ಮಡಿಕೇರಿ, ಸೆ. ೨೯: ಶ್ರೀ ಕಾಳಿಕಾಂಬ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ ಲಿಂಗಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿದ್ದು, ಎಲ್ಲರ ಸಂಪೂರ್ಣ ಸಹಕಾರ ಬೇಕೆಂದರು. ಸಂಸ್ಥೆಯ ಉಪಾಧ್ಯಕ್ಷ ಕಾಂತರಾಜು ಅವರು ಮಾತನಾಡಿ, ಎಲ್ಲರ ಸಹಕಾರವನ್ನು ಪಡೆದು ಸಂಘದ ಅಭಿವೃದ್ಧಿಗಾಗಿ ಹೋರಾಡಬೇಕೆಂದರು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ನಾಗರಾಜು ಅವರು ಓದಿದರು. ಪ್ರಾರ್ಥನೆಯನ್ನು ಶೋಬಾರಾಣಿ, ನಿರೂಪಣೆ, ಸ್ವಾಗತ, ವಂದನಾರ್ಪಣೆಯನ್ನು ಲೋಕೇಶ್ ಆಚಾರ್ಯ ನೆರವೇರಿಸಿದರು.