ಸೋಮವಾರಪೇಟೆ, ಸೆ. ೨೮: ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ೭೦ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ರೂಪಾ ಸತೀಶ್ ಅಧ್ಯಕ್ಷತೆಯಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಿತು.
ಸಂಘದಲ್ಲಿ ಪ್ರಸ್ತುತ ೪೮೮೨ ಸದಸ್ಯರಿದ್ದು, ರೂ. ೪೯.೩೯ ಕೋಟಿ ಸಾಲ ವಿತರಿಸಲಾಗಿದೆ. ೨೦೨೨-೨೩ನೇ ಸಾಲಿಗೆ ಸಂಘವು ರೂ. ೧.೧೧ ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೨೨ ಲಾಭಾಂಶ ನೀಡುವ ಬಗ್ಗೆ ಸಭೆ ತೀರ್ಮಾನಿಸಿತು.
ಸಂಘದ ಅಧ್ಯಕ್ಷೆ ರೂಪಾ ಸತೀಶ್ ಮಾತನಾಡಿ, ಸಂಘದ ಅಬ್ಬೂರುಕಟ್ಟೆ ಮತ್ತು ಬಳಗುಂದ ಶಾಖೆಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಜನೌಷಧಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಕಾಮನ್ ಸರ್ವಿಸ್ ಸೆಂಟರ್ ಪ್ರಾರಂಭಿಸಲಾಗುವುದು. ಸಂಘದ ಶತಮಾನೋತ್ಸವದ ನೆನಪಿಗಾಗಿ ಅಬ್ಬೂರುಕಟ್ಟೆ ಶಾಖೆಯಲ್ಲಿ ೫೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸಂಘದಲ್ಲಿ ಮರಣನಿಧಿ, ಜಾಮೀನು ಸಾಲ ವಿಮಾ ಯೋಜನೆ, ಪಿಗ್ಮಿ ಓವರ್ ಡ್ರಾಫ್ಟ್ ಸಾಲದ ವಿಮಾ ಯೋಜನೆ, ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ, ಜಂಟಿ ಭಾದ್ಯತಾ ಗುಂಪುಗಳಿಗೆ ಸಾಲ ಯೋಜನೆ ಮತ್ತು ವಿಮಾ ಸೌಲಭ್ಯ ನೀಡಲಾಗಿದೆ. ಸಂಘದಿAದ ಕೃಷಿ ಯಂತ್ರೋಪಕರಣ ಸಾಲ, ಆಭರಣ ಖರೀದಿ ಸಾಲ, ಲ್ಯಾಪ್ಟಾಪ್ ಖರೀದಿ ಸಾಲ, ಸೋಲಾರ್ ಸಾಲ, ವಾಹನ ಸಾಲ, ಎಲೆಕ್ಟಿçಕ್ ವಾಹನ ಸಾಲ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ೨೦೨೨-೨೩ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೃದು ಪ್ರವೀಣ್ ಅವರನ್ನು ಸನ್ಮಾನಿಸಿ, ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ೭ನೇ ತರಗತಿ, ಎಸ್ಎಸ್ಎಲ್ಸಿ,ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳನ್ನು ಗಳಿಸಿ ಉತ್ತೀರ್ಣಗೊಂಡ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನವನ್ನು ನೀಡಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾನ್, ನಿರ್ದೇಶಕರುಗಳಾದ ಹೆಚ್.ಕೆ. ಮಾದಪ್ಪ, ಪಿ.ಡಿ. ಮೋಹನ್ದಾಸ್, ಬಿ.ಡಿ. ಮಂಜುನಾಥ್, ಜಿ.ಬಿ. ಸೋಮಯ್ಯ, ಬಿ.ಎಂ. ಸುರೇಶ್, ಪಿ.ಎ. ಅನಿತಾ, ಕೆ.ಕೆ. ಚಂದ್ರಿಕಾ, ಶಿವಪ್ಪ, ಹೆಚ್.ಕೆ. ಚಂದ್ರಶೇಖರ್, ಬಿ.ಎಂ. ಈಶ್ವರ್, ಎಂ.ವಿ. ದೇವರಾಜು, ಕಾರ್ಯ ನಿರ್ವಹಣಾಧಿಕಾರಿ ಹೆಚ್.ಪಿ. ರವೀಂದ್ರ ಇದ್ದರು.