಟಾಚಾರ, ಸಾಕ್ಷö್ಯ ನಾಶ ಮತ್ತು ಭಯೋತ್ಪಾದಕರ ಜೊತೆ ನಂಟು ಹೊಂದಿದ ಗಂಭೀರ ಸ್ವರೂಪದ ಆರೋಪಗಳಿವೆ. ಈ ಕುರಿತು ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು. ಭಯೋತ್ಪಾದನೆ ಜೊತೆಗಿನ ನಂಟು ಹೊಂದಿದ ಆರೋಪ ಸಂಬAಧ ಡಿಎಸ್ಪಿ ದೇವಿಂದರ್ ಸಿಂಗ್ ಬಂಧನವಾದ ಮೂರು ವರ್ಷಗಳ ಬಳಿಕ ಆದಿಲ್ ಮುಸ್ತಾಕ್ ಅವರನ್ನು ಬಂಧಿಸಲಾಗಿತ್ತು.
ನೈಟ್ ಕ್ಲಬ್ನಲ್ಲಿ ಅಗ್ನಿ ಅವಘಡ-ಏಳು ಮಂದಿ ಸಾವು
ಮ್ಯಾಡ್ರಿಡ್, ಅ. ೧: ಆಗ್ನೇಯ ಸ್ಪೇನ್ ಮುರ್ಸಿಯಾ ನಗರದ ನೈಟ್ ಕ್ಲಬ್ವೊಂದರಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಕಣ್ಮರೆಯಾಗಿರುವ ಶಂಕೆ ಇದೆ. ಬೆಂಕಿಯ ಅವಘಡದಲ್ಲಿ ಮತ್ತಷ್ಟು ಜನರು ಸಿಲುಕಿದ್ದು, ಕಣ್ಮರೆಯಾಗಿದ್ದಾರೆ. ಅವರ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ೬ ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಅವಘಡದ ಕಾರಣ ಪತ್ತೆ ಹಚ್ಚಲು ತುರ್ತು ಸೇವೆಗಳ ವಿಭಾಗದ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ ಎಂದು ನಗರದ ಮೇಯರ್ ಜೋಸ್ ಬಲ್ಲೆಸ್ನಾ ಹೇಳಿದ್ದಾರೆ.