ಗೋಣಿಕೊಪ್ಪಲು: ಈದ್ ಮಿಲಾದುನ್ನಬಿ ಪ್ರಯುಕ್ತ ಬೆಮ್ಮತ್ತಿ ಯಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಬೆಮ್ಮತ್ತಿಯ ಜಮಾಅತ್ ಯೂತ್ ವಿಂಗ್ ಹಾಗೂ ಎಐಕೆಎಂ ಸಿಸಿ ಮೈಸೂರು ಇವರ ಸಹ ಯೋಗ ದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಮಿತಿಯ ೬೭ ಯುವಕರು ಸೇರಿದಂತೆ ಇನ್ನಿತರ ನಾಗರಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಮಾಜದಲ್ಲಿ ಇಂತಹ ಕಾರ್ಯ ಕ್ರಮಗಳು ಆಗಿಂದ್ದಾಗಿಯೇ ನಡೆಯುವು ದರಿಂದ ರಕ್ತದಾನ ಮಾಡುವವರ ಆರೋಗ್ಯವು ಶುದ್ಧಿಯಾಗಲಿದೆ. ಅಲ್ಲದೆ ಸಂಕಷ್ಟದಲ್ಲಿರುವ ಮತ್ತೊಬ್ಬರಿಗೆ ರಕ್ತ ನೀಡಿ ದಂತಾಗುತ್ತದೆ. ಈ ಹಿನ್ನೆಲೆ ರಕ್ತದಾನ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಆಯೋಜಕ ಎಂ.ಎA. ಶೌಕತ್ ಆಲಿ ಎಂಎಬಿ ತಿಳಿಸಿದರು.
ರಕ್ತದಾನ ಮಾಡಿದವರಿಗೆ ಸಂಸ್ಥೆ ವತಿಯಿಂದ ದೃಢೀಕರಣ ಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಪಿ. ಮೊಹಮ್ಮದ್ ಮೈಮುಟ್ಟಿ, ಎನ್.ಎಸ್. ಸಾಧಿಕ್, ಎನ್.ಹೆಚ್. ಜಂಶೀರ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು. ಲಯನ್ಸ್ ಜೀವದಾರ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ಮಮತ, ಸ್ಪಂದನ, ಭಾರತಿ, ಪೂಜಾ, ಜಯಂತಿ, ರಂಜಿತ್ ಪಾಟೀಲ್ ಹಾಗೂ ನಿರ್ಮಲ ಕಾರ್ಯ ನಿರ್ವಹಿಸಿದರು.ಕೂಡಿಗೆ: ಕೂಡಿಗೆಯ ಜುಮ್ಮಾ ಮೊಹಿದ್ದಿನ್ ಮಸೀದಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಮುಖ್ಯಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ದಫ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ಸಾಮರಸ್ಯದ ಸಂಕೇತವಾಗಿ ಕೂಡಿಗೆಯ ಹಿಂದೂಪರ ಸಂಘಟನೆಗಳು ಮೆರವಣಿಗೆಯಲ್ಲಿ ತೊಡಗಿಸಿಕೊಂಡವರಿಗೆ ಪಾನೀಯ ವಿತರಿಸಿ ಹಬ್ಬಕ್ಕೆ ಕೈಜೋಡಿಸಿದರು.ಪೊನ್ನಂಪೇಟೆ: ಪೊನ್ನಂಪೇಟೆಯ ಕಾಟ್ರಕೊಲ್ಲಿ ಮುಯಿಯದ್ದೀನ್ ಜುಮ್ಮಾ ಮಸ್ಜಿದ್, ತ್ಯಾಗರಾಜ ರಸ್ತೆಯಲ್ಲಿರುವ ಶಾಫಿ ಜುಮ್ಮಾ ಮಸ್ಜಿದ್, ಅನಫಿ ಜಾಮಿಯಾ ಮಸ್ಜಿದ್ ಮತ್ತು ಮಾಪಿಳೆ ತೋಡು ಕಲ್ಲಾಯಿ ಜುಮ್ಮಾ ಮಸ್ಜಿದ್ ಸಂಯುಕ್ತ ಆಶ್ರಯದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊನ್ನಂಪೇಟೆಯಲ್ಲಿ ಮಿಲಾದ್ ರ್ಯಾಲಿ ಆಯೋಜಿಸಲಾಗಿತ್ತು. ಇಲ್ಲಿನ ರಾಮಕೃಷ್ಣ ಶಾರದಾ ಶ್ರಮದ ಸಮೀಪದಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ನೂರಾರು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಮದರಸ ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕುತ್ತಾ ಬಸ್ ನಿಲ್ದಾಣ ದಲ್ಲಿ ನೃತ್ಯ ಮಾಡಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೃತ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ನಾಲ್ಕು ಮಸ್ಜಿದ್ಗಳ ಅಧ್ಯಕ್ಷರು, ಪದಾಧಿಕಾರಿ ಗಳು, ಮುತವಲ್ಲಿ ಆಲಿರ ಎರ್ಮು ಹಾಜಿ, ಗ್ರಾ.ಪಂ. ಸದಸ್ಯರಾದ ಆಲಿರ ರಶೀದ್, ಅಜೀಜ್, ಜುನೈದ್ ಇನ್ನಿತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಶಾಫಿ ಜುಮಾ ಮಸ್ಜಿದ್ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ನವೀನ್ ಅವರು ಮಾತನಾಡಿ, ನಿನ್ನೆ ಪೊನ್ನಂಪೇಟೆ ಯಲ್ಲಿ ಗೌರಿ ಗಣೇಶ ಉತ್ಸವ ಅತ್ಯಂತ ಶಾಂತಿಯುತವಾಗಿ ನಡೆಯಿತು. ಅದೇ ರೀತಿ ಇಂದು ನಡೆದ ಮಿಲಾದ್ ರ್ಯಾಲಿ ಕೂಡ ಶಾಂತಿ ಯುತವಾಗಿ ನಡೆದಿದೆ.
ಭಾರತೀಯರಾದ ನಮ್ಮಲ್ಲಿ ಇದೇ ರೀತಿಯ ಶಾಂತಿ ಸೌಹಾರ್ದತೆಯ ವಾತಾವರಣ ಇದ್ದಲ್ಲಿ ಸರ್ವರೂ ಖುಷಿಯಿಂದ ಜೀವನ ಸಾಗಿಸಬಹುದು ಎಂದರು. ನಂತರ ಮದರಸ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ನಾಪೋಕ್ಲು: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬದ ಅಂಗವಾಗಿ ನಾಪೋಕ್ಲು, ಕೊಟ್ಟಮುಡಿ, ಹಳೆ ತಾಲೂಕು, ಕೊಳಕೇರಿ, ಕುಂಜಿಲ, ಎಮ್ಮೆಮಾಡು, ಕೂರುಳಿ, ಪಡಿಯಾನಿ, ಬೆಟ್ಟಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಸೀದಿ ಹಾಗೂ ಮದರಸಗಳ ವತಿಯಿಂದ ಆಚರಿಸಲಾಯಿತು. ಮಿಲಾದ್ ಸಂದೇಶ ಮೆರವಣಿಗೆ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರ ಮೂಲಕ ಪ್ರವಾದಿ ಜನ್ಮದಿನವನ್ನು ಸಡಗರ ಸಂಭ್ರಮದಿAದ ಆಚರಿಸಿಕೊಂಡರು. ನಾಪೋಕ್ಲು ಪಟ್ಟಣದಲ್ಲಿರುವ ಮೊಹಿಯದ್ದೀನ್ ಜುಮ್ಮ ಮಸೀದಿ ಹಾಗೂ ಹಿದಾ ಯತಿಲ್ ಇಸ್ಲಾಂ ಮಾದರಸ ಆಡಳಿತ ಮಂಡಳಿ ವತಿಯಿಂದ ನಾಪೋಕ್ಲು ಮುಖ್ಯ ರಸ್ತೆ ಹಾಗೂ ಬೀದಿಗಳಲ್ಲಿ ಮಳೆಯನ್ನು ಲೆಕ್ಕಿಸದೆ ಮೆರವಣಿಗೆ ಮಾಡಿದರು. ನಾಪೋಕ್ಲು ಮೊಹಿಯದ್ದೀನ್ ಜುಮ್ಮ ಮಸೀದಿ ಯಿಂದ ಪ್ರಾರಂಭಗೊAಡ ಜಾಥಾ ಮುಖ್ಯ ರಸ್ತೆ ಮೂಲಕ ಪುಟಾಣಿ ಮಕ್ಕ ಳನ್ನು ಒಳಗೊಂಡAತೆ ಯುವಕರಿಂದ ದಫ್ ಪ್ರದರ್ಶನ ನೀಡಲಾಯಿತು. ಆಕರ್ಷಕ ಸಮವಸ್ತç ಗಳನ್ನು ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಪ್ರವಾದಿಯವರ ಶಾಂತಿ, ಸಹೋದರತೆಯ ಸಂದೇಶಗಳನ್ನು ಘೋಷಣೆಗಳ ಮೂಲಕ ಸಾರಿದರು. ಸಂತೆ ಮೈದಾನದಲ್ಲಿ ಜಮಾವಣೆ ಗೊಂಡ ಬಳಿಕ ಮಕ್ಕಳಿಂದ ದಿನದ ಮಹತ್ವದ ಬಗ್ಗೆ ಭಾಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ವಿಜೇತರಾದವರಿಗೆ ಗಣ್ಯರು ಬಹುಮಾನ ನೀಡಿ ಶುಭ ಹಾರೈಸಿದರು. ಬಳಿಕ ಅನ್ನದಾನ ಏರ್ಪಡಿಸಲಾಗಿತ್ತು.ಪಾಲಿಬೆಟ್ಟ: ವಿಶ್ವ ಪ್ರವಾದಿ ಅವರ ಜನ್ಮದಿನಾಚರಣೆ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಪಾಲಿ ಬೆಟ್ಟದಲ್ಲಿ ಆಚರಿಸಲಾಯಿತು.
ಸ್ಥಳೀಯ ಮುಸ್ಲಿಂ ಜಮಾಅತ್ ಕಮಿಟಿ ನೇತೃತ್ವದಲ್ಲಿ ಪಾಲಿಬೆಟ್ಟ ಸುತ್ತಮುತ್ತಲ ಮುಸ್ಲಿಂ ಸಮುದಾಯದವರು ಮಿಲಾದ್ ಸಂದೇಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಬೀದಿಯಲ್ಲಿ ಪ್ರವಾದಿಯವರ ಸಂದೇಶವನ್ನು ಸಾರುತ್ತ ಸೌಹಾರ್ದ ಸಮಾಜ ನಿರ್ಮಾಣವಾಗಲಿ ಎಂಬ ಘೋಷಣೆಯೊಂದಿಗೆ ಮೆರವಣಿಗೆ ಮಾಡಿದರು. ಈ ಸಂದರ್ಭ ಧಾರ್ಮಿಕ ಮುಖಂಡರುಗಳು, ಸ್ಥಳೀಯರು ಪಾಲ್ಗೊಂಡಿದ್ದರು.ಸುAಟಿಕೊಪ್ಪ : ಸುಂಟಿಕೊಪ್ಪದಲ್ಲಿ ಮುಸ್ಲಿಂ ಸಮುದಾಯದವರು ಮಹಮ್ಮದ್ ಪೈಗಂಬರರ ೧೪೯೮ನೇ ಜನ್ಮದಿನದ ಪ್ರಯುಕ್ತ ದಫ್ ಬಾರಿಸುತ್ತಾ ಶಾಂತಿ ಸೌಹಾರ್ದತೆಯ ಸಂಕೇತದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್, ಸುನ್ನಿ ಹನಫಿ ಮುಸ್ಲಿಂ ಜಮಾಅತ್, ಮುನ್ವರಲ್ ಇಸ್ಲಾಂ ಮದರಸ, ಸುನ್ನಿ ಶಾಫಿ ಜಮಾಅತ್, ಗದ್ದೆಹಳ್ಳದ ನೂರ್ ಜುಮ್ಮ ಮಸ್ಜಿದ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಳೆದ ೩ ದಿನಗಳಿಂದ ಮಸೀದಿಯ ಮದ್ರಸಗಳಲ್ಲಿ ವಿದ್ಯಾಭ್ಯಾಸ ನಡೆಸುವ ಮಕ್ಕಳಿಗೆ ಧಾರ್ಮಿಕತೆಯ ಬಗ್ಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಧಾರ್ಮಿಕತೆಯ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿತ್ತು. ಮಸೀದಿಗಳ ಮೌಲವಿ ಧಾರ್ಮಿಕ ಪ್ರವಚನ ನೀಡಿದರು.
ಇಂದು ಸುಂಟಿಕೊಪ್ಪ ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯಲ್ಲಿ ವಿಶೇಷ ಉಡುಗೆ ಗಳನ್ನು ತೊಟ್ಟು ಹಾಡಿನೊಂದಿಗೆ ದಫ್ನೊಂದಿಗೆ ಮೆರವಣಿಗೆ ಮಾಡಿದರು. ರಸ್ತೆ ಬದಿಯಲ್ಲಿ ಮುಸ್ಲಿಂ ಮಹಿಳೆಯರು ಗುಂಪು ಗುಂಪಾಗಿ ನಿಂತು ಸಂಭ್ರಮದಿAದ ವೀಕ್ಷಿಸಿದರು.
ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್ನ ರೌಫ್ ಸಖಾಫಿ ಹಾಗೂ ಮೌಲವಿಗಳು, ಹನಫಿ ಜಮಾಅತ್ನ ತೌಫಿಕ್ ಅಲಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ನ ಉಸಾಮ ಸಖಾಫಿ, ಸುನ್ನಿ ಶಾಫಿ ಜಮಾಅತ್ನ ಉಸ್ಮಾನ್ ಫೈಝಿ ಹಾಗೂ ಮೌಲವಿಗಳು ಅವರು ಮೆರವಣಿಗೆಯ ನಂತರ ಸಭಾ ಸಮಾರಂಭದ ವೇದಿಕೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು.
ಕುಶಾಲನಗರ ತಾಲೂಕು ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತನೀರಿಕ್ಷಕ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಸಶಸ್ತç ಪಡೆಯ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಚೆಯ್ಯಂಡಾಣೆ: ಎಡಪಾಲದ ಜುಮಾ ಮಸೀದಿ ಹಾಗೂ ನಜ್ಮುಲ್ ಹುದಾ ಮದರಸ ವತಿಯಿಂದ ವಿಜೃಂಭಣೆಯಿAದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ದ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜುಮಾ ಮಸೀದಿಯಿಂದ ಆರಂಭಗೊAಡ ಜಾಥಾ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಮುದರಿಸ್ ನಿಝರ್ ಪೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಿಂದ ದಫ್, ಸ್ಕೌಟ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ನೆರವೇರಿಸಿದರು.
ಈ ಸಂದರ್ಭ ಹಮೀದ್ ಫೈಝಿ, ಮಜೀದ್ ಮುಸ್ಲಿಯಾರ್, ಜಮಾಅತ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ಚೆಟ್ಟಳ್ಳಿ: ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಮುಸ್ಲಿಮ್ ಜಮಾಹತ್ ಕಮಿಟಿ ವತಿಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ೧೪೯೮ನೇ ಜನ್ಮದಿನವನ್ನು ಕಂಡಕರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಮೌಲಿದ್ ಪಾರಾಯಣದೊಂದಿಗೆ ಈದ್ ಮಿಲಾದ್ ಕಾರ್ಯಕ್ರಮ ಆರಂಭಗೊAಡಿತ್ತು. ಧ್ವಜಾರೋಹಣವನ್ನು ಮಹಲ್ ಅಧ್ಯಕ್ಷ ಪಿ.ಹೆಚ್. ಗಫೂರ್ ನೆರವೇರಿಸಿದರು. ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ನಂತರ ಕಂಡಕರೆಯಿAದ ಕಾಫಿ ಬೋರ್ಡ್ವರೆಗೆ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿ ಸಂದೇಶ ನೀಡಿದ, ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಆಧುನಿಕ ಯುಗದ ಭರಾಟೆಯಲ್ಲಿ ಮುಳುಗುತ್ತಿರುವ ಇಂದಿನ ಯುವ ಸಮೂಹ, ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಯುವ ಸಮೂಹದ ಯಾವುದೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ ಶಿಸ್ತಿನಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಇಡೀ ವಿಶ್ವಕ್ಕೆ ಸಾರಿರುವ ಸಂದೇಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕಾಗಿದೆ ಎಂದರು.
ಶಾAತಿಯ ಸಂದೇಶವನ್ನು ಎತ್ತಿ ಹಿಡಿದಿರುವ ಪ್ರವಾದಿ ಅವರ ಜೀವನ ಶೈಲಿಯನ್ನು ಇಂದಿನ ಯುವ ಸಮೂಹ ಅಳವಡಿಸಿಕೊಂಡು, ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕಾಗಿದೆ. ಇಸ್ಲಾಮ್ ಕಠೋರವಾಗಿ ವಿರೋಧಿಸಿರುವ ವಿವಿಧ ಶೈಲಿಯ ವಸ್ತçಧಾರಣೆ, ಕೇಶ ವಿನ್ಯಾಸಗಳನ್ನು ಯುವ ಸಮೂಹ ಕೂಡ ವಿರೋಧಿಸಿ ಇಸ್ಲಾಮ್ ಹಾಗೂ ಪ್ರವಾದಿ ತೋರಿಸಿರುವ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಹೇಳಿದರು.
ಮಿಲಾದ್ ಸಂದೇಶ ಜಾಥಾದಲ್ಲಿ ಪುಟಾಣಿಗಳು ಗಮನಸೆಳೆದರು. ಕಂಡಕರೆ ಹಯಾತುಲ್ ಇಸ್ಲಾಮ್ ಮದರಸ ಮೈದಾನದಲ್ಲಿ ವಿದ್ಯಾರ್ಥಿಗಳ ಧಪ್ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.
ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಕಂಡಕರೆ ಹಾಗೂ ಚೆಟ್ಟಳ್ಳಿ ಪಟ್ಟಣದಲ್ಲಿ ಸರ್ವಧರ್ಮೀಯರಿಗೆ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಸಂದೇಶ ಸಾರುವ ವಚನದೊಂದಿಗೆ ಸಿಹಿ ವಿತರಿಸಲಾಯಿತು. ಚೆಟ್ಟಳ್ಳಿ ಪೊಲೀಸ್ ಉಪ ಠಾಣಾಧಿಕಾರಿ ದಿನೇಶ್ ಅವರ ನೇತೃತ್ವದಲ್ಲಿ ಈದ್ ಮಿಲಾದ್ ಸಂದೇಶ ಜಾಥಾಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಅನ್ನದಾನ ಏರ್ಪಡಿಸಲಾಗಿತ್ತು. ಈ ಸಂದರ್ಭ ಹಯಾತುಲ್ ಇಸ್ಲಾಮ್ ಮದರಸ ಮುಖ್ಯೋಪಾಧ್ಯಾಯರಾದ ಹುಸೈನ್ ಬಾದ್ಶಾ, ಸುಲೈಮಾನ್ ಸಹದಿ, ಮೊಹಮ್ಮದ್ ಉಸ್ತಾದ್, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಯೂಸುಫ್, ಕಾರ್ಯದರ್ಶಿ ಗಫೂರ್, ಮಹಲ್ ಕಾರ್ಯದರ್ಶಿ ಮೊಹಮ್ಮದ್ ರಫಿ, ಸ್ವಲಾತ್ ಕಮಿಟಿ ಅಧ್ಯಕ್ಷ ಉಸೈನ್ ಹಾಗೂ ಮತ್ತಿತರರು ಇದ್ದರು.ಚೆಯ್ಯಂಡಾಣೆ: ಎಡಪಾಲದ ಜುಮಾ ಮಸೀದಿ ಹಾಗೂ ನಜ್ಮುಲ್ ಹುದಾ ಮದರಸ ವತಿಯಿಂದ ವಿಜೃಂಭಣೆಯಿAದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ದ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜುಮಾ ಮಸೀದಿಯಿಂದ ಆರಂಭಗೊAಡ ಜಾಥಾ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಮುದರಿಸ್ ನಿಝರ್ ಪೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಿಂದ ದಫ್, ಸ್ಕೌಟ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಅಬ್ದುಲ್ಲ ಫೈಝಿ ನೆರವೇರಿಸಿದರು.
ಈ ಸಂದರ್ಭ ಹಮೀದ್ ಫೈಝಿ, ಮಜೀದ್ ಮುಸ್ಲಿಯಾರ್, ಜಮಾಅತ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ಕಡಂಗ: ಬದ್ರಿಯ ಜುಮಾ ಮಸೀದಿ ಹಾಗೂ ತಾಜುಲ್ ಉಲಮಾ ಮದರಸ ವತಿಯಿಂದ ವಿಜೃಂಭಣೆಯಿAದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುರಹ್ಮಾನ್ ಅರಫಾ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜುಮಾ ಮಸೀದಿಯಿಂದ ಅದ್ಧೂರಿ ಮೆರವಣಿಗೆ ಪಟ್ಟಣದಲ್ಲಿ ಸಾಗಿತು. ವಿದ್ಯಾರ್ಥಿಗಳಿಂದ ದಫ್, ಸ್ಕೌಟ್ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಜಮಾಅತ್ ಖತೀಬ್ ಇಸ್ಮಾಯಿಲ್ ಲತೀಫ್ ನೆರವೇರಿಸಿದರು
ಈ ಸಂದರ್ಭದಲ್ಲಿ ಮದರಸ ಮುಖ್ಯೋಪಾಧ್ಯಾಯ ಸಿಯಬುದ್ದಿನ್ ಜೌಹರಿ, ಜಮಾಅತ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.ಕುಶಾಲನಗರ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ನಡೆದ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಕುಶಾಲನಗರದ ದಾರುಲ್ ಉಲೂಂ ಮದ್ರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ವತಿಯಿಂದ ಕುಶಾಲನಗರದ ಮುಖ್ಯ ರಸ್ತೆ ಹಾಗೂ ಪ್ರಮುಖ ಬೀದಿಗಳಲ್ಲಿ ಮಕ್ಕಳ ಕಲಾತಂಡದೊAದಿಗೆ ಮೆರವಣಿಗೆ ಸಾಗಿತು.
ಕುಶಾಲನಗರದ ಶಾಧಿ ಮಹಲ್ ನಿಂದ ಪ್ರಾರಂಭಗೊAಡ ಜಾಥಾ, ಮುಖ್ಯ ರಸ್ತೆ ಮೂಲಕ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಪುಟಾಣಿ ಮಕ್ಕಳನ್ನು ಒಳಗೊಂಡAತೆ ದಾರುಲ್ ಉಲೂಂ ಮದ್ರಸದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಿತು.
ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಆಕರ್ಷಕ ಸಮವಸ್ತ್ರಗಳನ್ನು ಧರಿಸಿ ಗಮನ ಸೆಳೆದರು. ನಂತರ ದಂಡಿನಪೇಟೆ ಮೂಲಕ ಸಾಗಿದ ಮೆರವಣಿಗೆ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಮೂಲಕ ಆಗಮಿಸಿ ಶಾಧಿ ಮಹಲ್ ನತ್ತ ಸಾಗಿತು. ಮೆರವಣಿಗೆಯಲ್ಲಿ ಪ್ರವಾದಿಯವರ ಶಾಂತಿ, ಸೌಹಾರ್ದತೆ ಶಾಂತಿ, ಸಹೋದರತೆಯ ಸಂದೇಶವನ್ನು ಸಾರಿದರು.
ಪಟ್ಟಣದಲ್ಲಿ ಮೆರವಣಿಗೆ ಸಂದರ್ಭ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಗೆ ಆಗಮಿಸಿದ್ದು ಈ ಬಾರಿಯ ಹಬ್ಬದ ವಿಶೇಷವಾಗಿತ್ತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಹಿಲಾಲ್ ಮಸೀದಿಯ ಖತೀಬರಾದ ನಾಸರ್ ಫೈಜಿû ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ೧೪೦೦ ವರ್ಷಗಳ ಹಿಂದೆ ಶಾಂತಿ, ಸಹೋದರತೆ ಸಂದೇಶವನ್ನು ಸಾರಿದವರಾಗಿದ್ದಾರೆ. ಶಾಂತಿಯನ್ನು ಪಸರಿಸಿದ, ಪ್ರವಾದಿಯವರ ಜೀವನ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿ, ಪ್ರತಿಯೊಂದು ಧರ್ಮವೂ ಶಾಂತಿಯನ್ನು ಸಾರುತ್ತದೆ. ಕುಶಾಲನಗರದಲ್ಲಿ ಪ್ರತಿಯೊಂದು ಧರ್ಮದವರು ಪರಸ್ಪರ ಸಹೋದರರಂತೆ ಜೀವಿಸುತ್ತಿದ್ದಾರೆ. ಇಂತಹ ಶಾಂತಿಯ ಪಟ್ಟಣದಲ್ಲಿ ಕಾರ್ಯನಿರ್ವಹಿಸಲು ಬಹಳಷ್ಟು ಹೆಮ್ಮೆ ಹಾಗೂ ಸಂತೋಷವಾಗುತ್ತಿದೆ ಎಂದರು. ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು. ಯುವಕರು ದಾರಿತಪ್ಪುವುದು ಸಮಾಜಕ್ಕೆ ಮಾರಕವಾಗಿದ್ದು, ದಾರಿತಪ್ಪದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎA. ಹುಸೇನ್ ಮಾತನಾಡಿ, ಸರ್ವ ಧರ್ಮವೂ ಶಾಂತಿಯನ್ನು ಸಾರುತ್ತದೆ. ಕೆಟ್ಟದ್ದನ್ನು ವಿರೋಧಿಸುತ್ತದೆ. ಆದ್ದರಿಂದ ಯುವ ಸಮೂಹ ಕೆಟ್ಟ ಚಟಗಳಿಂದ ದೂರವಿರಬೇಕು ಎಂದರು.
ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಮುಜೀಬುರೆಹಮಾನ್ ಮಾತನಾಡಿ, ಬೌದ್ಧಿಕ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಪೋಷಕರು ಮಕ್ಕಳನ್ನು ಕೆಟ್ಟ ಚಟಗಳಿಂದ ದೂರವಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು.
ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷರಾದ ಸಲೀಂ ಹಾಜಿ ಮಾತನಾಡಿದರು.
ಕಾರ್ಯದರ್ಶಿ ಅಬ್ದುಲ್ ಮಜೀದ್ ಸ್ವಾಗತಿಸಿದರು. ದಾರುಲ್ ಉಲೂಂ ಮದ್ರಸದ ೧ ನೇ ತರಗತಿಯಿಂದ ೧೨ ನೇ ತರಗತಿವರೆಗಿನ ಪ್ರಮುಖ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಲ್ ಅಮೀಮ್ ಜಿಲ್ಲಾಧ್ಯಕ್ಷರಾದ ಬಿ.ಹೆಚ್. ಅಹಮದ್, ಹಿಲಾಲ್ ಮಸೀದಿ ಉಪಾಧ್ಯಕ್ಷ ಹಂಸ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ಗೊಂದಿ ಬಸವನಹಳ್ಳಿ ಮದ್ರಸ ಕಾರ್ಯದರ್ಶಿ ಹಮೀದ್, ಮಾದಾ ಪಟ್ಟಣ ಮದ್ರಸ ಅಧ್ಯಕ್ಷ ಶರ್ಫುದ್ದೀನ್, ಫಾಳಿಲಾ ಶರೀಅತ್ ಕಾಲೇಜ್ನ ವ್ಯವಸ್ಥಾಪಕ ಅಬ್ದುಲ್ಲಾ, ಪ್ರಮುಖರಾದ ಮುಹಮ್ಮದ್ ಅಲಿ, ಕೂಡು ಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ದಾರುಲ್ ಉಲೂಂ, ಮದ್ರಸದ ಶಿಕ್ಷಕ ವೃಂದದವರು ಇದ್ದರು.ಸೋಮವಾರಪೇಟೆ: ಪ್ರವಾದಿ ಮಹಮ್ಮದ್ರ ಸಂದೇಶ ಮತ್ತು ಆದರ್ಶಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಡಾ. ಮಂಥರ್ ಗೌಡ ಕರೆ ನೀಡಿದರು. ಪಟ್ಟಣದ ಜಲಾಲಿಯ ಮಸೀದಿ ಯಲ್ಲಿ ಈದ್ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ಸಭಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರು ದೇಶದ ಸಂಪತ್ತು. ಯುವಕರು ದುಶ್ಚಟದಿಂದ ಮುಕ್ತರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಯುವಕರು ದಾರಿ ತಪ್ಪಿದಾಗ ಧರ್ಮಗುರುಗಳು ಅವರನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಮನಃಪರಿವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಅತಿಯಾಸೆ ಬಿಡಬೇಕು, ದ್ವೇಷ ತ್ಯಜಿಸಬೇಕು, ಮಾನವರನ್ನು ಪ್ರೀತಿಸಬೇಕು ಇವುಗಳು ಧರ್ಮಗ್ರಂಥಗಳ ಸಂದೇಶವಾಗಿದೆ. ಪ್ರತಿಯೊಬ್ಬರು ಧರ್ಮಗ್ರಂಥಗಳಲ್ಲಿನ ಅಂತಃಸತ್ವ ಅರಿತುಕೊಂಡರೆ ಉತ್ತಮ ಪ್ರಜೆಯಾಗಬಹುದು. ಮನುಷ್ಯನಲ್ಲಿ ಆಂತರಿಕ ಬದಲಾವಣೆಗೆ ಸೌಹಾರ್ದ ಸಭೆಗಳು ಅವಶ್ಯಕತೆ ಎಂದರು.
ಜಲಾಲಿಯ ಮಸೀದಿಯ ಮಾಜಿ ಖತೀಬರಾದ ಅಬೂಬಕರ್ ಸಿದ್ದೀಕಿ ಮೊಂಟುಗೋಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಖತೀಬರಾದ ಅಬ್ದುಲ್ ಹಮೀದ್ ಸಖಾಫಿ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಮಹಮ್ಮದ್, ಮಾಜಿ ಅಧ್ಯಕ್ಷ ಆದಂ ಹಾಜಿ, ಅಶ್ರಫ್, ಪ್ರಮುಖ ರಾದ ಸಿ.ಬಿ. ಸುರೇಶ್, ಚೇತನ್, ಮುನೀರ್ ಸಹದಿ, ಮಹಮ್ಮದ್, ಎನ್.ಎ. ಮೂಸ ಹಾಜಿ, ಅಬ್ದುಲ್ ರೆಹಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.