ಗೋಣಿಕೊಪ್ಪ ವರದಿ, ಸೆ. ೨೮: ರಾಜ್ಯವ್ಯಾಪಿ ಎದುರಿಸುತ್ತಿರುವ ವೈದ್ಯರ ಕೊರತೆ ನೀಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಕುಟ್ಟಂದಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಕೇಂದ್ರ ಸ್ವಚ್ಛತೆಯೊಂದಿಗೆ ಉತ್ತಮ ನಿರ್ವಹಣೆ ಹೊಂದಿದೆ. ವೈದ್ಯರ ಸಮಸ್ಯೆ ರಾಜ್ಯ ವ್ಯಾಪ್ತಿ ಇದೆ. ನೇಮಕಕ್ಕೆ ಸರ್ಕಾರ ಕೂಡ ಪ್ರಯತ್ನಿಸುತ್ತಿದೆ. ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆ ಕೂಡ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಸ್ಥಳೀಯವಾಗಿರುವ ವೈದ್ಯರು ಬರಲು ಒಪ್ಪಿದರೆ ತಕ್ಷಣ ಅವಕಾಶ ನೀಡಲಾಗುವುದು. ಸ್ಥಳೀಯರ ಆರೋಗ್ಯ ಮುಖ್ಯ ಎಂದರು.
ಕೇAದ್ರ ಉತ್ತಮ ನಿರ್ವಹಣೆ ಇದ್ದರೂ, ವೈದ್ಯರ ಕೊರತೆ ಗ್ರಾಮಕ್ಕೆ ಹೆಚ್ಚು ತೊಂದರೆಯಾಗಿದೆ. ಶವಾಗಾರ, ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಶಾಸಕರನ್ನು ಮನವಿ ಮಾಡಿಕೊಂಡರು. ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಯು. ಬೋಪಣ್ಣ ಇದ್ದರು.