ಮಡಿಕೇರಿ, ಸೆ. ೨೯: ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬAಧಿಸಿ ದಂತೆ ಶುಕ್ರವಾರದಂದು ಕರೆ ನೀಡ ಲಾಗಿದ್ದ ಕರ್ನಾಟಕ ಬಂದ್ ಕರೆಗೆ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿತು.
ಜಿಲ್ಲೆಯಾದ್ಯAತ ಇಂದು ಬಸ್, ವಾಹನಗಳ ಸಂಚಾರ, ಜನಜೀವನ ಎಂದಿನAತೆ ಸಹಜವಾಗಿತ್ತು. ಸರಕಾರಿ ಕಚೇರಿಗಳು, ಶಾಲಾ - ಕಾಲೇಜುಗಳು ಕೂಡ ಮಾಮೂಲಿಯಂತೆ ಕಾರ್ಯನಿರ್ವಹಿಸಿದವು. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಸಹಜ ಸ್ಥಿತಿ ಮುಂದುವರಿದಿತ್ತು. ಕುಶಾಲನಗರದಲ್ಲಿ ಮಾತ್ರ ಬಿಜೆಪಿ ಪಕ್ಷ ಹಾಗೂ ಕರ್ನಾಟಕ ಕಾವಲು ಪಡೆಯ ವತಿಯಿಂದ ಸಾಂಕೇತಿಕ ಪ್ರತಿಭಟನೆ ಮೂಲಕ ಬೆಂಬಲ ಸೂಚಿಸಲಾಯಿತು. ಇದನ್ನು ಹೊರತುಪಡಿಸಿದರೆ, ಕುಶಾಲನಗರದಲ್ಲೂ ಎಂದಿನAತೆ ಸಹಜ ಸ್ಥಿತಿ ಮುಂದುವರಿದಿತ್ತು. ಗೋಣಿಕೊಪ್ಪದಲ್ಲಿ ರೈತ ಸಂಘದಿAAದ ಪ್ರತಿಭಟನೆ ನಡೆಯಿತು.
ಜಿಲ್ಲೆಯಿಂದ ಕಾರ್ಯಾಚರಿಸುವ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಗಳು ಎಂದಿನAತೆ ಸಂಚರಿಸಿವೆ. ಆದರೆ ಜಿಲ್ಲೆಯಿಂದ ಮೈಸೂರು ಬೆಂಗಳೂರು ಕಡೆಗೆ ತೆರಳಿದ ಕೆಲವು ಬಸ್ಗಳು ಮೈಸೂರು, ಚಾಮ ರಾಜನಗರ ಮತ್ತಿತರ ಕಡೆಗಳಲ್ಲಿ ಪ್ರಯಾಣ ಮುಂದುವರಿಸದೆ ಸ್ಥಗಿತಗೊಂಡಿದ್ದವು. ಆದರೆ ಜಿಲ್ಲೆಯಲ್ಲಿ ಆಂತರಿಕವಾಗಿ
(ಮೊದಲ ಪುಟದಿಂದ) ಯಾವುದೇ ತೊಂದರೆಗಳಿಲ್ಲದೆ ಎಂದಿನAತೆ ಕಾರ್ಯಾಚರಿಸಿರುವುದಾಗಿ ಪುತ್ತೂರು ಘಟಕದ ಸಂಚಾರಿ ನಿಯಂತ್ರಕ ಮುರಳೀಧರ್ ಆಚಾರ್ಯ ಹಾಗೂ ಮಡಿಕೇರಿ ಘಟಕದ ಪ್ರಬಾರ ವ್ಯವಸ್ಥಾಪಕರಾದ ಮೆಹಬೂಬ್ ಆಲಿ ಅವರು ತಿಳಿಸಿದರು. ಖಾಸಗಿ ಬಸ್ಗಳು ಎಂದಿನAತೆ ಸಂಚರಿಸಿವೆ. ಆದರೆ ಈ ದಿನ ಪ್ರಯಾಣಿಕರ ಸಂಖ್ಯೆ ತುಸು ವಿರಳವಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು ಸಂತೆ ದಿನವಾಗಿದ್ದು, ಸಂತೆಯೂ ಸಹಜ ರೀತಿಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಶಾಲೆಗಳು ಯಥಾಸ್ಥಿತಿಯಲ್ಲಿ ನಡೆದಿರುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಬಾರ ಉಪನಿರ್ದೇಶಕರಾದ ಸೌಮ್ಯ ಪೊನ್ನಪ್ಪ ಅವರು ತಿಳಿಸಿದ್ದಾರೆ.
ವಾರಾಂತ್ಯವಾಗಿದ್ದು, ಜಿಲ್ಲೆಗೆ ಆಗಮಿಸಲು ಮುಂದಾಗಿದ್ದ ಕೆಲವು ಪ್ರವಾಸಿಗರು ಬಂದ್ ಕರೆಯಿಂದ ಜಿಲ್ಲೆಗೆ ಆಗಮಿಸಲು ಸಮಸ್ಯೆ ಎದುರಿಸಿದ್ದಾರೆ. ಬುಕ್ಕಿಂಗ್ ಮಾಡಿದ್ದ ಕೆಲವರು ಆಗಮಿಸದ ಕಾರಣ ಜಿಲ್ಲೆಯಲ್ಲಿ ಪ್ರವಾಸಿ ಅವಲಂಬಿತರಾದ ಕೆಲವರು ಸಮಸ್ಯೆ ಎದುರಿಸುವಂತಾಗಿತ್ತು.ಸೋಮವಾರಪೇಟೆ
ಸೋಮವಾರಪೇಟೆ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗದೇ ಜನಜೀವನ ಎಂದಿನAತೆ ಸಾಗಿತು.
ಶಾಲಾ ಕಾಲೇಜುಗಳಿಗೆ ರಜೆ ಇದೆಯೇ ಎಂಬ ಬಗ್ಗೆ ನಿನ್ನೆ ರಾತ್ರಿಯವರೆಗೂ ವಿದ್ಯಾರ್ಥಿಗಳ ಪೋಷಕರು ಗೊಂದಲಕ್ಕೊಳಗಾಗಿದ್ದನ್ನು ಹೊರತುಪಡಿಸಿದಂತೆ ಕರ್ನಾಟಕ ಬಂದ್ನ ಬಿಸಿ ಎಲ್ಲೂ ತಟ್ಟಲಿಲ್ಲ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು.
ಸರ್ಕಾರಿ ಹಾಗೂ ಖಾಸಗಿ ಬಸ್ಗಳ ಓಡಾಟ, ಆಟೋ ಸೇರಿದಂತೆ ಇನ್ನಿತರ ಬಾಡಿಗೆ ವಾಹನಗಳು ಎಂದಿನAತೆ ಸಂಚರಿಸಿದವು. ಅಂಗಡಿಮುAಗಟ್ಟುಗಳು ತೆರೆದಿದ್ದವು. ಸರ್ಕಾರಿ ಕಚೇರಿ ಹಾಗೂ ಬ್ಯಾಂಕ್ಗಳಲ್ಲಿ ಎಂದಿನAತೆ ವ್ಯವಹಾರ ನಡೆದವು.
ಸುಂಟಿಕೊಪ್ಪ : ಕರ್ನಾಟಕ ಬಂದ್ಗೆ ಕರೆ ನೀಡಿದ್ದರೂ ಸುಂಟಿಕೊಪ್ಪದಲ್ಲಿ ಯಾವುದೇ ಸ್ಪಂದನ ವ್ಯಕ್ತವಾಗಲಿಲ್ಲ. ಬಸ್ಸುಗಳು ಕೂಡ ಮಡಿಕೇರಿ, ಕುಶಾಲನಗರ, ಮಾದಾಪುರದ ಕಡೆಗೆ ಮಾಮೂಲಿನಂತೆ ಓಡಾಟ ಮಾಡಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ಶನಿವಾರಸಂತೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ಗೆ ಶನಿವಾರಸಂತೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.