ಮಡಿಕೇರಿ, ಅ. ೧: ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಈ ಹಿಂದೆ ಪ್ರಾರಂಭಿಸಿದ್ದ ಬಿ.ಸಿ.ಎಂ. ಬಾಲಕರ ಹಾಸ್ಟೆಲ್ ಇದೀಗ ಶಿಥಿಲಾವಸ್ಥೆಯಲ್ಲಿದ್ದು, ದಿವ್ಯ ನಿರ್ಲಕ್ಷö್ಯದಿಂದಾಗಿ ಈ ಯೋಜನೆ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.
೧೯೮೬-೮೭ರಲ್ಲಿ ಪ್ರಾರಂಭಿಸಲಾದ ಈ ಹಾಸ್ಟೆಲ್ ಕಟ್ಟಡ ಇದೀಗ ಸಂಪೂರ್ಣ ಕಾಡು ಪಾಲಾಗಿದ್ದು, ಇಂದೋ ನಾಳೆಯೋ ಧರಾಶಾಹಿಯಾಗುವ ಹಂತದಲ್ಲಿದೆ. ಆರಂಭದ ದಿನಗಳಿಂದಲೂ ಈ ಯೋಜನೆ ಕುಂಟುತ್ತಾ ಮುಂದುವರಿದಿತ್ತು. ಸುಮಾರು ೪೦ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವಿರುವ ಕಟ್ಟಡ ಇದಾಗಿತ್ತಾದರೂ, ಹಲವಾರು ಸಮಸ್ಯೆಗಳಿಂದಾಗಿ ಇದು ಸೂಕ್ತವಾಗಿ ಮುನ್ನಡೆಯಲೇ ಇಲ್ಲ. ಕೇವಲ ೧೦-೨೦ ವಿದ್ಯಾರ್ಥಿಗಳು ಮಾತ್ರ ಇಲ್ಲಿ ಈ ಹಿಂದೆ ದಾಖಲಾಗಿದ್ದರು. ಇದೀಗ ಸುಮಾರು ಹನ್ನೆರಡು ವರ್ಷಗಳಿಂದ ಈ ಹಾಸ್ಟೆಲ್ ಸಂಪೂರ್ಣ ರೀತಿಯಲ್ಲಿ ಇಲ್ಲದಂತಾಗಿದೆ. ಕಟ್ಟಡಕ್ಕೆ ಬೀಗ ಜಡಿಯಲ್ಪಟ್ಟಿದ್ದು, ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ಪ್ರಸ್ತುತ ಸರಕಾರದ ಯೋಜನೆಯ ಈ ಕಟ್ಟಡ ಕಾಡು ಪಾಲಾಗಿದ್ದು, ಸಂಬAಧಿಸಿದವರ ನಿರ್ಲಕ್ಷö್ಯದಿಂದಾಗಿ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ಈ ಹಾಸ್ಟೆಲ್ ನಿರ್ಮಾಣಕ್ಕೆ ಈ ಹಿಂದೆ ಅಲ್ಲಿನ ಸ್ಥಳೀಯರಾದ ದಿವಂಗತ ಗಂಗಾಧರಪ್ಪ (ಮರಿಸ್ವಾಮಿ) ಅವರ ಸ್ಮರಣಾರ್ಥ ಅವರ ಪತ್ನಿ ಚೆನ್ನ ಗೌರಮ್ಮ ಕುಟುಂಬದವರು ಅರ್ಧ ಎಕರೆ ಜಾಗವನ್ನು ಉದಾರವಾಗಿ ನೀಡಿದ್ದರು.
ಆರಂಭದ ದಿನಗಳಲ್ಲಿ ಕಟ್ಟಡ ಅಗತ್ಯ ಸೌಲಭ್ಯದೊಂದಿಗೆ ಕಾರ್ಯನಿರ್ವಹಿಸಿತ್ತಾದರೂ ನಂತರದಲ್ಲಿ ಸಂಬAಧಿಸಿದ ಅಧಿಕಾರಿಗಳ ದಿವ್ಯ ನಿರ್ಲಕ್ಷö್ಯದಿಂದಾಗಿ ವಿದ್ಯಾರ್ಥಿಗಳ ಕೊರತೆ ಎದುರಿಸಿತ್ತು. ಇದರ ಪಕ್ಕದಲ್ಲೇ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಗೆ ಒಸಾರ್ಟ್ ಸಂಸ್ಥೆಯವರು ನಾಲ್ಕು ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದು, ಇದು ಉತ್ತಮ ರೀತಿಯಲ್ಲಿದೆ. ಆದರೆ, ಹಿರಿಯ ಪ್ರಾಥಮಿಕ ಶಾಲೆಗೆ ಕಪ್ಪುಚುಕ್ಕೆ ಎಂಬAತೆ ಅದರ ಪಕ್ಕದಲ್ಲೇ ಈ ಬಿ.ಸಿ.ಎಂ. ಹಾಸ್ಟೆಲ್ ಕಟ್ಟಡ ಕಾಡು ಪಾಲಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಕಾಡು ಆವರಿಸಿರುವುದರಿಂದ ವಿಷ ಜಂತುಗಳು ಇಲ್ಲಿ ಸೇರಿಕೊಂಡಿವೆ. ಇದರಿಂದಾಗಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಪ್ರಸ್ತುತ ಬಿ.ಸಿ.ಎಂ. ಇಲಾಖೆ ಇದನ್ನು ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದ್ದರೂ, ಗ್ರಾ.ಪಂ. ಕೂಡ ನಿರ್ಲಕ್ಷö್ಯ ವಹಿಸಿದೆ. ಅನುದಾನ ಕೊರತೆಯ ನಡುವೆ ಗ್ರಾ.ಪಂ.ಗೂ ಇದರ ನಿರ್ವಹಣೆ ಹೊರೆಯಾಗುವುದರಲ್ಲಿ ಸಂಶಯವಿಲ್ಲ.
ನಿರುಪಯುಕ್ತ ಕಟ್ಟಡವನ್ನು ತೆರವುಗೊಳಿಸಿ ಇದನ್ನು ಸನಿಹದ ಶಾಲೆಗಾದರೂ ಹಸ್ತಾಂತರಿಸಿದಲ್ಲಿ ಅದು ಒಂದಷ್ಟು ಪ್ರಯೋಜನವಾದರೂ ಆಗಬಹುದು. ಈ ನಡುವೆ ಜಾಗ ದಾನವಾಗಿ ನೀಡಿದವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಸದರಿ ಜಾಗವನ್ನು ಮರಳಿ ಪಡೆಯಲು ಉತ್ಸುಕರಾಗಿದ್ದಾರೆ.
ಸಂಬAಧಪಟ್ಟ ಇಲಾಖೆಯವರು ಅಥವಾ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಗಮನ ಹರಿಸಿ ಇದಕ್ಕೊಂದು ಪರಿಹಾರ ಕಲ್ಪಿಸಬೇಕಾಗಿದೆ.
- ಸಣ್ಣುವಂಡ ಯಂ. ವಿಶ್ವನಾಥ್.