*ಗೋಣಿಕೊಪ್ಪ, ಸೆ. ೩೦: ಸದಸ್ಯತ್ವ ಅಭಿಯಾನದ ಮೂಲಕ ಹಾಕಿ ಕೂರ್ಗ್ ಬೆಳವಣಿಗೆಗೆ ಒತ್ತು ನೀಡಲಾಗುವುದು ಎಂದು ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವಕುಮಾರ್ ತಿಳಿಸಿದ್ದಾರೆ.

ನೂತನ ಆಡಳಿತ ಮಂಡಳಿ ರಚನೆಗೊಂಡ ನಂತರ ಹಾಕಿ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಪಂದ್ಯಾವಳಿ ಜೊತೆ ಸದಸ್ಯತ್ವ ಹೆಚ್ಚಿಸಿಕೊಂಡು ಮುಂದುವರಿಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಡಗು ಮೂಲದ ಹಾಕಿ ಪ್ರೇಮಿಗಳಿಗೆ ಸದಸ್ಯತ್ವ ನೀಡಲಾಗುತ್ತದೆ. ಹಾಕಿ ಕೂರ್ಗ್ ಟೂರ್ನಿಗಳನ್ನು ನಡೆಸಲಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಪುರುಷರ ಲೀಗ್ ಹಾಕಿ, ನವೆಂಬರ್ ತಿಂಗಳಿನಲ್ಲಿ ಶಾಲಾ ಮಟ್ಟದ ಹಾಕಿ, ಡಿಸೆಂಬರ್‌ನಲ್ಲಿ ಮಹಿಳಾ ಹಾಕಿ ಲೀಗ್ ನಡೆಸಲಾಗುವುದು ಎಂದು ತಿಳಿಸಿದರು.

ಕ್‌ಗ್ಗಟ್ಟ್ನಾಡ್ ಹಾಕಿ, ಕಾಕೋಟುಪರಂಬುವಿನಲ್ಲಿ ನಡೆಯುವ ಹಾಕಿ ಟೂರ್ನಿ, ಕೊಡವ ಫೆಡರೇಷನ್ ಹಾಕಿ, ಕೊಡವ ಹಾಕಿ ನಮ್ಮೆಗೂ ಕೂಡ ಹಾಕಿ ಕೂರ್ಗ್ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಅಮ್ಮಂಡೀರ ಚೇತನ್ ಮಾತನಾಡಿ, ಹಾಕಿ ಬೆಳವಣಿಗೆಗೆ ಆರ್ಥಿಕ ಕೊರತೆ ಕೂಡ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಕೆಳಮಟ್ಟದಿಂದ ಕ್ರೀಡೆಗೆ ಪ್ರೋತ್ಸಾಹಿಸಲು ಸದಸ್ಯರ ಸಂಖ್ಯೆ ಹೆಚ್ಚಿಸುತ್ತಿದ್ದೇವೆ. ಜನರ ಪ್ರೋತ್ಸಾಹ ಅಗತ್ಯವಾಗಿದೆ. ಸುಮಾರು ೨೫ಕ್ಕೂ ಹೆಚ್ಚು ಹಾಕಿ ಕ್ಲಬ್‌ಗಳು ಕೂಡ ಹಾಕಿ ಕ್ರೀಡೆಗೆ ಬೆಂಬಲವಾಗಿ ನಿಂತಿವೆ. ಬೇಸಿಗೆ ಶಿಬಿರದಲ್ಲಿ ಹಾಕಿ ತರಬೇತಿ, ಮಕ್ಕಳಿಗೆ ಹಾಕಿ ಸ್ಟಿಕ್, ಚೆಂಡು ನೀಡಿ ಅಭ್ಯಾಸಕ್ಕೆ ಅವಕಾಶ ನೀಡುವ ಚಿಂತನೆ ಇದೆ. ನೆಸ್ಟೆ÷್ಲÃ ಹಾಕಿ ಕಪ್ ಸ್ಥಗಿತಗೊಂಡಿರುವುದರಿAದ ಹಾಕಿ ಪ್ರತಿಭೆಗಳಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಮತ್ತೆ ನೆಸ್ಟೆ÷್ಲÃ ಕಪ್ ಅನುಷ್ಠಾನಕ್ಕೆ ಕೂಡ ಚಿಂತನೆ ನಡೆಸಲಾಗುತ್ತಿದೆ ಎಂದರು.

ಉಪಾಧ್ಯಕ್ಷೆ ಮಾಪಂಗಡ ಯಮುನಾ ಚೆಂಗಪ್ಪ ಮಾತನಾಡಿ, ದುಶ್ಚಟಗಳಿಂದ ಹೊರಬರಲು ಮಕ್ಕಳಿಗೆ ವಿಶೇಷ ಕಾರ್ಯಕ್ರಮ ರೂಪಿಸ ಲಾಗುವುದು. ಅತಿಯಾದ ಮೊಬೈಲ್ ಬಳಕೆ ಕೂಡ ಕ್ರೀಡೆಗೆ ಮಾರಕ ವಾಗುತ್ತಿದೆ. ಕಂಪೆನಿಗಳ ಸಹಕಾರ ಪಡೆದು ಜಿಲ್ಲೆಯಲ್ಲಿ ಹಾಕಿಯನ್ನು ಪ್ರೋತ್ಸಾಹಿಸಲಾಗುವುದು ಎಂದರು.

ಖಜಾAಚಿ ಗುಮ್ಮಟ್ಟೀರ ಮುತ್ತಣ್ಣ, ಸಹ ಕಾರ್ಯದರ್ಶಿ ಕೊಕ್ಕಂಡ ರೋಶನ್ ಇದ್ದರು.