ಸೋಮವಾರಪೇಟೆ, ಅ. ೧: ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ವತಿ ಯಿಂದ, ಶ್ರೀ ಬಾಲಾಗಂಗಾ ಧರನಾಥ ಮಹಾ ಸ್ವಾಮೀಜಿಯವರ ಪಟ್ಟಾಭಿಷೇಕದ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಹಾಸನ ಶಾಖಾ ಮಠದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮ ವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.

ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸುದೀರ್ಘ ಸೇವೆ ಹಾಗೂ ಸಂಘದ ವತಿಯಿಂದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಸೇವಾಕಾರ್ಯವನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗಿದೆ. ಸನ್ಮಾನ ಸಮಾರಂಭದಲ್ಲಿ ಹಾಸನ ಶಾಖ ಮಠದ ಉಸ್ತುವಾರಿ ಶ್ರೀ ಶಂಭುನಾಥ ಸ್ವಾಮೀಜಿ, ಚಿತ್ರದುರ್ಗದ ಚನ್ನಯ್ಯ ಮಾದಾರ ಸ್ವಾಮೀಜಿ, ಚಿತ್ರದುರ್ಗಾ ಕಬೀರ ಆನಂದ ಆಶ್ರಮದ ಶ್ರೀ ಶಿವಲಿಂಗನಾಥ ಸ್ವಾಮೀಜಿ, ಮಹಾರಾಷ್ಟçದ ವೆಂಕಟೇಶ ಮಹಾರಾಜ ಸ್ವಾಮೀಜಿ ಅವರುಗಳು ಸಾಧಕರನ್ನು ಸನ್ಮಾನಿಸಿದರು.