ಕೂಡಿಗೆ, ಸೆ. ೨೯: ಕಂದಾಯ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗ ದಾಖಲೆಗಳನ್ನು ಹೆಬ್ಬಾಲೆ ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಯಿತು. ಹೆಬ್ಬಾಲೆ ಗ್ರಾಮದ ಸರ್ವೆ ನಂ. ೪೨ರಲ್ಲಿನ ೭ ಸೆಂಟ್, ಸರ್ವೆ ನಂಬರ್ ೭ ರಲ್ಲಿ ಸರಕಾರಿ ಕೆರೆ ಭಾಗವೆಂದು ಭೂಮಾಪಕರು ಸರ್ವೆಯ ಮೂಲಕ ಗುರುತಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಸ್ಥಳ ಪರಿಶೀಲನೆಯ ನಂತರ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಜಾಗದ ದಾಖಲೆಗಳನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ಉಪತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಫೀರ್ ಮಹಮ್ಮದ್, ಭೂಮಾಪನ ಅಧಿಕಾರಿ ವೆಂಕಟೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.