ಮಡಿಕೇರಿ ಸೆ. ೩೦ : ಚೀನಾದ ಹ್ಯಾಂಗ್ಝಾದಲ್ಲಿ ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ ಆರು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಇವರ ಪೈಕಿ ಇಬ್ಬರು ದೇಶಕ್ಕೆ ಪದಕ ತಂದುಕೊಟ್ಟು ಸಾಧನೆ ತೋರಿದ್ದಾರೆ.
ದೇಶದ ಖ್ಯಾತ ಟೆನ್ನಿಸ್ ಪಟು ವಾಗಿರುವ ಮಾದಾಪುರ ಮೂಲದ ವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಟೆನ್ನಿಸ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ತಮ್ಮ ಸಹವರ್ತಿ ಋತುಜಾ ಜೋಡಿ ಯೊಂದಿಗೆ ಇಂದು ನಡೆದ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುz Àರೊಂದಿಗೆ ದೇಶಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಇವರೊಂದಿಗೆ ಮೂಲತಃ ಪಾಲಿ ಬೆಟ್ಟದವರಾದ ಹೆಸರಾಂತ ಸ್ಕಾ÷್ವಷ್ ತಾರೆ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಸ್ಕಾ÷್ವಷ್ನ ‘ಟೀಮ್ ಈವೆಂಟ್’ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಈ ಮೂಲಕ ಭಾರತವು ಪ್ರಸ್ತುತ ೩೬ ಪದಕಗಳನ್ನು ಗಳಿಸಿದೆ, ಇದರಲ್ಲಿ ಒಟ್ಟು ೧೦ ಚಿನ್ನ, ೧೩ ಬೆಳ್ಳಿ ಹಾಗೂ ೧೩ ಕಂಚಿನ ಪದಕಗಳಾಗಿವೆ.
ರೋಹನ್ ಋತುಜಾ ಜೋಡಿಗೆ ಒಲಿದ ಚಿನ್ನ
ರೋಹನ್ ಬೋಪಣ್ಣ ಹಾಗೂ ಋತುಜಾ ಭೋಸ್ಲೆ ಜೋಡಿಯು ಚೈನೀಸ್ ಟೈಪೈ ವಿರುದ್ಧದ ಚಿನ್ನದ ಪದಕದ ಪಂದ್ಯದಲ್ಲಿ ಮೊದಲ ಸೆಟ್ನಲ್ಲಿ ಸೋಲನುಭವಿಸಿದರೂ ಎರಡನೆ ಸೆಟ್ ಹಾಗೂ ನಂತರದ ಟೈ ಬ್ರೇಕರ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕದ ಸಾಧನೆ ಮಾಡಿತು. ಮೊದಲ ಸೆಟ್ನಲ್ಲಿ ೨-೬ ಪಾಯಿಂಟ್ಗಳ ಮೂಲಕ ಸೋತರೂ ೨ನೇ ಸುತ್ತಿನಲ್ಲಿ ರೋಹನ್ ಹಾಗೂ ಋತುಜಾ ೬-೩ ರಿಂದ ಗೆದ್ದು ಟೈ ಬ್ರೇಕರ್ ಹಂತ ಪ್ರವೇಶಿಸಿದರು. ಟೈ ಬ್ರೇಕರ್ನಲ್ಲಿ ೧೦-೪ ಅಂಕಗಳ ಮೂಲಕ ಭರ್ಜರಿ ಜಯಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಜೋಶ್ನಾಗೆ ಸ್ಕಾ÷್ವಷ್ ‘ಟೀಮ್ ಈವೆಂಟ್’ನಲ್ಲಿ ಕಂಚು
ಜೋಶ್ನಾ, ತಾನ್ವಿ ಖನ್ನಾ ಹಾಗೂ ಅನಾಹತ್ ಸಿಂಗ್ - ೩ ಮಂದಿಯನ್ನೊಳಗೊAಡ ಭಾರತೀಯ ಸ್ಕಾ÷್ವಷ್ ತಂಡವು ಸೆಮಿಫೈನಲ್ನಲ್ಲಿ ಹಾಂಗ್-ಕಾAಗ್ ವಿರುದ್ಧ ಸೋಲನುಭವಿಸಿತು. ಈ ಸ್ಪರ್ಧೆಯಲ್ಲಿ ಸೆಮಿಫೈನಲ್ನಲ್ಲಿ ಸೋಲುವ ತಂಡಗಳಿಗೆ ಕಂಚು ನೀಡುವ ಕಾರಣ ಇವರು ಈ ಪದಕಕ್ಕೆ ತೃಪ್ತರಾದರು. ‘ಟೀಮ್ ಈವೆಂಟ್’ ಆದ ಕಾರಣ ಜೋಶ್ನಾ ಮೊದಲು ಹಾಂಗ್-ಕಾAಗ್ ಎದುರಾಳಿ ವಿರುದ್ಧ ೩-೨ ಅಂಕಗಳ ಮೂಲಕ ಗೆದ್ದಿದ್ದರಾದರೂ ತಾನ್ವಿ ಹಾಗೂ ಅನಾಹತ್ ಇಬ್ಬರೂ ಸೋಲನುಭವಿಸಿದ ಕಾರಣ ತಂಡವು ಫೈನಲ್ ಪ್ರವೇಶಿಸಲು ವಿಫಲವಾಗಿ ಕಂಚನ್ನು ಪಡೆದುಕೊಂಡಿತು.