ಸುಂಟಿಕೊಪ್ಪ, ಸೆ. ೨೭: ಸುಂಟಿಕೊಪ್ಪ ಫ್ರೆಂಡ್ಸ್ ಎಫ್.ಸಿ. ವತಿಯಿಂದ ಎರಡನೇ ವರ್ಷದ ‘ಎಸ್ಎಂಎಸ್ಎA’ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿಯು ತಾ. ೩೦ ಮತ್ತು ಅ. ೧ ರಂದು ನಡೆಯಲಿದೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಫುಟ್ಬಾಲ್ ಪಂದ್ಯಾವಳಿಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಅವರು ಚಾಲನೆ ನೀಡಲಿದ್ದಾರೆ.