ಮಡಿಕೇರಿ, ಸೆ. ೩೦: ಕೊಡಗಿನ ಸಾಹಿತಿ, ನಿರ್ಮಾಪಕಿ, ಸಹ ನಿರ್ದೇಶಕಿ ಹಾಗೂ ನಟಿ ಈರಮಂಡ ಹರಿಣಿ ವಿಜಯ್ ಅವರಿಗೆ ಕರ್ನಾಟಕ ವಿಕಾಸ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಈರಮಂಡ ಹರಿಣಿ ವಿಜಯ್ ಅವರ ಸಿನಿಮಾ, ಸಾಹಿತ್ಯ, ಕಲಾಸೇವೆ ಯನ್ನು ಪರಿಗಣಿಸಿ ಮೈಸೂರಿನ ಕರ್ನಾಟಕ ಸಾಂಸ್ಕöÈತಿಕ ಹಾಗೂ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಶಸ್ತಿ ನೀಡಲಾಯಿತು.
ಮೈಸೂರು ಪುರಭವನದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಲುಕೋಟೆಯ ವಂಗೀಪುರ ನಂಬಿಮಠದ ಶ್ರೀ ಇಲೈ ಆಳ್ವಾರ್ ಸ್ವಾಮೀಜಿ, ಬೆಂಗಳೂರು ಮಹಾಲಕ್ಷಿ÷್ಮಪುರಂನ ಡಾ. ಶ್ರೀ ರಾಜಶೇಖರ್ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ರಾಜ್ಯಾಧ್ಯಕ್ಷ ಡಾ. ಕಸ್ತೂರಿ ಚಂದ್ರು, ಉದ್ಯಮಿ ಹಾಗೂ ಸಮಾಜ ಸೇವಕ ಡಾ. ಸೀತಾರಾಮೇಗೌಡ, ವಿಪ್ರ ಮುಖಂಡರು ಹಾಗೂ ಸಮಾಜ ಸೇವಕ ಡಾ.ರಘು ರಾಮ್ ವಾಜಪೇಯಿ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.