ಗೋಣಿಕೊಪ್ಪಲು, ಸೆ. ೨೭: ಗೋಣಿಕೊಪ್ಪ ಸಮೀಪದ ಗೊಟ್ಟಡ ಕಳತ್ಮಾಡುವಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗ್ರಾಮಸ್ಥರೆಲ್ಲರೂ ಒಗ್ಗೂಡಿ ಶ್ರೀ ಅಯ್ಯಪ್ಪ ಕ್ರೀಡಾ ಮತ್ತು ಸಾಂಸ್ಕೃತಿಕ ಸೇವಾ ಸಂಘದಿAದ ಆಯೋಜನೆಗೊಂಡಿದ್ದ ೨೫ನೇ ವರ್ಷದ ಶ್ರೀ ಗೌರಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬೆಳ್ಳಿ ಮಹೋತ್ಸವದ ಅಂಗವಾಗಿ ಸ್ಥಳೀಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳ್ಳಿ ಮಹೋತ್ಸವದ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಮಡಿಕೇರಿ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಜನತೆ ಇದರ ಪ್ರಯೋಜನ ಪಡೆದರು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯರಿಗೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ ಸ್ಲೋಬೈಕ್ ರೇಸ್, ಫುಟ್ಬಾಲ್ ಪಂದ್ಯಾಟ ನಡೆಯಿತು. ಪುಟಾಣಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ಗಮನ ಸೆಳೆಯಿತು. ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು.

ಫುಟ್ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಹೊಸೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಜಾತಿ, ಮತ ಬೇಧವಿಲ್ಲದೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗ್ರಾಮದ ಒಗ್ಗಟ್ಟನ್ನು ಕಾಪಾಡಿದಂತಾಗಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಗಳು ನಡೆಯುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗಿದೆ. ಸ್ಥಳೀಯರ ಸಹಕಾರದಿಂದ ಗಣೇಶೋತ್ಸವದ ಅಂಗವಾಗಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕ್ರೀಡಾಪಟುಗಳು ಇದರ ಸದುಪಯೋಗಪಡಿಸಿಕೊಂಡು ಎಲ್ಲರೂ ಸಹೋದರರಂತೆ ಗ್ರಾಮದಲ್ಲಿ ಅನ್ಯೋನ್ಯವಾಗಿ ಜೀವನ ಸಾಗಿಸುವಂತಾಗಲಿ ಎಂದರು.

ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಹೊಳೆಕೆರೆ ಪ್ರಭು ಉತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕರಾದ ಬಲ್ಯಂಡ ವೇಣು ಮಂದಣ್ಣ, ಜಮ್ಮಡ ಜಯ ಜೋಯಪ್ಪ, ಕತ್ರಿಕೊಲ್ಲಿ ನಂಜುAಡ ಕುಮಾರ್, ವಿ.ಎಂ. ಗಿರಿಯಪ್ಪ, ಹೊಸೂರು ಗ್ರಾ.ಪಂ. ಪಿಡಿಓ ಎಂ.ಡಿ. ಶ್ರೀನಿವಾಸ್, ಗ್ರಾ.ಪಂ. ಸದಸ್ಯರಾದ ಕೊಲ್ಲೀರ ಧನುಪೂಣಚ್ಚ, ವಿ.ವಿ. ಪ್ರಕಾಶ್, ಸುಶೀಲ ಸೇರಿದಂತೆ ಸಮಿತಿಯ ಉಪಾಧ್ಯಕ್ಷ ಬಿ.ಎ. ಚೇತನ್, ಕಾರ್ಯದರ್ಶಿ ಬಿ.ಸಿ. ಗಿರೀಶ್, ಸದಸ್ಯರುಗಳಾದ ಬಿ.ಎಲ್. ಕಾರ್ತಿಕ್, ನಂಜುAಡ ಕುಮಾರ್, ಪ್ರಕಾಶ್, ವಿ.ಕೆ. ಪ್ರಭಾಕರ್, ಎಂ.ಟಿ. ಯತೀಶ್, ಹೆಚ್.ಎಲ್. ಸುರೇಂದ್ರ, ಬಿ.ಕೆ. ಶ್ರೀಧರ್, ವಿ.ಪಿ. ಚಿದಾನಂದ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ತಜ್ಞ ವೈದ್ಯರುಗಳಾದ ಡಾ.ಅನನ್ಯ ರಾಜಶೇಖರ್, ಡಾ. ವಿಜಯಲಕ್ಷಿö್ಮ, ಡಾ. ಹರಿಪ್ರಿಯ, ಡಾ. ಸಂತೋಷ್ ಬೈರವ, ಸೇವಾ ಭಾರತಿಯ ಪ್ರಮುಖರಾದ ಟಿ.ಸಿ. ಚಂದ್ರನ್, ಕಾಯೇರ ಕಿರಣ್, ಪದ್ಮನಾಭ, ಮುರುಗೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.