ಮುಳ್ಳೂರು, ಸೆ. ೨೯: ಸಂಘದ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿಗೊಳ್ಳುತ್ತದೆ ಎಂದು ನಿಡ್ತ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ. ಶೇಷಾದ್ರಿ ಅಭಿಪ್ರಾಯಪಟ್ಟರು. ಅವರು ಸಮೀಪದ ನಿಡ್ತ ವಿ.ಪ್ರಾ.ಗ್ರಾ.ಕೃ,ಸ. ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಂಘವು ಕಳೆದ ಸಾಲಿಗೆ ರೂ. ೧೨ ಕೋಟಿ ೬೦ ಲಕ್ಷ ಸಾಲ ವಿತರಿಸಿದ್ದು ಇದರಲ್ಲಿ ರೂ. ೧೧ ಕೋಟಿ ೭೯ ಲಕ್ಷ ಕೆಸಿಸಿ ಸಾಲವನ್ನು ವಿತರಿಸಿದೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಸಂಘವು ರೂ. ೨೪, ೩೫,೭೬೫ ನಿವ್ವಳ ಲಾಭಗಳಿಸಿದ್ದು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭಗಳಿಸುವ ನಿರೀಕ್ಷೆ ಇದೆ ಎಂದರು. ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜೆ. ಮಂಜಪ್ಪ ವರದಿ ಮಂಡಿಸುತ್ತಾ, ಸಂಘದಲ್ಲಿ ಒಟ್ಟು ೨,೫೫೮ ಮಂದಿ ಸದಸ್ಯರಿದ್ದು ಸದಸ್ಯರ ಶೇರು ಹಣ ರೂ. ೧ ಕೋಟಿ ೪೦ ಲಕ್ಷ ಇರುತ್ತದೆ, ಸಂಘದ ಒಟ್ಟು ದುಡಿಯುವ ಬಂಡವಾಳ ರೂ. ೧೭ ಕೋಟಿ ೨೬ ಲಕ್ಷ ಇರುತ್ತದೆ, ಸಂಘದ ಕ್ಷೇಮನಿಧಿ ರೂ. ೬೫,೮೫,೦೪೩ ಇರುತ್ತದೆ ಎಂದರು. ಸಂಘವು ಡಿಸಿಸಿ ಬ್ಯಾಂಕಿನಿAದ ರೂ. ೧೧ ಕೋಟಿ ೭೬ ಲಕ್ಷ ರೂ. ಪಡೆದು ಪೂರ್ತಿ ಪಾವತಿಸಿದೆ, ಸಂಘದಲ್ಲಿ ೭೫ ಸ್ವಸಹಾಯ ಗುಂಪುಗಳಿದ್ದು ಗುಂಪಿನ ಉಳಿತಾಯ ರೂ. ೧೦ ಲಕ್ಷದ ೨೪ ಸಾವಿರ ಇರುತ್ತದೆ ಎಂದು ಮಾಹಿತಿ ನೀಡಿದರು.
ಮಹಾಸಭೆಯಲ್ಲಿ ಸಂಘದ ಪ್ರಗತಿ ಬಗ್ಗೆ ಚರ್ಚಿಸಲಾಯಿತು. ಸಂಘದ ಅಭಿವೃದ್ಧಿ ಮತ್ತು ಇತರ ವಿಷಯಗಳ ಕುರಿತು ಸಂಘದ ಹಿರಿಯ ನಿರ್ದೇಶಕ ಎನ್.ಬಿ. ನಾಗಪ್ಪ ಸಮಗ್ರ ಮಾಹಿತಿ ನೀಡಿದರು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ಪಿ. ತೀರ್ಥಾನಂದ ನಿರ್ದೇಶಕರಾದ ಎನ್.ಬಿ. ನಾಗಪ್ಪ, ಡಿ.ಬಿ. ಧರ್ಮಪ್ಪ, ಎಂ.ಎಸ್. ತಂಗಮ್ಮ, ಜಿ.ಬಿ. ಲಿಂಗರಾಜು, ಎಸ್.ಆರ್. ಕಾರ್ತಿಕ್, ಡಿ.ಎನ್. ಜಗದೀಶ್, ಎ.ಜೆ. ಪೊನ್ನಪ್ಪ, ಹೆಚ್.ಎಂ. ದೊಡ್ಡೇಗೌಡ, ಎನ್.ಆರ್. ಪುಟ್ಟಯ್ಯ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕಿ ಎಂ.ಕೆ. ಲಲಿತ, ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್ ಕುಮಾರ್, ಸಂಘದ ಸಿಬ್ಬಂದಿ ಎಂ.ಈ. ಹೂವಣ್ಣ, ಹೆಚ್.ಆರ್. ಧರಣಿ, ಜೆ.ಯು. ಕೃಪ ಮುಂತಾದವರು ಇದ್ದರು.