ವೀರಾಜಪೇಟೆ, ಸೆ. ೨೯: ವೀರಾಜಪೇಟೆ ಆರ್ಜಿ ಗ್ರಾಮದ ಪೆರಂಬಾAಡಿಯಲ್ಲಿ ಶ್ರೀ ವಿದ್ಯಾ ವಿನಾಯಕ ಸೇವಾ ಸಮಿತಿ ವತಿಯಿಂದ ಗಣೇಶ ಪ್ರತಿಷ್ಠಾಪನೆ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಪೆರುಂಬಾಡಿ ನಿವಾಸಿ ಬೆಂಗಳೂರಿನಲ್ಲಿ ಎಸಿಪಿಯಾಗಿ ವೃತ್ತಿ ನಿರ್ವಹಿಸುತ್ತಿರುವ ಸುಬ್ರಮಣಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ಬಿ.ಎಂ. ಗಿರಿ, ಸದಸ್ಯರಾದ ವಿನೋದ್ ಥರ್ಮಲ್, ಬಿ.ಜಿ. ನಾರಾಯಣ, ಸುಭಾಷ್, ಸನ್ನಿ, ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಉದ್ಯಮಿ ಉಲ್ಲಾಸ್ ಶೇಟ್, ನಿವೃತ್ತ ಶಿಕ್ಷಕಿ ವಾರೀಜ, ಬೋಜಪ್ಪ, ವಿಶ್ವನಾಥ್, ಚುಪ್ಪ ನಾಗರಾಜ್ ಸೇರಿದಂತೆ ಎಲ್ಲಾ ಸಮಿತಿಯ ಸದಸ್ಯರು ಹಾಜರಿದ್ದರು.
ಈ ಸಂದರ್ಭ ಉತ್ತಮ ರೀತಿ ಯಲ್ಲಿ ಸರ್ಕಾರದ ಸೇವೆ ಸಲ್ಲಿಸಿ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಸದಸ್ಯ ರಾದ ಟಿ.ಕೆ. ಕಾವೇರಪ್ಪ, ಬಿ.ಬಿ. ಈರಪ್ಪ, ಟಿ.ಕೆ. ದೇವಯ್ಯ, ಸುರೇಶ್ ಬಾಲಕೃಷ್ಣ, ಜಿ.ಜಿ. ಬಾಬು, ಆಲಿ ಅವರನ್ನು ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆ ಸನ್ಮಾನಿಸಿ, ಗೌರವಿಸಲಾಯಿತು.
ನಂತರ ಗ್ರಾಮದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ರೇವತಿ, ಪೂಜಾ, ನೀಹಾಲ, ನೌಷಾದ್, ಕೀರ್ತನ, ನದೀಯ, ಸಚಿನ್, ರಮ್ಯ, ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಾದ ಪವಿತ್ರ, ದೀಕ್ಷಿತ, ಹೃತಿಕ, ಧನ್ಯ, ಐಶ್ವರ್ಯ, ಜೀಶ್ಮ ಪ್ರಕಾಶ್, ಸುರೇಶ ಹಾಗೂ ಎಂ.ಕಾAನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಗಾನವಿ ಅವರನ್ನು ಸನ್ಮಾನಿಸಲಾಯಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.