ಮಡಿಕೇರಿ, ಸೆ. ೨೬: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕ್) ಮಡಿಕೇರಿ ವಿಭಾಗ ವ್ಯಾಪ್ತಿಯ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಸಂಬAಧಿಸಿದAತೆ ಗೃಹ ಜ್ಯೋತಿ ಯೋಜನೆ ಪೂರ್ವದ ವಿದ್ಯುತ್ ಬಾಕಿ ಶುಲ್ಕ ಪಾವತಿಸಲು ತಾ. ೩೦ ಕಡೆಯ ದಿನವಾಗಿದೆ ಎಂದು ಸೆಸ್ಕ್ನ ಪ್ರಕಟಣೆ ತಿಳಿಸಿದೆ.

ಬಾಕಿ ಶುಲ್ಕ ಪಾವತಿಗೆ ಈಗಾಗಲೇ ತಾ. ೩೦ರ ಗಡುವು ನೀಡಲಾಗಿತ್ತು. ಅದರಂತೆ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ. ಬಾಕಿ ಪಾವತಿಸದ ಗ್ರಾಹಕರಿಗೆ ಕೊನೆಯ ೪ ದಿನಗಳ ಕಾಲಾವಕಾಶವಿದೆ. ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ಅ. ೧ ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಎಚ್ಚರಿಸಿದ್ದಾರೆ.