ಚೆಟ್ಟಳ್ಳಿ, ಸೆ. ೨೯ : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಸೆಪ್ಟಂಬರ್ ೨೭ರಂದು ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಕೊಡವ ಕೂಟಾಳಿಯಡ ಕೂಟದ ಸದಸ್ಯರು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದರು.

ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಟ್ ಪಾಟ್, ವಾಲಗತಾಟ್‌ನ ಜೊತೆಗೆ ಮತ್ತು ಕೊಡವ ಸಂಸ್ಕೃತಿಯ ಅಂಗವಾದ ಕೋವಿ, ಒಡಿಕತ್ತಿ, ಬಿಲ್ಲು, ಬಾಣ, ಬರ್ಜಿ, ಹಿಡಿದು ಜಾಥಾ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷÀ ಚಂಗುಲAಡ ಸೂರಜ್, ಗೌರವ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ, ಖಜಾಂಚಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಸಹ ಕಾರ್ಯದರ್ಶಿ ನೂರೇರ ಸರಿತ ಉತ್ತಯ್ಯ, ನಿರ್ದೇಶಕ ಕಾಳಮಂಡ ರಾಬಿನ್, ಕರ್ತುರ ರನ್ನು ಪೆಮ್ಮಯ್ಯ, ಸದಸ್ಯರಾದ ಕೊಟ್ಟಂಗಡ ಕವಿತಾ ವಾಸುದೇವ್, ಬೊಜ್ಜಂಗಡ ಭವ್ಯ, ನಂಬುಡುಮಾಡ ದಿಲನ್ ಅಚ್ಚಯ್ಯ, ನೆಲ್ಲಚಂಡ ದಿಲನ್ ಅಯ್ಯಪ್ಪ, ನಂಬುಡುಮಾಡ ರೀತು ಅಚ್ಚಯ್ಯ ಹಾಗೂ ಚಂಗುಲAಡ ಸ್ವಪ್ನ ಸೂರಜ್, ಮುರುವಂಡ ಸಾವನ್, ತೀತಿರ ಬಿದ್ದಪ್ಪ, ಅಳಮೇಂಗಡ ಸೋಮಣ್ಣ, ಚೇಂದಿರ ಅಭಿನ್, ಬೂವಕಂಡ ಅಪ್ಪಚ್ಚು, ಮಾಚಂಗಡ ಸಚಿನ್, ಅಮ್ಮೇಕಂಡ ಯಜ್ಞ ಸುಬ್ರಮಣಿ ಭಾಗವಹಿಸಿದ್ದರು.