ಸೋಮವಾರಪೇಟೆ, ಸೆ. ೨೬: ಹಬ್ಬಾಚರಣೆಗಳು ಪರಸ್ಪರ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಸಂಸ್ಕೃತಿಯ ಭಾಗವಾಗಿರುವ ಆಚರಣೆಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರಬೇಕಿದೆ ಎಂದು ನಿವೃತ್ತ ಜಿಲ್ಲಾ ಕನ್ನಡ ಭಾಷಾ ಪಠ್ಯಪುಸ್ತಕ ವಿಷಯ ಪರಿವೀಕ್ಷಕಿ ಮನುಭಾಯಿ ಅಭಿಪ್ರಾಯಿಸಿದರು.
ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ವತಿಯಿಂದ ಸ್ಥಳೀಯ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಬಾಗಿನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪರಿಷತ್ನಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಬ್ಬಗಳು ಆಡಂಬರಗಳಾಗದೇ ಅರ್ಥಪೂರ್ಣವಾಗಬೇಕು. ಸಂಸ್ಕೃತಿಯ ಭಾಗವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಹಬ್ಬಗಳ ವಿಶೇಷ ಮತ್ತು ಅವುಗಳ ಆಚರಣೆಯ ಮಹತ್ವದ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್ ವಹಿಸಿದ್ದರು. ಪರಿಷತ್ನ ನಿರ್ದೇಶಕಿ ವಿಜಯಲಕ್ಷಿö್ಮÃ ಸುರೇಶ್, ಉಪಾಧ್ಯಕ್ಷೆ ಸಂಧ್ಯಾರಾಣಿ ಕೃಷ್ಣಪ್ಪ ಅವರುಗಳು ಗೌರಿ ಹಬ್ಬದ ಮಹತ್ವ ಹಾಗೂ ಬಾಗಿನ ವಿತರಣೆಯ ಉದ್ದೇಶದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪದಾಧಿಕಾರಿ ಹಾ.ತಿ. ಜಯಪ್ರಕಾಶ್ ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಪರಿಷತ್ನ ಉಪಾಧ್ಯಕ್ಷ ದಾಮೋಧರ್, ಕಾರ್ಯದರ್ಶಿ ಎಂ.ಎ. ರುಬೀನಾ, ಕೆ.ಎನ್. ದೀಪಕ್, ವಾಸಂತಿ ರವೀಂದ್ರ, ದೀಪಿಕಾ ಸುದರ್ಶನ್, ಆಶಾ ಪುಟ್ಟರಾಜು, ಜಲಾ ಕಾಳಪ್ಪ, ಅಶ್ವಿನಿ ಕೃಷ್ಣಕಾಂತ್, ರೇಣುಕಾ ವೆಂಕಟೇಶ್, ಸುಶೀಲ ಹಾನಗಲ್, ಅರುಣ ಕುಸುಬೂರು, ದುಷ್ಯಂತ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪರಿಷತ್ನ ಸದಸ್ಯರುಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮಹಿಳಾ ಸದಸ್ಯರಿಗೆ ಬಾಗಿನ ವಿತರಿಸಲಾಯಿತು.