ಮಡಿಕೇರಿ, ಸೆ. ೨೬: ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಕ್ಷಕ ದಿನಾಚರಣೆಯನ್ನು ವಿಧ್ಯುಕ್ತವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳು ಪಥಸಂಚಲನದಲ್ಲಿ ವಾದ್ಯ ಘೋಷಣೆಗಳೊಂದಿಗೆ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಕರೆದೊಯ್ದರು. ವೇದಿಕೆಯಲ್ಲಿ ಸಂತ ಮೈಕಲರ ಚರ್ಚ್ನ ಧರ್ಮಗುರು ರೇ.ಫಾ. ದೀಪಕ್, ಸಂತ ಮೈಕಲರ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೇ.ಫಾ. ನವೀನ್‌ಕುಮಾರ್, ರೇ.ಫಾ. ಆಂತೋಣಿ ಜಾರ್ಜ್, ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಮಂತ್ ಕೆ.ಎಸ್., ಶಾಲೆಯ ಮುಖ್ಯೋಪಾಧ್ಯಾಯ ಜಾನ್ಸನ್ ಕೆ.ವಿ., ಸಿಸ್ಟರ್ ಸರಿತಾ, ಸಿಸ್ಟರ್ ಪ್ರತಿಮಾ ಅವರುಗಳು ಉಪಸ್ಥಿತರಿದ್ದರು.

ಚರ್ಚ್ನ ಧರ್ಮಗುರುಗಳಾದ ರೇ.ಫಾ ದೀಪಕ್ ಅವರು ಮಾತನಾಡಿ, ಮಕ್ಕಳ ವ್ಯಕ್ತಿತ್ವವನ್ನು ನಿರೂಪಿಸುವಲ್ಲಿ ಶಿಕ್ಷಕರ ಪಾಲು ದೊಡ್ಡದು ಎಂದರು.

ರೇ.ಫಾ. ಆಂತೋಣಿ ಜಾರ್ಜ್ ಅವರು ಮಾತನಾಡಿ, ಋಷಿ ಸಾಕಿದ ಗಿಳಿಯಂತೆ ಮಾತುಗಳು ಉತ್ತಮವಾಗಿರಬೇಕು. ಗುರುಹಿರಿಯರಿಂದ ಸಂಸ್ಕಾರವನ್ನು ವಿದ್ಯಾರ್ಥಿಗಳು ಕಲಿತುಕೊಳ್ಳುವರು ಎಂದು ಹೇಳಿದರು.