ಮಡಿಕೇರಿ, ಸೆ. ೨೮: ಎರಡನೇ ಮೊಣ್ಣಂಗೇರಿ ಗ್ರಾಮದ ಎ.ಜಿ. ಚಿನ್ನಪ್ಪ (ಅಚ್ಚಲ್ಪಾಡಿ ರಮೇಶ) ಅವರ ನಾಯಿಯನ್ನು ತಾ. ೨೬ರ ರಾತ್ರಿ ಚಿರತೆ ಎಳೆದೊಯ್ದಿದೆ. ಮನೆ ಬಾಗಿಲ ಬಳಿಯಿಂದ ನಾಯಿ ಯನ್ನು ಎಳೆದುಕೊಂಡು ಹೋಗಿದ್ದು, ಈ ಭಾಗದಲ್ಲಿ ಈ ಹಿಂದೆಯೂ ೪ ನಾಯಿಗಳು ಚಿರತೆ ಪಾಲಾಗಿದ್ದವು. ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಪೋಷಕರು ಭಯಪಡುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.