ಗೋಣಿಕೊಪ್ಪಲು, ಸೆ. ೨೭ : ಮೇಯುತ್ತಿದ್ದ ಎಮ್ಮೆಯನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬಾಳೆಲೆ ಸಮೀಪದ ದೇವನೂರು ಗ್ರಾಮದಲ್ಲಿ ನಡೆದಿದೆ.

ದೇವನೂರು ಗ್ರಾಮದ ರಾಜಪುರ ನಿವಾಸಿ ಪಾರುವಂಗಡ ಪ್ರವೀಣ್ ಅವರಿಗೆ ಸೇರಿದ ಎಮ್ಮೆಯೂ ಎಂದಿನAತೆ ಮೇಯಲು ಸಮೀಪದ ಅರಣ್ಯ ಅಂಚಿನತ್ತ ತೆರಳಿತ್ತು. ಈ ವೇಳೆ ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಹುಲಿ ಸಂರಕ್ಷಿತ ಪ್ರದೇಶದಿಂದ ಬಂದ ಹುಲಿಯು ಮೇಯುತ್ತಿದ್ದ ಎಮ್ಮೆಯ ಮೇಲೆರಗಿ ಕೊಂದು ಹಾಕಿದೆ.

ಸುದ್ದಿ ತಿಳಿದ ಜಾನುವಾರು ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಇಲಾಖೆಯ ನಿಯಮದಂತೆ ಜಾನುವಾರು ಮಾಲೀಕರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದರು.