ಮಡಿಕೇರಿ, ಸೆ. ೨೯: ಶತಾಯುಷಿ ದಿವಂಗತ ಕಾಳಪ್ಪ ಅವರ ಪತ್ನಿ ಸಣ್ಣುವಂಡ ಕಾವೇರಮ್ಮ (ತಾಮನೆ-ಅರಮಣಮಾಡ) ಅವರನ್ನು ಅವರ ಮಗ ಪಾಂಡು ಉತ್ತಯ್ಯ ಅವರ ನಿವಾಸದಲ್ಲಿ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯ ನಿರ್ದೇಶಕ ನೆರಿಯಂಡಮ್ಮನ ಸುಬ್ರಮಣಿ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಚೇಂದಿರ ಎಂ. ಬೋಪಣ್ಣ, ಕಾರ್ಯದರ್ಶಿ ಚೆಕ್ಕೆರ ಸನ್ನಿ ಸುಬ್ಬಯ್ಯ, ಸಂಸ್ಥಾಪಕ ಅಧ್ಯಕ್ಷರು ಮತ್ತು ಚೀಫ್ ಪ್ಯಾಟ್ರನ್ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಸ್ಥಾಪಕ ಜೀವಾವಧಿ ಅಧ್ಯಕ್ಷ ಕೊಟ್ಟುಕತ್ತಿರ ಪಿ. ಸೋಮಣ್ಣ, ಅಧ್ಯಕ್ಷೆ ಮಾಚಿಮಾಡ ಲೌಲಿ ಸೋಮಯ್ಯ, ನಿರ್ದೇಶಕಿ ಮಾಣಿಪಂಡ ಪಾರ್ವತಿ ಜೋಯಪ್ಪ, ನಿರ್ದೇಶಕಿ ಕೇಚಟಿರ ಕಾಮುಣಿ ಪೂಣಚ್ಚ, ನಿರ್ದೇಶಕಿ ಸಣ್ಣುವಂಡ ನೀಲಮ್ಮ ಹಾಗೂ ಇತರರು ಹಾಜರಿದ್ದರು.