ಅನಿಲ್ ಎಚ್.ಟಿ.
ಬೆಂಗಳೂರು, ಸೆ. ೨೮: ವಿಶ್ವವ್ಯಾಪಿ ಕಾಫಿಗೆ ಬೇಡಿಕೆ ಹೆಚ್ಚಾಗುತ್ತಲೇ ಇರುತ್ತದೆ. ಪ್ರಸ್ತುತ ವಿಶ್ವದಲ್ಲಿ ೩೦೦ ಕೋಟಿ ಕಾಫಿ ಕಪ್ಗಳಷ್ಟು ಕಾಫಿ ಪಾನೀಯ ಪ್ರತೀನಿತ್ಯ ಮಾರಾಟವಾಗುತ್ತಿದ್ದು ಮುಂದಿನ ೨೫ ವರ್ಷಗಳಲ್ಲಿ ಇದು ೬೦೦ ಕೋಟಿ ಕಪ್ ಗೆ ಏರಿಕೆಯಾಗಲಿದೆ. ಹೀಗಾಗಿ ಕಾಫಿಗೆ ಬೇಡಿಕೆ ವೃದ್ಧಿಸುತ್ತಲೇ ಇರುತ್ತದೆ ಎಂದು ಕೇಂದ್ರ ವಾಣಿಜ್ಯ ಖಾತೆ ಹೆಚ್ಚುವರಿ ಕಾರ್ಯದರ್ಶಿ ಅಮರ್ ದೀಪ್ ಸಿಂಗ್ ಭಾಟಿಯಾ ಅಭಿಪ್ರಾಯಪಟ್ಟರು.
ಅರಮನೆ ಆವರಣದಲ್ಲಿ ೫ ನೇ ಕಾಫಿ ವಿಶ್ವ ಸಮ್ಮೇಳನದ ಕೊನೇ ದಿನ ಬೆಳೆಗಾರರ ಸಮಾವೇಶದಲ್ಲಿ ಕಾಫಿ ಮಾಹಿತಿ ಕೈಪಿಡಿ ಲೋಕಾರ್ಪಣೆ ಮಾಡಿದ ಅಮರ್ ದೀಪ್ ಸಿಂಗ್ ಭಾಟಿಯಾ, ಕಾಫಿ ಕೃಷಿಕರು ನಿರಾಶರಾಗಬಾರದು. ಕಳೆದ ೩೦ ವರ್ಷಗಳಲ್ಲಿ ವಿಶ್ವವ್ಯಾಪಿ ಕಾಫಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಈಗ ಕಾಫಿ ಕೆಫೆ ಸಂಸ್ಕೃತಿ ಜಗತ್ತಿನಾದ್ಯಂತ ಗಮನಾರ್ಹ ರೀತಿಯಲ್ಲಿ ಹೆಚ್ಚಾಗಿರುವುದರಿಂದಾಗಿ ಕಾಫಿಗೆ ಆಂತರಿಕವಾಗಿಯೂ ಬೇಡಿಕೆ ಏರುತ್ತಲೇ ಇರುತ್ತದೆ. ಭವಿಷ್ಯದಲ್ಲಿ ಭಾರತ ಸೇರಿದಂತೆ ಜಗತ್ತಿನ ಕಾಫಿ ದೇಶಗಳಿಗೆ ತಮ್ಮ ಕಾಫಿಯನ್ನು ತಮ್ಮ ದೇಶದಲ್ಲಿಯೇ ಮಾರಾಟ ಮಾಡುವ ಕಾಲ ಬಂದೇ ಬರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಲ್ಲಿ ಮತ್ತು ಪ್ರಾಕೃತಿಕವಾಗಿ ವಿಶ್ವದಲ್ಲಿ ಉಂಟಾಗುತ್ತಿರುವ ವೈಪರೀತ್ಯಗಳು ಕಾಫಿ ಕೃಷಿಗೆ ಭವಿಷ್ಯದಲ್ಲಿನ ಬಹಳ ದೊಡ್ಡ ಸವಾಲಾಗಲಿದೆ ಎಂದು ಎಚ್ಚರಿಸಿದ ಅವರು, ತೋಟದಲ್ಲಿನ ರಾಸಾಯನಿಕಗಳ ಬಳಕೆ, ಕೀಟಗಳು, ರೋಗಭಾದೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ವಿಶ್ವದ ಕಾಫಿ ರಾಷ್ಟçಗಳು ಪರಿಣಾಮಕಾರಿಯಾಗಿ ಹೊಸ ಯೋಜನೆ ರೂಪಿಸಬೇಕಾಗಿದೆ ಎಂದರು.
ಕಾಫಿ ಬೆಳೆಗಾರರು ಕೂಡ ಇತರರಂತೆ ನೆಮ್ಮದಿಯ ಜೀವನ ನಡೆಸಬೇಕಾದ ದಿನಗಳು ಭವಿಷ್ಯದಲ್ಲಿ ಕಾಣಬೇಕಾಗಿದೆ. ಸದಾ ಒಂದಲ್ಲ ಒಂದು ಸಂಕಷ್ಟಗಳ ಸವಾಲಿನಲ್ಲಿಯೇ ಬೆಳೆಗಾರರು ದಿನಕಳೆಯುವಂತಾಗಿದೆ. ಇದು ನಿವಾರಣೆಯಾಗಬೇಕು. ಕಾಫಿ ಆಂತರಿಕವಾಗಿಯೂ ಬೇಡಿಕೆ ಏರುತ್ತಲೇ ಇರುತ್ತದೆ. ಭವಿಷ್ಯದಲ್ಲಿ ಭಾರತ ಸೇರಿದಂತೆ ಜಗತ್ತಿನ ಕಾಫಿ ದೇಶಗಳಿಗೆ ತಮ್ಮ ಕಾಫಿಯನ್ನು ತಮ್ಮ ದೇಶದಲ್ಲಿಯೇ ಮಾರಾಟ ಮಾಡುವ ಕಾಲ ಬಂದೇ ಬರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಲ್ಲಿ ಮತ್ತು ಪ್ರಾಕೃತಿಕವಾಗಿ ವಿಶ್ವದಲ್ಲಿ ಉಂಟಾಗುತ್ತಿರುವ ವೈಪರೀತ್ಯಗಳು ಕಾಫಿ ಕೃಷಿಗೆ ಭವಿಷ್ಯದಲ್ಲಿನ ಬಹಳ ದೊಡ್ಡ ಸವಾಲಾಗಲಿದೆ ಎಂದು ಎಚ್ಚರಿಸಿದ ಅವರು, ತೋಟದಲ್ಲಿನ ರಾಸಾಯನಿಕಗಳ ಬಳಕೆ, ಕೀಟಗಳು, ರೋಗಭಾದೆಯನ್ನು ನಿರ್ವಹಿಸುವ ನಿಟ್ಟಿನಲ್ಲಿ ವಿಶ್ವದ ಕಾಫಿ ರಾಷ್ಟçಗಳು ಪರಿಣಾಮಕಾರಿಯಾಗಿ ಹೊಸ ಯೋಜನೆ ರೂಪಿಸಬೇಕಾಗಿದೆ ಎಂದರು.
ಕಾಫಿ ಬೆಳೆಗಾರರು ಕೂಡ ಇತರರಂತೆ ನೆಮ್ಮದಿಯ ಜೀವನ ನಡೆಸಬೇಕಾದ ದಿನಗಳು ಭವಿಷ್ಯದಲ್ಲಿ ಕಾಣಬೇಕಾಗಿದೆ. ಸದಾ ಒಂದಲ್ಲ ಒಂದು ಸಂಕಷ್ಟಗಳ ಸವಾಲಿನಲ್ಲಿಯೇ ಬೆಳೆಗಾರರು ದಿನಕಳೆಯುವಂತಾಗಿದೆ. ಇದು ನಿವಾರಣೆಯಾಗಬೇಕು. ಕಾಫಿ ಸಂಭ್ರಮದ ತೆರೆ
ಭಾರತೀಯ ಕಾಫಿ ಮಂಡಳಿ ಅಂದಾಜು ೨೫ ಕೋಟಿ ರೂ. ವೆಚ್ಚದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕಾಫಿ ಸಮ್ಮೇಳನ ವಿಶ್ವ ದರ್ಜೆಯ ವ್ಯವಸ್ಥೆಗಳೊಂದಿಗೆ ಕಾಫಿ ದೇಶಗಳ ಪ್ರತಿನಿಧಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕರ್ನಾಟಕ ಕಾಫಿ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರಿನ ಬೆಳೆಗಾರರಿಗೂ ಈ ಸಮ್ಮೇಳನ ಆಶಾದಾಯಕವಾಗಿ ಪರಿಣಮಿಸಿತು.
ಜಗತ್ತಿನ ಕಾಫಿ ಬೆಳೆಯುವ ೮೦ ದೇಶಗಳಿಂದ ಸಮ್ಮೇಳನಕ್ಕೆ ೨,೬೦೯ ಪ್ರತಿನಿಧಿಗಳು ಬಂದಿದ್ದರು. ಈ ಪೈಕಿ ೧,೧೫೦ ಮಂದಿ ಕಾಫಿ ಬೆಳೆಗಾರರು. ಸಮ್ಮೇಳನದಲ್ಲಿ ಪ್ರತಿನಿತ್ಯ ೩ ಸಾವಿರದಷ್ಟು ಜನ ಕಂಡುಬAದರು. ಕೊನೇ ದಿನ ಈ ಸಂಖ್ಯೆ ೧೫ ಸಾವಿರವನ್ನೂ ಮೀರಿತ್ತು. ಈ ಮೂಲಕ ಕಾಫಿಯ ಮಹತ್ವವನ್ನು ಸಾವಿರಾರು ಮಂದಿಗೆ ತಿಳಿಸಿದ ಸಫಲತೆ ಈ ಸಮ್ಮೇಳನದ್ದಾಯಿತು.
ನಿರೀಕ್ಷೆಗೂ ಮೀರಿದ ಸ್ಪಂದನ ಸಮ್ಮೇಳನಕ್ಕೆ ದೊರಕಿದ್ದು, ಭಾರತೀಯ ಕಾಫಿಗೆ ವಿಶ್ವಮಟ್ಟದಲ್ಲಿ ಅಗ್ರ ಮಾನ್ಯತೆ ದೊರಕಿಸಿಕೊಡುವಲ್ಲಿ ಸಮ್ಮೇಳನ ತನ್ನ ಗುರಿ ಸಾಧಿಸಲಿದೆ ಎಂಬ ವಿಶ್ವಾಸವನ್ನು ಸಮ್ಮೇಳನದ ಆಯೋಜಕರಾದ ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಡಾ. ಕೆ.ಜಿ.ಜಗದೀಶ್ ವ್ಯಕ್ತಪಡಿಸಿದರು.
ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್, ಸಮ್ಮೇಳನಕ್ಕೆ ವಿದೇಶಿ ಪ್ರತಿನಿಧಿಗಳೂ ಸೇರಿದಂತೆ ಭಾರತದ ಕಾಫಿ ಬೆಳೆಗಾರರು, ಕಾಫಿ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪಂದಿಸಿದ್ದು ಶ್ರಮವನ್ನು ಸಾರ್ಥಕಗೊಳಿಸಿದೆ. ಭಾರತ ಮತ್ತೊಮ್ಮೆ ವಿಶ್ವಭೂಪಟದಲ್ಲಿ ತನ್ನ ಕಾಫಿ ಪ್ರಾಬಲ್ಯ ನಿರೂಪಿಸಿದೆ ಎಂದು ಹೇಳಿದರು. ಸಮ್ಮೇಳನದ ಆಯೋಜನೆಗೆ ನೆರವಾದ ಎಂ. ಅಂಡ್ ಎ ಸಂಸ್ಥೆಯ ಮುಖ್ಯಸ್ಥ ಜಗದೀಶ್ ಪಟಾನ್ ಕರ್ ಹಾಜರಿದ್ದರು.