ಮಡಿಕೇರಿ, ಅ. ೧: ಹೆಬ್ಬಾಲೆ ಗ್ರಾಮದ ಬನಶಂಕರಿ ಬಡಾವಣೆಯಲ್ಲಿ ಯುವಕ ಸಂಘದಿAದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜೇಂಕಾರ್ ರಸಮಂಜರಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಮಾರಂಭದಲ್ಲಿ ದಾನಿಗಳಾದ ರಾಜಶೇಖರ್ ಮಾತನಾಡಿ, ಬನಶಂಕರಿ ಬಡಾವಣೆಯ ಯುವಕ ಸಂಘ ಅದ್ಧೂರಿಯಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದೆ. ಇದು ಹಿಂದೂಗಳ ಹಬ್ಬವಾಗಿದೆ. ಗೌರಿ -ಗಣೇಶ ಎಲ್ಲರಿಗೂ ಶುಭ ಶಾಂತಿಯನ್ನು ನೀಡಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್, ಮಾಜಿ ಉಪಾಧ್ಯಕ್ಷ ಮಂಜುನಾಥ್, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ, ಶಿಕ್ಷಕ ಲೋಕೇಶ್, ಮಧುಸೂದನ್, ಸಂಘದ ಸದಸ್ಯರಾದ ಚಂದ್ರು, ಚಂದ್ರಶೇಖರ್ ಮುಂತಾದ ಗಣ್ಯರು ಭಾಗವಹಿಸಿದ್ದರು.