ಮಡಿಕೇರಿ, ಅ. ೧: ಐತಿಹಾಸಿಕ ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭಗೊAಡಿದ್ದು, ತಾ. ೧೫ ರಿಂದ ದಸರಾ ಉತ್ಸವಕ್ಕೆ ವೈಭವದ ಚಾಲನೆ ದೊರೆಯಲಿದೆ.
ತಾ. ೧೫ ರಂದು ಸಂಜೆ ೪ ಗಂಟೆಗೆ ಪಂಪಿನಕೆರೆಯಲ್ಲಿ ಕರಗ ಪೂಜೆ ನಡೆಸಿ ಸಾಂಪ್ರದಾಯಿಕವಾಗಿ ದಸರಾಗೆ ಚಾಲನೆ ದೊರೆಯಲಿದ್ದು, ತಾ. ೧೬ ರಂದು ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ೨೪ರ ತನಕ ವೈವಿಧ್ಯಮಯ ಕಾರ್ಯಕ್ರಮಗಳು ಕಲಾ ವೇದಿಕೆಯಲ್ಲಿ ನಡೆಯಲಿವೆ.
ತಾ. ೧೮ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ದಸರಾ ಕವಿಗೋಷ್ಠಿ ನಡೆದು, ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೧೯ ರಂದು ಜಾನಪದ ದಸರಾ, ತಾ. ೨೦ ರಂದು ಮಕ್ಕಳ ದಸರಾ ನಡೆಯಲಿದ್ದು, ಮಕ್ಕಳಿಂದ ಸಂತೆ, ಮಕ್ಕಳಿಂದ ಅಂಗಡಿ, ಮಕ್ಕಳಿಂದ ಮಂಟಪ, ಪ್ಯಾನ್ಸಿ ಡ್ರೆಸ್ ಸ್ಪರ್ಧೆಗಳು ನಡೆದು, ಸಂಜೆ ೬ ಗಂಟೆಯಿAದ ಮಕ್ಕಳಿಂದಲೇ ಸಾಂಸ್ಕೃತಿಕ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಕ್ರಮಗಳು ಆಯೋಜಿತ ಗೊಂಡಿವೆ. ತಾ. ೨೧ ರಂದು ಯುವ ದಸರಾ, ತಾ. ೨೨ ಮಹಿಳಾ ದಸರಾ, ತಾ. ೨೩ ರಂದು ಆಯುಧಪೂಜಾ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೨೪ ರಂದು ವಿಜಯದಶಮಿ ಆಚರಣೆ, ದಶಮಂಟಪ ಮೆರವಣಿಗೆ, ಸಂಜೆ ೭ ಗಂಟೆಯಿAದ ಮರುದಿನ ಬೆಳಿಗ್ಗೆ ೬ ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಉತ್ಸವ ಸಂಪನ್ನಗೊಳ್ಳಲಿದೆ.