ಮಡಿಕೇರಿ, ಸೆ. ೨೯: ಯಾತ್ರಾರ್ಥಿಗಳಿಗೆ ಈ ರಸ್ತೆ ದುಸ್ತರ ಹಾಗೂ ದುರ್ಗಮ. ಭಾಗಮಂಡಲ ಪಟ್ಟಣದಲ್ಲಿ ವಾಹನಗಳಲ್ಲಿ ಸಂಚರಿ ಸುವುದು ಅಪಾಯಕ್ಕೆ ಆಹ್ವಾನ ನೀಡು ವಂತಿದೆ. ಎಲ್ಲಿ ಎತ್ತ ಸಾಗಬೇಕೆ ನ್ನುವುದೇ ಗೊತ್ತಾಗದೆ ವಾಹನಗಳು ಅತ್ತಿಂದಿತ್ತ ಸಾಗುತ್ತಿರುವುದನ್ನು ಇಂದು “ಶಕ್ತಿ” ಖುದ್ದಾಗಿ ಗಮನಿಸಿದೆ. ಭಾಗಮಂಡಲದಿAದ ತಲಕಾವೇರಿಗೆ ಮಾರ್ಗ ಯಾವದೆಂದೇ ಗೊತ್ತಾಗ ದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಕನಿಷ್ಟ ಪಕ್ಷ ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ಮಾರ್ಗದರ್ಶಿ ಫಲಕಗಳನ್ನು ಅಳವಡಿಸುವುದು ಅತ್ಯಗತ್ಯ.
ಒಂದೆಡೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಇಡೀ ಭಾಗಮಂಡಲ ಕೆಸರಿನ ಕೊಂಪೆಯAತೆ ಕಾಣುತ್ತಿದೆ. ಅಲ್ಲಲ್ಲಿ ಮಣ್ಣಿನ ರಾಶಿಯನ್ನು ಪೇರಿಸಿ ಜೋರಾಗಿ ಮಳೆ ಬಂದರೆ ಇರುವಂತಹ ಕಿರಿದಾದ ದಾರಿಗೇ ಮಣ್ಣಿನ ರಾಶಿ ತೇಲಿ ಬರಲಿದೆ. ರಸ್ತೆ ಸಂಚಾರಕ್ಕೇ ಧಕ್ಕೆಯಾಗು ವಂತಹ ಸಾಧ್ಯತೆಯಿದೆ. ಇಂದು ವಾರಾಂತ್ಯದ ದಿನವೇ ಪ್ರವಾಸಿಗರ ಸಂಖ್ಯೆ ಸಾಕಷ್ಟಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಕಾವೇರಿ ಜಾತ್ರೆ ಸಂದರ್ಭ ಸಾವಿರಾರು ಜನ ಸೇರುವಾಗ, ವಾಹನಗಳ ದಟ್ಟಣೆ ಹೆಚ್ಚಾದಾಗ ಖಂಡಿತವಾಗಿ ನಿಯಂತ್ರಣ ಮಾಡುವುದು ತ್ರಾಸದಾಯಕ. ಅದೂ ಈ ಬಾರಿ ಮಧ್ಯರಾತ್ರಿ ಬಳಿಕ ತಲಕಾವೇರಿಯಲ್ಲಿ ತೀರ್ಥೋದ್ಭವ ವಾಗುತ್ತಿರುವುದರಿಂದ ರಾತ್ರಿ ವೇಳೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಗೊಳ್ಳಬಹುದು. ಕೇವಲ ಮೇಲ್ಸೇತುವೆ ಕೆಲಸದಿಂದ ಮಾತ್ರ ಈ ದುರವಸ್ಥೆ ಯುಂಟಾಗಿಲ್ಲ. ಇದರೊಂದಿಗೆ ಭಾಗಮಂಡಲದ ರಸ್ತೆಗಳೂ ಪೂರ್ಣ ಹದಗೆಟ್ಟಿವೆ. ಮಡಿಕೇರಿಯಿಂದ ಭಾಗಮಂಡಲದವರೆÀಗಿನ ರಸ್ತೆಯೂ ಅಲ್ಲಲ್ಲಿ ಬೃಹತ್ ಗುಂಡಿಗಳಿAದ ಅಪಾಯವನ್ನು ಆಹ್ವಾನಿಸುವಂತಿದೆ. ಜಾತ್ರೆ ಸಂದರ್ಭ ಕನಿಷ್ಟ ಪ್ರಮಾಣ ದಲ್ಲಿಯಾದರೂ ಇದನ್ನು ಸರಿಪಡಿಸ ದಿದ್ದರೆ ಭಕ್ತಾದಿಗಳಿಗೆ ಸಂಕಷ್ಟ ಎದುರಾ ಗಬಹುದು. ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತುಕೊಳ್ಳದೆ ತಕ್ಷಣ ಕಾರ್ಯೋ ನ್ಮುಖವಾಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
(ಮೊದಲ ಪುಟದಿಂದ) ಮೇಲ್ಸೇತುವೆ ಕೆಲಸ ಗುತ್ತಿಗೆದಾರ ಸಂಸ್ಥೆಗೆ ಸಂಬAಧಿಸಿದ್ದಾದರೂ ತಾತ್ಕಾಲಿಕವಾಗಿ ಪಿಡಬ್ಲುö್ಯಡಿ ಮಧ್ಯೆ ಪ್ರವೇಶಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ದಾರಿ ಬದಿ ರಾಶಿ ಮಾಡಲ್ಪಟ್ಟಿರುವ ಮಣ್ಣನ್ನು ತಕ್ಷಣ ಬೇರೆಡೆಗೆ ಸಾಗಿಸುವ ಮೂಲಕ ವಾಹನ ಪ್ರಯಾಣಿಕರಿಗೆ ರಕ್ಷಣೆ ಕಲ್ಪಿಸಬೇಕಾಗಿದೆ. ಪಾದಚಾರಿಗಳಿಗೂ ನಡೆಯಲಾಗದ ದುಸ್ಥಿತಿಯನ್ನು ದೂರ ಮಾಡಬೇಕಿದೆ. ಭಾಗಮಂಡಲದಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ನಿರ್ಣಯವಾದಂತೆ ಕಾರ್ಯ ನಿರ್ವಹಿಸಬೇಕಿದೆ. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಸಹಯೋಗದೊಂದಿಗೆ ದಾರಿ ಬದಿ ರಸ್ತೆಗೆ ಬೀಳಬಹುದಾದ ಮರಗಳನ್ನು ಹಾಗೂ ಕೊಂಬೆಗಳನ್ನು ತಕ್ಷಣ ಕಡಿತಲೆಗೊಳಿಸುವ ಕಾರ್ಯಾರಂಭಗೊಳ್ಳಬೇಕಿದೆ. ಜಾತ್ರೆಗೆ ಇನ್ನು ಕೇವಲ ೧೭ ದಿನ ಬಾಕಿಯಿದ್ದು ಇಲಾಖೆಗಳು ಶೀಘ್ರ ಕೆಲಸ ನಿರ್ವಹಿಸುವಂತೆ ನಾಗರಿಕರು ಕೋರಿದ್ದಾರೆ. ಈ ದಿಸೆಯಲ್ಲಿ ಇಲಾಖೆಗಳಿಗೆ ಜಿಲ್ಲಾಧಿಕಾರಿಯವರು ತುರ್ತಾಗಿ ಸೂಕ್ತ ನಿರ್ದೇಶನ ನೀಡಬೇಕಿದೆ. -“ಚಕ್ರವರ್ತಿ”