ಬೆಂಗಳೂರು, ಸೆ. ೨೮: ಕೊಡಗು ಜಿಲ್ಲೆಯ ಚೆಟ್ಟಳ್ಳಿ ವ್ಯಾಪ್ತಿಯ ಕೋಗಿಲಹಳ್ಳ ಎ ಎಸ್ಟೇಟ್ಗೆ ಈ ವರ್ಷದ ಪ್ರತಿಷ್ಟಿತ ಅರೇಬಿಕಾ ಕಾಫಿ ಪ್ರಶಸ್ತಿ ದೊರಕಿದೆ. ವಿಶ್ವಕಾಫಿ ಸಮ್ಮೇಳನದ ಅಂಗವಾಗಿ ಜರುಗಿದ ಅತ್ಯುತ್ತಮ ಭಾರತೀಯ ಕಾಫಿ ತೋಟಗಳಿಗಾಗಿನ ಸ್ಪರ್ಧಾ ವಿಭಾಗದಲ್ಲಿ ಖಾಸಗಿ ಕಾಫಿ ತೋಟವೊಂದು ಪ್ರಶಸ್ತಿಗೆ ಪಾತ್ರವಾದ ಹಿರಿಮೆಗೆ ಕಾರಣವಾಗಿದೆ. ಅಮೇರಿಕಾದಲ್ಲಿ ನವೆಂಬರ್ ೧೬ ರಂದು ಆಯೋಜಿತ ಅರೇಬಿಕಾ ತೋಟಗಳಿಗಾಗಿನ ವಿಶ್ವಮಟ್ಟದ ಸ್ಪರ್ಧೆಯ ಫೈನಲ್ ಹಂತಕ್ಕೆ ಇದೀಗ ಕೋಗಿಲಹಳ್ಳ ತೋಟದ ಮಾಲೀಕರನ್ನು ಆಹ್ವಾನಿಸಲಾಗಿದೆ. ಭಾರತದ ೨೭ ಕಾಫಿ ತೋಟಗಳು ಸ್ಪರ್ಧಾ ವಿಭಾಗದಲ್ಲಿದ್ದು ಸಂಸ್ಥೆ ವಲಯದಿಂದ ಟಾಟಾ ಕಾಫಿ ತೋಟವೂ ಆಯ್ಕೆಯಾಗಿದೆ. ಆದರೆ ಕೋಗಿಲಹಳ್ಳ ಎ ಎಸ್ಟೇಟ್ ಖಾಸಗಿ ಕಾಫಿ ತೋಟಗಳಿಂದ ಆಯ್ಕೆಯಾದ ತೋಟ ಎಂಬ ಹಿರಿಮೆಗೆ ಪಾತ್ರವಾಗಿದೆ.
ಕೋಗಿಲಹಳ್ಳ ಎ ಕಾಫಿ ತೋಟವು ಕೊಡಗಿನ ಹಳೆಯ ಕಾಫಿ ತೋಟಗಳಲ್ಲೊಂದಾಗಿದೆ. ರಾವ್ ಬಹುದ್ದೂರು ಮನೆಯಪಂಡ ಮುತ್ತಣ್ಣ ಅವರ ಕಾಲದಲ್ಲಿ ಈ ತೋಟವು ನಿರ್ವಹಿಸಲ್ಪಟ್ಟಿತ್ತು. ಇದೀಗ ಮನೆಯಪಂಡ ಕುಟುಂಬದ ಐದನೇ ತಲೆಮಾರು ಕೋಗಿಲಹಳ್ಳ ಎ ಎಸ್ಟೇಟ್ ನಿರ್ವಹಿಸುತ್ತಿರುವುದು ವಿಶೇಷ.
ರಾಸಾಯನಿಕಗಳನ್ನು ಬಳಸದೇ ಈ ತೋಟವನ್ನು ನಿರ್ವಹಿಸುತ್ತಾ ಬಂದಿದ್ದೇವೆ.
(ಮೊದಲ ಪುಟದಿಂದ) ಹಳೇ ಕಾಲದ ೫೦ಕ್ಕೂ ಹೆಚ್ಚಿನ ತಳಿಗಳನ್ನು ಹೊಂದಿರುವ ಕಾಡಿನ ಮರಗಳ ನೆರಳಿನಲ್ಲಿ ಕಾಫಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಭಾರತದ ಪ್ರಮುಖ ಕಾಫಿ ಮಾರುಕಟ್ಟೆ ಸಂಸ್ಥೆಯಾದ ಇಲ್ಲಿ ಕಾಫಿಯ ಪ್ರತಿನಿಧಿಗಳು ಇತ್ತೀಚೆಗೆ ತೋಟಕ್ಕೆ ಬಂದು ಕಾರ್ಮಿಕರ ವಸತಿ ಗೃಹ ಸೇರಿದಂತೆ ತೋಟದ ವಿವಿಧೆಡೆ ತೆರಳಿ ಪರಿಶೀಲಿಸಿದರು. ಇದೀಗ ಇಲ್ಲಿ ಕಾಫಿ ಸಂಸ್ಥೆ ನೀಡುವ ಅತ್ಯುತ್ತಮ ಅರೇಬಿಕಾ ಕಾಫಿಗಾಗಿನ ಪ್ರಶಸ್ತಿ ನಮ್ಮ ತೋಟಕ್ಕೆ ಲಭಿಸಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪೂರ್ತಿಯಿಂದ ಕಾಫಿ ನಿರ್ವಹಣೆಯಲ್ಲಿ ಸಕ್ರಿಯರಾಗಲು ಪ್ರಶಸ್ತಿ ಕಾರಣವಾಗಿದೆ. ಪ್ರಶಸ್ತಿ ನಮಗೆ ಅನಿರೀಕ್ಷಿತ ಎಂದು ತೋಟ ನಿರ್ವಹಣೆ ಮಾಡುತ್ತಿರುವ ಬಿದ್ದಂಡ ರಾಮ್ ಬೋಪಯ್ಯ ಶಕ್ತಿಯೊಂದಿಗೆ ಹರ್ಷ ವ್ಯಕ್ತಪಡಿಸಿದರು. - ಅನಿಲ್ ಹೆಚ್.ಟಿ
ಕೋಗಿಲಹಳ್ಳ ಎಸ್ಟೇಟ್ಗೆ ಅರೇಬಿಕಾ ಕಾಫಿ ಪ್ರಶಸ್ತಿ