ಮಡಿಕೇರಿ, ಸೆ. ೨೮: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಹೆಚ್ಚಿನ ಪಾಲನ್ನು ಹತ್ತು ಮಂಟಪ ಹಾಗೂ ನಾಲ್ಕು ಕರಗಗಳಿಗೆ ಮೀಸಲಿಡಬೇಕೆಂಬ ಬೇಡಿಕೆಯನ್ನು ದಸರಾ ಸಮಿತಿಯ ಮುಂದಿಡಲು ದಶಮಂಟಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ರಾಜ್ದರ್ಶನ್ ಸಭಾಂಗಣದಲ್ಲಿ ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಶಮಂಟಪಗಳು ಹಾಗೂ ಕರಗಗಳು ದಸರಾ ಉತ್ಸವದ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತ ಅನುದಾನ ಲಭಿಸಬೇಕು ಎಂದು ಮಂಟಪ ಹಾಗೂ ಕರಗಗಳ ಪ್ರತಿನಿಧಿಗಳು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ವಿಚರ್ಚೆ ನಡೆದು ಹೆಚ್ಚಿನ ಅನುದಾನದ ಸಂಬAಧ ದಸರಾ ಸಮಿತಿ ಎದುರು ಬೇಡಿಕೆ ಮುಂದಿಡಲು ನಿರ್ಧಾರ ಕೈಗೊಳ್ಳಲಾಯಿತು.
ದಸರಾ ಮಂಟಪಗಳ ತೀರ್ಪುಗಾರಿಕೆ ಪಾರದರ್ಶಕವಾಗಿ ನಡೆಯಬೇಕು. ಈ ದಿಸೆಯಲ್ಲಿ ದಶಮಂಟಪ ಸಮಿತಿ ಪ್ರಾಮಾಣಿಕ ವಾಗಿ ಕಾರ್ಯನಿರ್ವಹಿಸಬೇಕು ಎಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು.
ವಿಜಯದಶಮಿಯAದು ಡಿಜೆ ಬಳಕೆ ಸಂಬAಧವೂ ಚರ್ಚೆ ನಡೆದು ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಶಾಸಕರ ಬಳಿ ಮನವಿ ಮಾಡಲು ನಿರ್ಧರಿಸಲಾಯಿತು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಮನು ಮಂಜುನಾಥ್, ಉಪಾಧ್ಯಕ್ಷ ನಂಜುAಡ, ಪರಮೇಶ್ ದಸರಾ ಸಮಿತಿ ಉಪಾಧ್ಯಕ್ಷ ಬಿ.ಎಂ. ರಾಜೇಶ್, ಸಹಕಾರ್ಯದರ್ಶಿ ಜಗದೀಶ್ ಉಪಸ್ಥಿತರಿದ್ದರು. ದಶಮಂಟಪ ಸಮಿತಿ ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ರಘುಪತಿ ನಿರೂಪಿಸಿ, ವಂದಿಸಿದರು.