ಶ್ರೀಮಂಗಲ, ಅ. ೧: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨- ೨೩ನೇ ಸಾಲಿನಲ್ಲಿ ರೂ. ೬೯.೫೨ ಕೋಟಿ ವ್ಯವಹಾರ ನಡೆಸಿದ್ದು, ರೂ. ೧೩.೪೭ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅವರು ವಿವರಿಸಿದರು.

ಸಂಘದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ೧೫೬೮ ಅರ್ಹ ಸದಸ್ಯರ ಪೈಕಿ ೯೮೨ ಜನ ಸದಸ್ಯರು ಸಾಲದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಮತ್ತು ಕೃಷಿಯೇತರ ಸಾಲವಾಗಿ ಒಟ್ಟು ರೂ.೧೦.೫೧ ಕೋಟಿ ಸಾಲವನ್ನು ಸಂಘದಿAದ ವಿತರಿಸಲಾಗಿದೆ ಎಂದು ತಿಳಿಸಿದರು. ಕೇಂದ್ರ ಬ್ಯಾಂಕ್ ಷೇರು ರೂ. ೪೨.೨೮ ಲಕ್ಷ ಹೊಂದಿದ್ದು, ಕ್ಷೇಮ ನಿಧಿ ರೂ.೪೨.೬೨ ಲಕ್ಷವಿರುತ್ತದೆ ಎಂದು ತಿಳಿಸಿದರು.

ಸಂಘದಲ್ಲಿ ಪ್ರಸಕ್ತ ವರ್ಷ ರೂ. ೧.೫೮ ಕೋಟಿ ಮೌಲ್ಯದ ರಸಗೊಬ್ಬರ ವನ್ನು ಮಾರಾಟ ಮಾಡಲಾಗಿರುತ್ತದೆ. ಬಾಡಗರಕೇರಿ (ಪೊರಾಡು) ಗ್ರಾಮದಲ್ಲಿ ನೂತನ ಗೋದಾಮು ಕಟ್ಟಡ ನಿರ್ಮಿಸಲಾಗಿದ್ದು, ಇಲ್ಲಿ ಈಗಾಗಲೇ ಆ ಭಾಗದ ಸಂಘದ ಸದಸ್ಯರಿಗೆ ರಸಗೊಬ್ಬರ ಪೂರೈಕೆ ಅನುಕೂಲ ಕಲ್ಪಿಸಲಾಗಿದೆ. ಕಚೇರಿ ಕಟ್ಟಡದ ಈ ಸಭಾಂಗಣವನ್ನು ದುರಸ್ತಿಪಡಿಸ ಲಾಗಿರುತ್ತದೆ. ಪೊರಾಡು ಕಟ್ಟಡ ನಿವೇಶನ ೦.೬೦ ಸೆಂಟ್ ಜಾಗದ ದಾಖಲೆಯನ್ನು ಸಂಘದ ಹೆಸರಿಗೆ ವರ್ಗಾಯಿಸಲಾಗಿದೆ. ಸಂಘದ ಬಿರುನಾಣಿ ಕಚೇರಿ ಕಟ್ಟಡದ ಜಾಗವು ೦.೨೦ ಸೆಂಟ್ ಇದ್ದು, ಇದನ್ನು ಸಂಘದ ಹೆಸರಿಗೆ ವರ್ಗಾಯಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಮಾಹಿತಿ ನೀಡಿದರು. ಸಹಕಾರ ಸಂಘದ ಆಡಳಿತ ಮಂಡಳಿಯಿAದ ಮುಂಬೈಗೆ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಕೆ. ಸುಬ್ರಮಣಿ, ಆಡಳಿತ ಮಂಡಳಿ ಸದಸ್ಯರಾದ ಕೆ.ಎಂ. ಸುನಿಲ್, ಎಂ.ಬಿ. ಮಂಜುನಾಥ್, ಬಿ.ಎಂ. ಸಂಪತ್, ಬಿ.ಕೆ. ನಾರಾಯಣ, ಕೆ.ಬಿ. ಕುಶಾಲಪ್ಪ, ಎ.ಎನ್. ಗಣೇಶ್, ಪಿ.ಬಿ. ಚೋಟು, ಹೆಚ್.ಎ. ಶಾರದ, ಕೆ.ಆರ್. ಮಧುರ, ಕೆ.ಡಿ. ನಂಜಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಭಾರತಿ ಹಾಜರಿದ್ದರು.