ಕೂಡಿಗೆ, ಅ. ೧: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮದ ಯುವಕನೋರ್ವ ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾನೆ. ಶಿರಂಗಾಲದ ಮಂಜುನಾಥ್ ಎಂಬವರ ದ್ವಿತೀಯ ಪುತ್ರ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಡ್ರೆöÊವರ್ ಆಗಿದ್ದ ರಂಜಿತ್ (೨೫) ಮೃತ ದುರ್ದೈವಿ.

ಶಿರಂಗಾಲದಿAದ ಶನಿವಾರ ರಾತ್ರಿ ಕೊಣ ನೂರಿಗೆ ಹೋಗುವಾಗ ರಂಜಿತ್ ಚಾಲಿಸುತ್ತಿದ್ದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಮೃತಪಟ್ಟಿದ್ದಾರೆ.

ಮೃತ ರಂಜಿತ್ ಒಂದು ವಾರದ ರಜೆಯಲ್ಲಿ ಶಿರಂಗಾಲದ ಗ್ರಾಮಕ್ಕೆ ಆಗಮಿಸಿದ್ದರು. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.