ನಾಪೋಕ್ಲು, ಅ. ೧: ಕಾನೂನು ಬಾಹಿರ ಚಟುವಟಿಕೆಗಳು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಅಂತಹ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದು ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ಹೇಳಿದರು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಕುರಿತು ಇಲ್ಲಿನ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೊಬೈಲ್ ಬಳಸುವುದರಿಂದ ಹಲವು ಸಂದರ್ಭಗಳಲ್ಲಿ ಅನಾಹುತಗಳಾಗುತ್ತಿದ್ದು ಮಿತವಾಗಿ ಮೊಬೈಲ್ ಬಳಕೆ ಮಾಡಬೇಕು. ೧೮ ವರ್ಷದೊಳಗಿನ ಯಾರೂ ವಾಹನ ಚಲಾಯಿಸಬಾರದು ಹಾಗೂ ಟ್ರಾಫಿಕ್ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ಸAಸ್ಥೆಯ ಅಧ್ಯಕ್ಷರಾದ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕರಾದ ಬಿದ್ದಾಟಂಡ ಮುದ್ದಯ್ಯ, ಕೊಂಬAಡ ಗಣೇಶ, ನಿವೃತ್ತ ಪ್ರೊಫೆಸರ್ ಕಲ್ಯಾಟಂಡ ಪೂಣಚ್ಚ ಹಾಗೂ ಸಂಸ್ಥೆಯ ಮುಖ್ಯ ಶಿಕ್ಷಕಿ ಕಲ್ಯಾಟಂಡ ಶಾರದಾ ಅಪ್ಪಣ್ಣ ಉಪಸ್ಥಿತರಿದ್ದರು

ವಿದ್ಯಾರ್ಥಿಗಳಾದ ವರ್ಷ ಎ.ಎಸ್ ಹಾಗೂ ದೀಕ್ಷ ಪ್ರಾರ್ಥಿಸಿ, ಶಾರದಾ ಅಪ್ಪಣ್ಣ ಸ್ವಾಗತಿಸಿದರು. ಶಿಕ್ಷಕ ಮೂಡೆರ ಕಾಳಯ್ಯ ಅತಿಥಿ ಪರಿಚಯ ಮಾಡಿ, ಶಿಕ್ಷಕ ಅಂಬ್ರಾಟಿ .ಟಿ. ಭಗವತಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.