ಚೆಯ್ಯಂಡಾಣೆ, ಸೆ. ೨೬: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್. ಎಸ್.ಎಸ್.ಎಫ್ ಚೆರಿಯಪರಂಬು ಕಲ್ಲುಮೊಟ್ಟೆ ಶಾಖೆ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶ್ರಮದಾನ ನಡೆಯಿತು.

ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯಿಂದ ಚೆರಿಯಪರಂಬು ಕಲ್ಲುಮೊಟ್ಟೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಬೆಳೆದು ನಿಂತಿದ್ದ ಕಾಡುಗಳನ್ನು ಸಂಘಟನೆಯ ಕಾರ್ಯಕರ್ತರು ಯಂತ್ರೋಪಕರಣಗಳನ್ನು ಬಳಸಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ. ಮಾಹಿನ್, ಎಸ್‌ಎಸ್‌ಎಫ್ ಕಾರ್ಯದರ್ಶಿ ಸಿ.ಎಂ. ಉಸ್ಮಾನ್, ಎಸ್‌ವೈಎಸ್ ಅಧ್ಯಕ್ಷ ಮಹಮ್ಮದ್, ದಆವಾ ಕಾರ್ಯದರ್ಶಿ ಇಬ್ರಾಹಿಂ, ಸದಸ್ಯರಾದ ಹನೀಫ್, ಷಂಶುದ್ದೀನ್, ನಜ್ಮುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

ಚೆಯ್ಯAಡಾಣೆ, ಸೆ. ೨೬: ಎಡಪಾಲದ ಪೋಯಕೆರೆ ಫ್ರೆಂಡ್ಸ್ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸದಸ್ಯರು ಶ್ರಮದಾನ ನಡೆಸಿದರು.

ಬಾವಲಿ ಮುಖ್ಯ ರಸ್ತೆಯಿಂದ ಎಡಪಾಲ ಮಾರ್ಗವಾಗಿ ಕಡಂಗಕ್ಕೆ ಸಂಚರಿಸುವ, ಎಡಪಾಲ ಜುಮಾ ಮಸೀದಿಗೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಬೆಳೆದು ನಿಂತಿದ್ದ ಕಾಡುಗಳನ್ನು ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಿ ಹಾಗೂ ರಸ್ತೆಯಲ್ಲಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಯಕೆರೆ ಫ್ರೆಂಡ್‌ನ ಉಮ್ಮರ್ ಸಿ.ಆರ್.ಪಿ, ಬಷೀರ್ ಬಿ.ಎಸ್.ಆರ್, ಅಬ್ದುಲ್ಲ ಎ.ಎಂ, ಅಬ್ಬಾಸ್ ಪಿ.ಎ, ಸಲಾಂ ಪಿ.ಎ, ಸಲಾಂ ಪಿ.ಎಂ ಮತ್ತಿತರರು ಇದ್ದರು.