ಮಡಿಕೇರಿ, ಸೆ. ೨೯: ಮಡಿಕೇರಿ ತಾಲೂಕಿನ ಮೀನುಗಾರಿಕೆ ಇಲಾ ಖೆಯ ವತಿಯಿಂದ ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕ್ಷೇತ್ರಕಾರ್ಯ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗುಹ್ಯದಲ್ಲಿರುವ ಅಕ್ವಾ ವೆಂಚರ್ ಮತ್ಸö್ಯ ಸೇವಾ ಕೇಂದ್ರದಲ್ಲಿ ಒಂದು ದಿನದ ತರಬೇತಿಯನ್ನು ನೀಡಲಾಯಿತು. ಫಾರಂನ ಮಾಲೀಕ ಶ್ಯಾಮ್ ಅಯ್ಯಪ್ಪ ಅವರು ತಾವು ಕೈಗೊಂಡಿರುವ ಅಕ್ವಾಫೋನಿಕ್ ಮಾದರಿಯಲ್ಲಿ ಮೇಲೆ ಟೊಮೆಟೊ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ ಮುಂತಾದ ತರಕಾರಿ, ಪಾಲಕ್, ಲೆಟ್ಯುಸ್, ಜುಕಣಿ ಮುಂತಾದ ಹಸಿರು ಸೊಪ್ಪು ಮತ್ತು ಸ್ಟಾçಬೆರಿ ಹಣ್ಣಿನ ಬೆಳೆಗಳು, ಕೆಳಭಾಗದಲ್ಲಿ ಮೀನು ಮರಿ ಪಾಲನೆಯನ್ನು ನೀರನ್ನು ಶುದ್ಧೀಕರಿಸುವ ವಿಧಾನದ ಮೂಲಕ ಕೈಗೊಳ್ಳುವುದನ್ನು ವಿವರಿಸಿದರು. ಸ್ಥಳೀಯ ಮಟ್ಟದಲ್ಲಿ ಮಾರ್ಕೆಟಿಂಗ್ ಕಂಡುಕೊಳ್ಳುವ ವಿಧಾನಗಳ ಬಗ್ಗೆ ವಿವರಿಸಿದರು. ಈ ವಿಧಾನದಲ್ಲಿ ಗಿಡಗಳನ್ನು ಬೆಳೆಸುವಾಗ ಕೊಕೊಪಿಟ್, ಕ್ಲೇ ಬಾಲ್ಸ್ ಮುಂತಾದ ವಸ್ತುಗಳ ಬಳಕೆಯ ಪ್ರಮಾಣವನ್ನು ಪ್ರಾಯೋಗಿಕವಾಗಿ ತೋರಿಸ ಲಾಯಿತು. ಪಾಲನೆಯಲ್ಲಿರುವ ಸ್ಪಾನ್ ಫ್ರೆöÊ ಮೀನುಗಳ ಪೋಷಣೆಯ ವಿಧಾನದ ಪ್ರಾತ್ಯಕ್ಷಿಕೆ ನೀಡಲಾಯಿತು.

ಬಯೋಫ್ಲಾಕ್ ಟೆಕ್ನಾಲಜಿ ಬಳಸಿ ತಿಲಾಪಿಯ ಮೀನು ಮತ್ತು ಅಲಂಕಾರಿಕ ಮೀನುಗಳಾದ ಕೋಯಿ, ಗೋಲ್ಡ್ ಫಿಶ್ ಮುಂತಾದ ಮೀನುಗಳ ಉತ್ಪಾದನೆಯ ಕುರಿತ ಮಾಹಿತಿ ವಿನಿಮಯ ಮಾಡಿದರು. ಬೆಳೆದ ಮೀನಿನ ಮಾರುಕಟ್ಟೆ ವಿಧಾನದ ಕುರಿತ ವಿಚಾರ ವಿನಿಮಯ ಮಾಡಿದರು.

ತಾವು ಬೆಳೆಸಿದ ಮೀನಿನಿಂದ ತಯಾರಿಸಿದ ಮೌಲ್ಯ ವರ್ಧಿತ ಉತ್ಪನ್ನಗಳ ಮಾಹಿತಿ ವಿಶೇಷವಾಗಿತ್ತು. ಶ್ಯಾಂರವರ ಪತ್ನಿ ನಮಿತಾ ಅವರು ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ, ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಸಾಕಾಣೆಯ ಕುರಿತು ಮಾಹಿತಿ ನೀಡಿದರು. ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲಿ ಸಣ್ಣ ಸ್ಥಳಾವಕಾಶದಲ್ಲಿ ಹೇಗೆ ಅಲಂಕಾರಿಕ ಅಥವಾ ಆಹಾರದ ಮೀನು ಸಾಕಾಣೆ ಮಾಡಬಹುದು ಎನ್ನುವ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕೆಲವು ಗಂಭೀರ ಮತ್ತು ಕೆಲವು ಕುತೂಹಲದ ಪ್ರಶ್ನೆಗಳಿಗೆ ಈ ಸಂದರ್ಭದಲ್ಲಿ ಉತ್ತರಿಸಲಾಯಿತು. ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಹೇಮಂತ್, ಸಮಾಜ ಕಾರ್ಯ ಉಪನ್ಯಾಸಕರಾದ ಮಧುಕರ್ ಮತ್ತು ಕಾಂಚನ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಜೀತ್ ವಂದಿಸಿದರು.