ಮಡಿಕೇರಿ, ಸೆ. ೩೦: ಮೂರ್ನಾಡು ಶ್ರೀ ಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಡಾ. ಮಹಾಭಲೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಅ.೨ರ ಬೆಳಿಗ್ಗೆ ೧೦ ಗಂಟೆಗೆ ಸುಗುಣ ಕಾಂಪ್ಲೆಕ್ಸ್ ೩ನೇ ಮಹಡಿ ಮಾರ್ಕೆಟ್ ರಸ್ತೆ ಮೂರ್ನಾಡು, ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದ ಪ್ರಕಟಣೆ ತಿಳಿಸಿದೆ.