ಗೋಣಿಕೊಪ್ಪಲು, ಅ. ೧ : ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿಯ ರುದ್ರಬೀಡಿನ ಗ್ರಾಮದಲ್ಲಿ ಹುಲಿ ದಾಳಿಯಿಂದ ಹಸು ಸಾವಿಗೀಡಾಗಿದೆ.
ಗ್ರಾಮದ ಭಾಗ್ಯ ಎಂಬವರಿಗೆ ಸೇರಿದ ಹಸುವನ್ನು ಹುಲಿಯೊಂದು ಮುಂಜಾನೆಯ ವೇಳೆ ಮನೆಯ ಸಮೀಪ ದಾಳಿ ನಡೆಸಿದೆ. ಹಸುವನ್ನು ಕೊಂದ ಹುಲಿ ಅದನ್ನು ಸಮೀಪದ ಕಾಫಿ ತೋಟಕ್ಕೆ ಎಳೆದೊಯ್ದು ತಿಂದುಹಾಕಿದೆ.
ಮುAಜಾನೆಯ ವೇಳೆ ಎಂದಿನAತೆ ಹಸುವನ್ನು ಕಟ್ಟಿದ ಸ್ಥಳಕ್ಕೆ ತೆರಳಿದ ವೇಳೆ ಹಸು ಇಲ್ಲದಿರುವುದು ತಿಳಿದು ಬಂದಿದೆ. ಮಾಹಿತಿ ತಿಳಿದ ತಿತಿಮತಿ ವಲಯ ಅರಣ್ಯ ಅಧಿಕಾರಿ ಹೆಚ್.ಎಸ್. ಗಂಗಾಧರ್, ಆರ್ಆರ್ಟಿ ಸಿಬ್ಬಂದಿಗಳು ಡಿಆರ್ಎಫ್ಓ ಹಾಲೇಶ್ ಮತ್ತಿತರರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಹುಲಿಯ ಚಲನವಲನ ಕಂಡು ಹಿಡಿಯಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಳು ಕ್ಯಾಮರಾಗಳನ್ನು ಅಳವಡಿಸಿ, ಹುಲಿಯ ಪತ್ತೆಗಾಗಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸರ್ಕಾರದ ನಿಯಮದಂತೆ ಪರಿಹಾರ ವಿತರಿಸಲು ಕ್ರಮಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ಒದಗಿಸಿದರು. ಸಮೀಪದ ತಿತಿಮತಿ ಅರಣ್ಯ ಪ್ರದೇಶದಿಂದ ಹುಲಿಯು ಈ ಭಾಗದಲ್ಲಿ ಸಂಚರಿಸುವ ವೇಳೆ ಹಸುವಿನ ಮೇಲೆ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಪರೀತ ಸುರಿಯುತ್ತಿರುವ ಮಳೆಯ ನಡುವೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.