ಮಡಿಕೇರಿ, ಸೆ. ೩೦ : ರಾಷ್ಟಿçÃಯ ಮಟ್ಟದ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಾವಳಿ ಆಗಿರುವ ಪ್ರತಿಷ್ಠಿತ ಇರಾನಿ ಕಪ್‌ಗೆ ‘ಭಾರತ ಇತರೆ’ ತಂಡಕ್ಕೆ ಕೊಡಗಿನವರಾದ ಯುವ ಕ್ರಿಕೆಟಿಗ ವೇಗದ ಬೌಲರ್ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರು ಆಯ್ಕೆಯಾಗಿದ್ದಾರೆ. ರಣಜಿ ಸೇರಿದಂತೆ ಹಲವು ದೇಶೀಯ ಪಂದ್ಯಾವಳಿಗಳಲ್ಲಿ ಉತ್ತವi ಪ್ರದರ್ಶನ ನೀಡಿರುವ ಹಾಗೂ ಐ.ಪಿ.ಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಇವರು ಇದೀಗ ಈ ಸಾಲಿನ ರಣಜಿ ಟ್ರೋಫಿ ವಿಜೇತ ತಂಡವಾದ ಸೌರಾಷ್ಟçದೊಂದಿಗೆ ನಡೆಯಲಿರುವ ಇರಾನಿ ಕಪ್ ಟೆಸ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇಂದಿನಿAದ (ತಾ.೧ ರಿಂದ) ಗುಜರಾತಿನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ‘ಭಾರತ ಇತರೆ’ ತಂಡದ ನಾಯಕರಾಗಿ ಭಾರತ ತಂಡದ ಪರ ಹಲವು ಟೆಸ್ಟ್ ಪಂದ್ಯಾವಳಿಗಳನ್ನು ಆಡಿರುವ ಹನುಮ ವಿಹಾರಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಐ.ಪಿ.ಎಲ್ ಸೇರಿದಂತೆ ಇತರ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಭಾಗಿಯಾಗಿದ್ದಾರೆ.