ಪೊನ್ನಂಪೇಟೆ, ಸೆ. ೩೦: ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾಲ ಯವು ೨೫ನೇ ವರ್ಷದ ಯಶಸ್ವಿ ಯಾನದಲ್ಲಿದ್ದು, ಈ ಸಂಭ್ರಮವನ್ನು ಆಚರಿಸಲು ಲೋಗೋ ಅನಾವರಣ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಷ್ಟಿçÃಯ ಭದ್ರತಾ ಪಡೆಯ ಡೈರೆಕ್ಟರ್ ಜನರಲ್ ಎಂ.ಎ. ಗಣಪತಿ ಸಿ.ಐ.ಟಿ. ಕಾಲೇಜಿನ ಬೆಳ್ಳಿ ಮಹೋತ್ಸವದ ಲೋಗೋ ಅನಾವರಣ ಮಾಡಿದರು. ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಆತ್ಮವಿಶ್ವಾಸದ ಮೇಲೆ ನಿಮಗೆ ನಂಬಿಕೆ ಇರಬೇಕು. ಪರಿಶ್ರಮ ಯಾವತ್ತು ನಿಮ್ಮ ಕೈ ಬಿಡುವುದಿಲ್ಲ. ದೃಢವಾದ ನಂಬಿಕೆ, ಪ್ರಯತ್ನಗಳ ಮೂಲಕ ನಿಮ್ಮ ಕನಸು, ಗುರಿಯನ್ನು ಸಾಧಿಸಲು ಪ್ರಯತ್ನಿಸ ಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೊಡವ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಮಾತನಾಡಿ, ಸಾಧನೆ ಮಾಡಲು ಇಚ್ಛಾಶಕ್ತಿ ಮುಖ್ಯ. ಸಾಧನೆಗೆ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಅಡ್ಡಿಯಾಗುವುದಿಲ್ಲ. ಗುರಿಯ ಬೆನ್ನೇರಿ ಅವಿರತ ಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಬೇಕು ಎಂದರು.

ಸಿ.ಐ.ಟಿ. ಕಾಲೇಜು ಪ್ರಾಂಶುಪಾಲ ಡಾ. ಎಂ. ಬಸವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿ.ಐ.ಟಿ. ಕಾಲೇಜಿನ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಸಂಚಾಲಕಿ ಹಾಗೂ ಸಿ.ಐ.ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭ ಕೊಡವ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ, ಖಜಾಂಚಿ ಕೆ.ಎನ್. ಜಾಜಿ ಉತ್ತಪ್ಪ, ಕೊಡವ ಎಜುಕೇಷನ್ ಸೊಸೈಟಿಯ ನಿರ್ದೇಶಕರು, ಸದಸ್ಯರು, ಸಿ.ಐ.ಟಿ. ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕ ವೃಂದ, ಸಿ.ಐ.ಪಿ.ಯು.ಸಿ. ಉಪನ್ಯಾಸಕ ವೃಂದ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಪ್ರಮುಖ್ ಗಣಪತಿ ಪ್ರಾರ್ಥಿಸಿ, ಆಂಗ್ಲಭಾಷಾ ಪ್ರಾಧ್ಯಾಪಕಿ ಕಾವೇರಿ ಚಂಗಪ್ಪ ಸ್ವಾಗತಿಸಿ, ರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕಿ ಪ್ರಕೃತಿ ವಂದಿಸಿ, ಆಂಗ್ಲ ಉಪನ್ಯಾಸಕಿ ಕೆ.ಎ. ಕಾವ್ಯಶ್ರೀ ನಿರೂಪಿಸಿದರು.