ನಾಪೋಕ್ಲು, ಅ. ೧: ಸಮೀಪದ ಮರಂದೋಡ ಗ್ರಾಮದಲ್ಲಿ ಶನಿವಾರ ರಾತ್ರಿ ಗದ್ದೆಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಭತ್ತದ ಪೈರುಗಳನ್ನು ನಾಶಪಡಿಸಿವೆ. ಗ್ರಾಮದ ನಿವಾಸಿ ಚೋಯಮಾಡಂಡ ಬಾಸಾ ಪೂಣಚ್ಚ ಅವರ ಗದ್ದೆಗೆ ದಾಳಿ ಮಾಡಿರುವ ಕಾಡಾನೆಗಳು ಬೆಳೆಯುತ್ತಿರುವ ಭತ್ತದ ಪೈರುಗಳನ್ನು ನಾಶಪಡಿಸಿವೆ.
ಸುಮಾರು ಒಂದು ಎಕರೆಯಷ್ಟು ಭತ್ತದ ಗದ್ದೆಯ ಪೈರುಗಳು ನಾಶವಾಗಿದ್ದಲ್ಲದೆ ಅಡಿಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಅಡಕೆ ಗಿಡಗಳನ್ನು ಕೂಡ ಧ್ವಂಸ ಮಾಡಿವೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಮೊಣ್ಣಪ್ಪ, ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇನ್ನುಳಿದ ರೈತರ ಗದ್ದೆಗಳಿಗೆ ಕಾಡಾನೆಗಳು ದಾಳಿ ಮಾಡುವ ಸಂಭವ ಇದ್ದು ಕಾಡಾನೆಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಸಂಬAಧಿಸಿದವರನ್ನು ಒತ್ತಾಯಿಸಿದ್ದಾರೆ.