ಶನಿವಾರಸಂತೆ, ಸೆ. ೨೭: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ೩ ಮುಖ್ಯ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವೈದ್ಯಾಧಿಕಾರಿ ಡಾ. ಬಿಪಿನ್ ಮಾತನಾಡಿ, ಕಾರ್ಯಕ್ರಮದ ಮುಖ್ಯ ಉದ್ದೇಶ ‘ಆಯುಷ್ಮಾನ್ ಆಪ್ ಕೆ ದ್ವಾರ್’ - ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸುವುದು, ಆಯುಷ್ಮಾನ್ ಕಾರ್ಡ್ ಮಾಡಿಸಿಕೊಡುವುದು, ವಿತರಿಸುವುದು ಹಾಗೂ ಆಯುಷ್ಮಾನ್ ಮೇಳವನ್ನು ಪ್ರತಿವಾರ ಆರೋಗ್ಯ ಮತ್ತು ಸ್ವಾಸ್ಥö್ಯ ಕೇಂದ್ರಗಳಲ್ಲಿ ನಡೆಸುವುದು ಎಂದರು.

ಬಿಎಚ್ ಇಓ ಟಿ.ಕೆ. ಮಂಜುಳಾ ಮಾತನಾಡಿ, ಗ್ರಾಮೀಣ, ವಿಭಾಗ ಮಟ್ಟ ಹಾಗೂ ಗ್ರಾಮ ಸಭೆಗಳಲ್ಲಿ ಆರೋಗ್ಯ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಸೇವೆ ಒದಗಿಸಲಾಗುವುದು. ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಆರೋಗ್ಯ ಸೇವೆಯನ್ನು ಒದಗಿಸಿಕೊಡುವುದೇ ಆಯುಷ್ಮಾನ್ ಭವ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ವೈದ್ಯಾಧಿಕಾರಿ ಡಾ. ಕನ್ನಿಕಾ, ಲ್ಯಾಬ್ ಟೆಕ್ನಿಷಿಯನ್ ರಶೀದ್, ಪ್ರವೀಣ್ ಇತರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.