ಕುಶಾಲನಗರ, ಸೆ. ೨೯: ಕುಶಾಲನಗರದ ಹೆಗ್ಗಡೆ ಸಮಾಜದ ವಾರ್ಷಿಕ ಮಹಾಸಭೆ ಹಾರಂಗಿ ರಸ್ತೆಯಲ್ಲಿರುವ ಸಮಾಜದ ನಿವೇಶನದಲ್ಲಿ ಸಮಾಜದ ಅಧ್ಯಕ್ಷ ಚಂಗಚAಡ ನಂಜಪ್ಪ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಮಾಜಕ್ಕೆ ನೂತನ ಕಟ್ಟಡ ಕಟ್ಟುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ನಂತರ ನಡೆದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಡಿಞರಂಡ ಪ್ರಭು ಕುಮಾರ್, ಕೊಡಗಿನಲ್ಲಿ ಹನ್ನೆರಡನೇ ಶತಮಾನಕ್ಕೂ ಮೊದಲು ಕೊಡಗು ಹೆಗ್ಗಡೆ ಜನಾಂಗದವರು ನೆಲೆಸಿದವರಾಗಿದ್ದಾರೆ ಎಂದರು.
ಹದಿಮೂರು ಸಾವಿರ ಜನಸಂಖ್ಯೆ ಹೊಂದಿರುವ ಜನಾಂಗಕ್ಕೆ ಸರ್ಕಾರದಿಂದ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳಿಗೆ ಮೀಸಲಾತಿಯ ವ್ಯವಸ್ಥೆ ಇದ್ದು ಇದನ್ನು ರಾಜಕೀಯ ವ್ಯವಸ್ಥೆಗೂ ವಿಸ್ತರಿಸಿ ಈ ಮೀಸಲಾತಿಯಡಿಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ ರಾಜಕೀಯ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾನೂನು ಪದವಿಯಲ್ಲಿ ರ್ಯಾಂಕ್ ಪಡೆದ ಮಂಡೆಯAಡ ರನ್ನಿಕಾ, ಅರಣ್ಯ ಇಲಾಖೆಯ ನಿವೃತ್ತ ಉಪವಲಯ ಅಧಿಕಾರಿ ಕೊಂಗೆಪAಡ ನಂಜಪ್ಪ, ಬೆಮೆಲ್ ನಿವೃತ್ತ ನೌಕರ ಮೇಲಾಟಂಡ ಚಂಗಪ್ಪ, ಅಂಗನವಾಡಿ ಶಿಕ್ಷಕಿ ಪುದಿಯತಂಡ ಗಂಗಮ್ಮ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕAಡ ಕುಶ, ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲ, ಸಮಾಜದ ಉಪಾಧ್ಯಕ್ಷ ಚಂಗಚAಡ ಸುಬ್ರಮಣಿ, ಕಾರ್ಯದರ್ಶಿ ಪಂದಿಕAಡ ವಿಠಲ, ಖಜಾಂಚಿ ಪಂದಿಕAಡ ಗಣೇಶ್, ಪೊಕ್ಕಳಿಚಂಡ ಲಲಿತಾ, ಚಳಿಯಂಡ ಅಚ್ಚಯ್ಯ ಇದ್ದರು.