ಕರಿಕೆ, ಅ. ೧: ಪರಿಸರ ವನ್ಯಜೀವಿ ಸಂರಕ್ಷಣೆ ಹೆಸರಿನಲ್ಲಿ ಕರ್ನಾಟಕ ಸರಕಾರ ಕೊಡಮಾಡುವ ಮುಖ್ಯಮಂತ್ರಿಗಳ ಪದಕಕ್ಕೆ ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀನಿವಾಸ್ ನಾಯಕ್ ಭಾಜನರಾಗಿದ್ದಾರೆ.
ಕಳೆದ ೧೧.೫ ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇವರು ವಲಯ ಅರಣ್ಯ ಅಧಿಕಾರಿಗಳಾಗಿ ಶ್ರೀಮಂಗಲ ಅರಣ್ಯ ವಲಯದ ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಿಂಗಳಿಕೆ ಕುರಿತು ನಡೆಸಿದ ಸಂಶೋಧನೆ ಅಂತರರಾಷ್ಟಿçÃಯ ಮಟ್ಟದ ಜರ್ನಲ್ನಲ್ಲಿ ದಾಖಲಾಗಿದೆ. ಅಲ್ಲದೇ ಶರಾವತಿ ಅಭಯಾರಣ್ಯದ ಕರೂರು-ತುಮರಿ ಗಸ್ತು ಬಿಟ್ಟು ಹೋದ ಅರಣ್ಯ ಭಾಗವನ್ನು ಪತ್ತೆ ಹಚ್ಚಿ ಸದರಿ ಗಸ್ತು ಪ್ರದೇಶವನ್ನು ಪ್ರಾದೇಶಿಕ ವಿಭಾಗ- ಸಾಗರ ಇವರಿಂದ ೩೧.೨೩ ಚ.ಕಿಮೀ(೩೧೦) ಹೆಕ್ಟೇರ್ ಪ್ರದೇಶವನ್ನು ಮರಳಿ ಅಭಯಾರಣ್ಯಕ್ಕೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ ವನ್ಯಜೀವಿ ವಲಯದಲ್ಲಿ ವಿವಿಧ ವನ್ಯಜೀವಿ ಕಳ್ಳ ಬೇಟೆ ಪ್ರಕರಣಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಇಲಾಖೆಯಲ್ಲಿ ಇವರು ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಪದಕ ಹಾಗೂ ಗೌರವ ಸ್ವೀಕರಿಸಿದರು.