ಸಿದ್ದಾಪುರ : ನೆಲ್ಯಹುದಿಕೇರಿಯಲ್ಲಿರುವ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಲೋಕೇಶ್ ನೇತೃತ್ವದ ಬಣ ಗೆಲುವು ಸಾಧಿಸಿತು.
ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು ೧೦೬೨ ಸದಸ್ಯರಿದ್ದು, ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ೯೮೪ ಮಂದಿ ಮತದಾನ ಮಾಡಿದ್ದು ೯೭ ಮತಗಳು ಅಸಿಂಧುಗೊAಡಿವೆ. ಚುನಾವಣೆಯಲ್ಲಿ ಹಿಂದುಳಿದ ವರ್ಗದ ಸಾಲಗಾರ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿದ ವಿ.ಕೆ. ಲೋಕೇಶ್ ೫೦೬ ಮತಗಳನ್ನು ಪಡೆದು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದರು. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಭಾನು ಪ್ರಕಾಶ್ ೫೦೦ ಮತಗಳನ್ನು ಪಡೆದು ಎರಡನೇ ಅತ್ಯಧಿಕ ಮತಗಳನ್ನು ಪಡೆದರು. ಉಳಿದಂತೆ ಪ್ರಸನ್ನ ಕೆ.ಎಂ., ಅಶೋಕ್ ಟಿ.ಸಿ., ಸುನಿಲ್ ಕುಮಾರ್ ವಿ.ಕೆ., ಪ್ರಸನ್ನ ಟಿ.ಎ., ತೇಜಸ್ ಬಿ.ಎಂ., ಸುಪ್ರಿಮ್ ಕೆ.ಜೆ., ಅಚ್ಚಯ್ಯ ಪಿ.ಸಿ., ಸುಧರ್ಮ ಆರ್, ಹರಿಣಿ ಎಂ.ಎನ್., ಧರ್ಮಲಿಂಗ ಎಂ. ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ ಪ್ರಮೀಳಾ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ.
ಎದುರಾಳಿ ಬಣದಲ್ಲಿ ೧೩ ಮಂದಿ ಪೈಕಿ ೧೨ ಮಂದಿ ಸೋಲು ಅನುಭವಿಸಿದರು. ಪರಿಶಿಷ್ಟ ಪಂಗಡ ಮೀಸಲಿನಿಂದ ಪ್ರತಿಸ್ಪರ್ಧಿ ಇಲ್ಲದ ಹಿನ್ನೆಲೆ ಅವಿರೋಧ ಆಯ್ಕೆಯಾಗಿ ಒಂದು ಸ್ಥಾನ ಮಾತ್ರ ಬಣ ಪಡೆಯಿತು. ಚುನಾವಣಾಧಿಕಾರಿಯಾಗಿ ಕರಣ್ ಕಾರ್ಯಪ್ಪ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಪುಟ್ಟಿಚಂಡ ಕಾರ್ಯಪ್ಪ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕೂಡಿಗೆ : ಹೆಬ್ಬಾಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಉಪಾಧ್ಯಕ್ಷ ಹೆಚ್, ಆರ್ ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆಯಿತು
ಸಭೆಯಲ್ಲಿ ಪ್ರಮುಖವಾಗಿ ಸಂಘದ ಹಳೆಯ ಕಟ್ಟಡವು ಗ್ರಾಮ ಪಂಚಾಯಿತಿ ಸಮೀಪದಲ್ಲಿದ್ದು, ಆ ಜಾಗಕ್ಕೆ ಗ್ರಾಮ ಪಂಚಾಯಿತಿಯವರು ಬೇಲಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಅನೇಕ ಸದಸ್ಯರು ಒತ್ತಾಯ ಮಾಡಿದರು. ಅಲ್ಲದೆ ಸಂಘದ ಮೂಲಕ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ತೀರ್ಮಾನ ಕೈಗೊಂಡರು. ಸಭೆಯ ನಂತರ ಈಗಾಗಲೇ ಜಾಗದಲ್ಲಿರುವ ಬೇಲಿಯನ್ನು ತೆರವುಗೊಳಿಸಲು ಹಾಜರಿದ್ದ ಸದಸ್ಯರು ಮತ್ತು ಆಡಳಿತ ಮಂಡಳಿಯ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ಅಭಿವೃದ್ಧಿಗೆ ಪೂರಕವಾಗಿಮಧುಸೂದನ್, ರಾಮಶೆಟ್ಟಿ, ಬಸವರಾಜ್, ಮೋಹನ್, ಲೋಕೇಶ್, ಜಯಮ್ಮ, ಕಿರಣ್ನವರು ಅನೇಕ ಚರ್ಚೆಗಳನ್ನು ಮಾಡಿದರು. ಹಾಜರಿದ್ದ ಸದಸ್ಯರು ಸಂಘದ ವ್ಯಾಪ್ತಿಯಲ್ಲಿ ಮುಂದಿನ ತಿಂಗಳಲ್ಲಿ ನಡೆಯುವ ಆಡಳಿತ ಮಂಡಳಿಯ ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸುವ ವಿಷಯದ ಬಗ್ಗೆ ಬಾರಿ ಚರ್ಚೆಗಳು ನಡೆದವು. ಹೊಸ ಸಹಕಾರದ ಆದೇಶದಂತೆ ಮತ ಚಲಾಯಿಸುವ ಹಕ್ಕನ್ನು ತೆಗೆದುಕೊಳ್ಳುವಂತೆ ತೀರ್ಮಾನ ಕೈಗೊಳ್ಳಲಾಯಿತು. ಹಾಜರಿದ್ದ ಸದಸ್ಯರು ತಮ್ಮ, ತಮ್ಮ ಅಭಿಪ್ರಾಯಗಳನ್ನು ಸದಸ್ಯರು ಸಭೆಯಲ್ಲಿ ವ್ಯಕ್ತಪಡಿಸಿದರು. ಅಲ್ಲದೆ೨೦೨೨-೨೩ ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮೇಲೆ ಸಂಬAಧಿಸಿದAತೆ ಅನೇಕ ಚರ್ಚೆಗಳು, ಸಾಲ ಸೌಲಭ್ಯಗಳು ಸೇರಿದಂತೆ ಸಂಘದ ಸದಸ್ಯರುಗಳಿಗೆ ಸಂಬAಧಿಸಿದ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು ಅಲ್ಲದೆ ಹಳೆ ಬೆಂಕಿ ಪಟ್ಟಣ ಕಾರ್ಖಾನೆಯ ಜಾಗವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸವಿಸ್ತಾರವಾದ ಚರ್ಚೆಗಳು ಸಭೆಯಲ್ಲಿ ನಡೆದವು. ರೈತರಿಗೆ ನೀಡುವ ಕೆಸಿಸಿ ಸಾಲ ಮತ್ತು ಮರು ವಸೂಲಾತಿಯ ಬಗ್ಗೆ ಚರ್ಚೆಗಳು ನಡೆದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಹೆಚ್, ಆರ್, ಮಣಿಕಂಠ ಮಾತನಾಡುತ್ತಾ ಸಂಘವು ಈ ಸಾಲಿನಲ್ಲಿ ಎಲ್ಲಾ ವ್ಯವಹಾರ ವೈವಾಟುಗಳನ್ನು ನಡೆಸಿ ಈ ಸಾಲಿನಲ್ಲಿ ೫ ಲಕ್ಷ ೧೯ ಸಾವಿರದ ೧೭೮ ರೂಗಳ ನಿವ್ವಳ ಲಾಭವನ್ನು ಗಳಿಸಿದೆ. ಈ ಸಾಲಿನಲ್ಲಿ ಸಂಘ ವು ವಿವಿಧ ಸಾಲ ಸೌಲಭ್ಯಗಳನ್ನು ರೈತರಿಗೆ ನೀಡುವ ಮೂಲಕ ಮತ್ತು ಇತರೆ ವ್ಯವಹಾರಗಳ ಮೂಲಕ ೫, ಲಕ್ಷ ೧೯,ಸಾವಿರದ ೧೭೮ ರೂ ನಿವ್ವಳ ಲಾಭವನ್ನು ಗಳಿಸಲು ರೈತ ಸದಸ್ಯರ ಸಹಕಾರ ಮುಖ್ಯವಾಗಿರುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ರೈತರು ಪಡೆದ ಸಾಲವನ್ನು ಅವಧಿಯ ಮುನ್ನ ಕಟ್ಟಿ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿಯನ್ನು ಮಾಡಿದರು.
ಮುಂದಿನ ದಿನಗಳಲ್ಲಿ ರೈತರಿಗೆ ಬೇಡಿಕೆಯ ಅನುಗುಣವಾಗಿ ವಿವಿಧ ಸಾಲಗಳ ಜೊತೆಗೆ ಹೊಸ ಸಾಲಗಳಾದ ಹೈನುಗಾರಿಕೆ, ದ್ವಿಚಕ್ರ ವಾಹನ, ಆಟೋರಿಕ್ಷಾ, ಮಿನಿ ವಾಹನಗಳು ಮತ್ತು ಮಾರ್ಟಗೇಜ್,ಸಾಲಗಳನ್ನು ನೀಡಲು ಅಡಳಿತ ಮಂಡಳಿ ಚಿಂತಿಸಿದ್ದು ಅದರ ಮೂಲಕ ರೈತರು ಸದುಪಯೋಗ ಪಡಿಸಿಕೊಳ್ಳಲು ಮನವಿಯನ್ನು ಮಾಡಿದರು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಹೆಚ್.ಎನ್. ಗಿರೀಶ್ ವಾಚಿಸಿದರು. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಮತ್ತು ಪದವಿ ಪೂರ್ವ ಕಾಲೇಜು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭ ಸಭೆಯಲ್ಲಿ ನಿರ್ದೇಶಕರಾದ ಹೆಚ್.ಸಿ. ಜಲೇಂದ್ರರ, ಹೆಚ್.ಟಿ. ದಿನೇಶ್, ಹೆಚ್.ಕೆ. ಕವಿತಾ, ಎಂ.ಎA. ಮಹದೇವ, ಹೆಚ್. ಎನ್. ಮಹದೇವ, ಹೆಚ್.ಜೆ. ಪರಮೇಶ, ಹೆಚ್.ಟಿ. ಮೋಹನ್, ಹೆಚ್.ಎಲ್. ರವಿಚಂದ್ರ, ಎಂ.ಎಸ್. ಶಶಿಕಲಾ ಹೆಚ್.ಜೆ. ಸ್ವಾಮಿ, ಹೆಚ್. ವಿ. ಸೋಮಶೇಖರ್, ಸಹಕಾರ ಸಂಘದ ಮೇಲ್ವಿಚಾರಕ ತುಂಗರಾಜ್, ಎಂ.ಕೆ. ಗೀತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್. ಗಿರೀಶ್ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು. ಸ್ವಾಗತ ವಿನಯಕುಮಾರ್, ಹೆಚ್.ಟಿ. ಮೋಹನ್ ವಂದಿಸಿದರು. ಹೊದ್ದೂರು: ಈ ಬಾರಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ತಾರೀಕು ೨೪ ರಂದು ನಡೆಸಲಾದ ಆಯ್ಕೆ ಚುನಾವಣೆಯಲ್ಲಿ ಎಲ್ಲಾ ೧೩ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸುವುದರ ಮೂಲಕ ಮತ್ತೊಮ್ಮೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ.
ಹೊದ್ದೂರು ಬ್ಯಾಂಕಿನ ೨೦೨೩ ರಿಂದ ೨೦೨೮ ನೇ ಸಾಲಿನ ೫ ವರ್ಷ ಅವಧಿಗೆ ಆಡಳಿತ ಮಂಡಳಿ ಸದಸ್ಯರಾಗಿ ಸಾಮಾನ್ಯ ಕ್ಷೇತ್ರದಿಂದ ಸಂಘದ ಹಾಲಿ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ (೨೭೬) ಮತ, ಹಿಂದುಳಿದ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಹಾಲಿ ಉಪಾಧ್ಯಕ್ಷ ವಾಂಚೀರ ರನ್ನ ಅಜಯಕುಮಾರ್ (೨೬೫) ಮತಗಳಿಸಿ ಜಯಗಳಿಸಿದರು. ಇನ್ನುಳಿದಂತೆ ಸಾಮಾನ್ಯ ಕ್ಷೇತ್ರದಿಂದ ಚೌರಿರ ಅಪ್ಪಣ್ಣ (೨೫೦), ನೆರವಂಡ ಅನೂಪ್ ಉತ್ತಯ್ಯ (೨೩೧), ಕರ್ಣಯನ ಬಿ. ಪ್ರಭಾಕರ (೨೨೭), ಕಡ್ಲೆರ ಕೆ.ಹರ್ಷ (೨೨೨), ಚೌರಿರ ಎಸ್. ಉತ್ತಪ್ಪ (೨೦೦) ಹಿಂದುಳಿದ ಪ್ರವರ್ಗ ಎ ಮೀಸಲು ಕ್ಷೇತ್ರದ ಮೇಕಂಡ ಬಿ. ಪೆಮ್ಮಯ್ಯ (೨೫೧), ಮಹಿಳಾ ಮೀಸಲು ಕ್ಷೇತ್ರದಿಂದ ಮಂಡೇಪAಡ ತ್ಯಾಗಿ ಅಕ್ಕವ್ವ (೨೨೭) ಹಾಗೂ ಚೆಟ್ಟಿಮಾಡ ಹೇಮಮಾಲಿನಿ (೨೦೨), ಸಾಲಗಾರರಲ್ಲದ ಕ್ಷೇತ್ರದಿಂದ ಸಣ್ಣಜನ ಎಂ. ವೀಣಾ (೬೫) ಮತಗಳನ್ನು ಪಡೆದು ಜಯಗಳಿಸಿದರು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಮರಾಠಿ ಕೆ. ರಾಮಣ್ಣ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಹರಿಜನ ಆರ್. ಗಣೇಶ್ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಬ್ಯಾಂಕಿನ ೪೮೦ ಸದಸ್ಯರುಗಳು ಮತ ಚಲಾಯಿಸಿದರು. ಚುನಾವಣಾ ಅಧಿಕಾರಿಯಾಗಿ ಮಡಿಕೇರಿ ಸಹಕಾರ ಸಂಘಗಳ ಉಪನಿಬಂಧಕ ಅಧೀಕ್ಷಕರಾದ ಪಿ. ಆಶಾ ಗಣೇಶ್ ಕಾರ್ಯನಿರ್ವಹಿಸಿದರು.ವ್ಯಾಪ್ತಿಯಲ್ಲಿ ಮುಖ್ಯ ಕಚೇರಿ ಹಾಗೂ ಎರಡು ಶಾಖೆಗಳು ಸೇರಿ ೨೨ ಜನ ಪಿಗ್ಮಿ ಸಂಗ್ರಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಾಯಿದೆ ಮೀರಿದ ಬಾಕಿದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಉಪನಿಬಂಧಕರು ಸೂಚನೆ ನೀಡಿದ್ದರೆ. ಸಂಘದ ಹಣ ಹಾಗೂ ಅಧಿಕಾರ ದುರುಪಯೋಗ ಪಡಿಸಿರುವ ಮೂರು ಸಿಬ್ಬಂದಿಗಳನ್ನು ಸಂಘದಿAದ ಖಾಯಂ ಆಗಿ ವಜಾಗೊಳಿಸಲಾಗಿದೆ ಎಂದು ಮಹಾಸಭೆಗೆ ತಿಳಿಸಿದರು.
ಸಂಘದ ಮೂರು ಸಿಬ್ಬಂದಿಗಳು ಈ ಹಿಂದೆ ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು. ಸ್ವಲ್ಪ ಭಾಗವನ್ನು ಮರು ಪಾವತಿ ಮಾಡಿದ್ದಾರೆ. ಉಳಿದ ಹಣ ಮರುಪಾವತಿಗೆ ಬಾಕಿ ಇದೆ. ಈಗಾಗಲೇ ಆಡಿಟ್ ವರದಿಯಲ್ಲಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮಹಾಸಭೆಯು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿದರು. ಈ ವೇಳೆ ಸದಸ್ಯರಾದ ಮುಧೋಶ್ ಪೂವಯ್ಯ, ಗಣೇಶ್ ರೈ, ಕೊಲ್ಲೀರ ಗೋಪಿ ಚಿಣ್ಣಪ್ಪ, ಮತ್ತಿತ್ತರು ಕಾನೂನಿನ ಕ್ರಮ ಕೈಗೊಳ್ಳುವುದು ಉತ್ತಮ ಬೆಳವಣಿಗೆ ಮಾನವೀಯತೆಯಿಂದ ಮತ್ತೊಂದು ಅವಕಾಶವನ್ನು ನೀಡಿ ದುರುಪಯೋಗದ ಹಣವನ್ನು ಮರುಪಾವತಿಸಲು ಒಂದು ಅವಕಾಶವನ್ನು ಅಂತಿಮವಾಗಿ ನೀಡುವಂತೆ ಅಧ್ಯಕ್ಷರಿಗೆ ಸಲಹೆ ನೀಡಿದರು.
ಮಹಾಸಭೆಯ ಸದಸ್ಯರ ಸಲಹೆ ಮೇರೆ ಮಾತನಾಡಿದ ಅಧ್ಯಕ್ಷ ಕಿರಿಯಮಾಡ ಅರುಣ್ ಈಗಾಗಲೇ ಒಂದು ವರ್ಷದ ಸಮಯವನ್ನು ನೀಡಲಾಗಿದೆ. ಮಹಾಸಭೆ ತಿಳಿಸಿದಂತೆ ದುರುಪಯೋಗದ ಹಣವನ್ನು ಮರುಪಾವತಿಸಲು ಮತ್ತೊಂದು ಅವಕಾಶ ನೀಡಲಾಗುತ್ತದೆ. ನಿಗದಿತ ಸಮಯದೊಳಗೆ ಹಣವನ್ನು ಮರುಪಾವತಿಸದಿದ್ದಲ್ಲಿ ಕ್ರಿಮಿನಲ್ ಮೊಕದಮ್ಮೆ ದಾಖಲಿಸಲಾಗುತ್ತದೆ ಎಂದು ಮಹಾಸಭೆಗೆ ತಿಳಿಸಿದರು. ಸಭೆಯು ಇದಕ್ಕೆ ಒಪ್ಪಿಗೆ ಸೂಚಿಸಿತು.
ಸಭೆಯಲ್ಲಿ ಉಪಾಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್.ಪ್ರಕಾಶ್, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಕುಲ್ಲೇಟಿರ ಪ್ರವಿ ಮೊಣ್ಣಪ್ಪ, ಎ.ಜೆ.ಬಾಬು, ಹೆಚ್.ಎನ್. ಮುರುಗನ್, ಸುಮಿ ಸುಬ್ಬಯ್ಯ, ಗಿರೀಶ್ ಗಣಪತಿ, ಸಿ.ಡಿ.ಮಾದಪ್ಪ, ಕೆ.ಪಿ.ಪ್ರಶಾಂತ್ ಹಾಗೂ ಕೆ.ಬಿ.ಪ್ರತಾಪ್, ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಕಾರ್ತಿಕ್ ವರದಿ ವಾಚಿಸಿದರು. ನಿರ್ದೇಶಕಿ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಕಡೆಮಾಡ ಸುನಿಲ್ ಮಾದಪ್ಪ ವಂದಿಸಿದರು.