ವಿಶ್ವ ಕಾಫಿ ಸಮ್ಮೇಳನ
- ಅನಿಲ್ ಎಚ್.ಟಿ.
ಬೆಂಗಳೂರು, ಸೆ. ೨೬: ಕಾಫಿ ಪೇಯದ ಅದ್ಭುತ ಲೋಕ ಬೆಂಗಳೂರಿನ ಅರಮನೆ ಆವರಣದಲ್ಲಿ ಮೈದಳೆದಿದೆ. ಜಗತ್ತಿನ ವಿವಿಧ ದೇಶಗಳ ಕಾಫಿ ಕಥೆಗಳನ್ನು ಇಲ್ಲಿ ಬಿಂಬಿಸಲಾಗಿದ್ದು, ಐತಿಹಾಸಿಕ ಅರಮನೆಯಲ್ಲಿ ಈಗ ಕಾಫಿಯೇ ಮಹಾರಾಜ.. ಎಲ್ಲೆಲ್ಲೂ ಜಗತ್ತಿನ ವೈವಿಧ್ಯಮಯ ಕಾಫಿಯದ್ದೇ ಘಮಲು.
ಏಷ್ಯಾದಲ್ಲಿ ಪ್ರಥಮ ಬಾರಿಗೆ ಆಯೋಜಿಸಲ್ಪಟ್ಟಿರುವ ವಿಶ್ವದ ೫ನೇ ಕಾಫಿ ಸಮ್ಮೇಳನ ಕಾಫಿಯ ರಂಗಿನಿAದ ಕಂಗೊಳಿಸುತ್ತಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಬೆಳೆಸಲಾಗುವ ಕಾಫಿಯೊಂದಿಗೆ ವಿಶ್ವದ ಹಲವಾರು ದೇಶಗಳ ಕಾಫಿ ಸಂಬAಧಿತ ಮಾಹಿತಿಯೂ ಇಲ್ಲಿ ಅನಾವರಣಗೊಂಡಿದೆ.
ಕೊಡಗು ಜಿಲ್ಲೆಯ ಅನೇಕ ಕಾಫಿ ಉದ್ಯಮ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಕೂಡ ವಿಶ್ವ ಕಾಫಿ ಸಮ್ಮೇಳನದಲ್ಲಿ ಮಳಿಗೆ ತೆರೆಯುವ ಮೂಲಕ ತಮ್ಮ ಉದ್ಯಮದ ವಿಸ್ತರಣೆಗೆ ಮುಂದಾಗಿವೆ. ಬೆಂಗಳೂರಿನಲ್ಲಿಯೇ ವಿಶ್ವಮಟ್ಟದ ಕಾಫಿ ಸಮ್ಮೇಳನ ಆಯೋಜನೆಗೊಂಡಿರುವುದು ಇಂತಹ ನೂರಾರು ಸ್ಟಾರ್ಟ್ಅಪ್ ಸಂಸ್ಥೆಗಳ ಬೆಳವಣಿಗೆಗೆ ನೆರವಾಗಲಿದೆ.
ಸಮ್ಮೇಳನದಲ್ಲಿ ಉಗಾಂಡ, ಆಫ್ರಿಕಾ, ಬ್ರೆಜಿಲ್, ಗ್ಯಾಟೆಮಾಲ, ಕೊಲಂಬಿಯಾ, ಶ್ರೀಲಂಕಾ ಸೇರಿದಂತೆ ಕಾಫಿ ಬೆಳೆಯುವ ೮೦ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಇಂತಹವರ ಜತೆ ವ್ಯವಹಾರಿಕ ಮಾತುಕತೆಗಾಗಿ ಬಿ-ಟ- ಬಿ (ಬ್ಯುಸಿನೆಸ್ ಟು ಬ್ಯುಸಿನೆಸ್) ಕೂಟ ಕೂಡ ಉತ್ತಮ ಸ್ಪಂದನ ಪಡೆದುಕೊಂಡಿದೆ. ಈ ರೀತಿಯ ಮಾತುಕತೆಗಳು ಕರ್ನಾಟಕದ ನವ ಉದ್ಯಮಿಗಳಿಗೆ ವಿಶ್ವಮಟ್ಟದಲ್ಲಿ ತಮ್ಮ ಕಾಫಿಯನ್ನು ಅಥವಾ ತಮ್ಮ ಪ್ರಾಂತ್ಯದ ಕಾಫಿಯನ್ನು ಪರಿಚಯಿಸುವ ಅವಕಾಶ ಕಲ್ಪಿಸಿದೆ.
ಬೆಂಗಳೂರು ಅರಮನೆ ಆವರಣದಲ್ಲಿನ ೩೦ ಸಾವಿರ ಚದರ ಕಿ.ಮೀ. ವಿಸ್ತಾರದಲ್ಲಿ ತೆರೆದುಕೊಂಡಿರುವ ಕಾಫಿ ಕೆಫೆಗಳು, ಪ್ರದರ್ಶನ ಮಳಿಗೆಗಳು, ಕಾಫಿ ಚರಿತ್ರೆ ಬಿಂಬಿಸುವ ವಸ್ತುಸಂಗ್ರಹಾಲಯವAತೂ ಜಗತ್ತಿನ ಕಾಫಿ ಲೋಕದ ಬ್ರಹ್ಮಾಂಡವನ್ನೇ ನೋಡುಗರ ಮುಂದೆ ತೆರೆದಿಟ್ಟಿದೆ. ನೂರಾರು ಕೆಫೆಗಳು ಒಂದು ಮತ್ತೊಂದರAತೆ ಇಲ್ಲ. ಪ್ರತಿ ಕೆಫೆಯೂ ವಿನ್ಯಾಸದಂತೆ ಸ್ವಾದದಲ್ಲೂ ವಿಭಿನ್ನವಾಗಿದೆ. ವೈಶಿಷ್ಟö್ಯಪೂರ್ಣವಾಗಿದೆ. ಇಲ್ಲಿ ಸಂದರ್ಶಕರು ಹಾಲು ಹಾಕದ ಕಾಫಿಯನ್ನೂ ಕುಡಿಯಬಹುದು, ಐಸ್ ಕ್ರೀಂ ಮಿಶ್ರಿತ ಕಾಫಿಯ ಸ್ವಾದವನ್ನೂ ಆಸ್ವಾದಿಸಬಹುದು. ಕಹಿಕಾಫಿಯೊಂದಿಗೆ, ಸಿಹಿಕಾಫಿ, ಬೆಲ್ಲದ ಕಾಫಿ ಸೇರಿದಂತೆ ನೂರಾರು ವಿಧದ ಕಾಫಿ ಇಲ್ಲಿ ಲಭ್ಯ. ಅರ್ಥಾತ್ ಜಗತ್ತಿನಲ್ಲಿ ತಯಾರಾಗುವ ವೈವಿಧ್ಯಮಯ ಕಾಫಿಯ ಸ್ವಾದ ಸವಿಯಲು ಕಾಫಿ ಸಮ್ಮೇಳನ ಸೂಕ್ತ ವೇದಿಕೆ ನೀಡಿದೆ. ಅಲ್ಲಲ್ಲಿ ಕಾಫಿ ಕಪ್ ಮತ್ತು ಕಾಫಿ ಹಣ್ಣಿನ ದೊಡ್ಡ ಗಾತ್ರದ ಕೃತಕ ಮಾದರಿಗಳು ಕಣ್ಮನ ಸೆಳೆಯುತ್ತಿವೆ.
ಅರಮನೆ ಆವರಣದಲ್ಲಿ ಜಗತ್ತಿನ ಕಾಫಿ ಉದ್ಯಮಿಗಳು, ಕಾಫಿ ಬೆಳೆಗಾರರು ಕಾಫಿ ಸಂಬAಧಿತ ಚರ್ಚೆ, ಹರಟೆ, ಭವಿಷ್ಯದ ಪರಿಕಲ್ಪನೆಗಳ ಬಗ್ಗೆ ಚರ್ಚಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅರಮನೆ ಒಳಗಿರುವ ಎರಡು ಸುಸಜ್ಜಿತ ವಿಶ್ವದರ್ಜೆಯ ಸಭಾಂಗಣದಲ್ಲಿ ವಿವಿಧ ದೇಶಗಳ ಕಾಫಿ ಪರಿಣಿತರು ಕಾಫಿ ಲೋಕದ ಬಗ್ಗೆ ಅಭಿಪ್ರಾಯ ಮಂಡಿಸುತ್ತಿದ್ದಾರೆ, ಜತೆಗೆ ಆಸಕ್ತರ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ.
ಹಲವಾರು ಫೋಟೋ ಪಾಯಿಂಟ್ಗಳು ವಿಶ್ವ ಕಾಫಿ ಸಮ್ಮೇಳನದ ಇಮೇಜ್ ಅನ್ನು ವೃದ್ಧಿಸುವಂತಿದೆ. ವಿದೇಶಿ ಪ್ರತಿನಿಧಿಗಳೂ ಸೇರಿದಂತೆ ಸಮ್ಮೇಳನಕ್ಕೆ ಬಂದವರು ಇಂಥ ಫೋಟೋ ಸೆಂಟರ್ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೊಡಗಿನಿಂದ ಬಂದ ಹಲವಾರು ಕಾಫಿ ಪ್ರೇಮಿಗಳು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದು ಇತರ ಸಂದರ್ಶಕರ ಗಮನ ಸೆಳೆಯುತ್ತಿದ್ದಾರೆ. ಕೊಡಗಿನ ಕಾಫಿ ಕಲರವ ಕಾಫಿ ಸಮ್ಮೇಳನದಲ್ಲಿ ವಿಜೃಂಭಿಸಿದೆ.
ಮಾಧ್ಯಮದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿದೇಶದಿಂದಲೂ ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನಕ್ಕೆ ಬಂದು ವರದಿ ಮಾಡುತ್ತಿದ್ದಾರೆ. ಅಂದಾಜು ೧೬೦ ಮಾಧ್ಯಮ ಪ್ರತಿನಿಧಿಗಳು ವಿಶ್ವ ಕಾಫಿ ಸಮ್ಮೇಳನ ವರದಿಗಾಗಿ ಬಂದಿರುವುದು ವಿಶೇಷ.
ಬೃಹದಾಕಾರದ ಗೋಳಾಕೃತಿಯಲ್ಲಿ ರೂಪಿಸಲಾಗಿರುವ ಕಾಫಿ ವಸ್ತು ಸಂಗ್ರಹಾಲಯ ಕೂಡ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕಾಫಿ ಬೀಜದಿಂದ ಕಾಫಿ ಹಣ್ಣಾಗಿ, ಕಾಫಿ ಸೇವನೆಗೆ ಯೋಗ್ಯವಾಗುವ ಹಂತದವರೆಗೂ ವಿವಿಧ ಹಂತಗಳ ಚಿತ್ರಣ ಈ ಮ್ಯೂಸಿಯಂನಲ್ಲಿದೆ. ತಾಂತ್ರಿಕವಾಗಿಯೂ ವಿಶೇಷವಾಗಿರುವ ಮ್ಯೂಸಿಯಂನ ಅಲ್ಲಲ್ಲಿ ಕಾಫಿಯು ಕೆಟಲ್ನಿಂದ ಲೋಟಕ್ಕೆ ಚೆಲ್ಲುತ್ತಿರುವ ದೃಶ್ಯ ಮನಸೆಳೆಯುತ್ತಿದೆ. ಪಶ್ಚಿಮಘಟ್ಟದ ಅರಣ್ಯದ ಪರಿಕಲ್ಪನೆಯಲ್ಲಿ ರೂಪಿತವಾಗಿರುವ ಕಾಫಿ ವಸ್ತು ಸಂಗ್ರಹಾಲಯದಲ್ಲಿ ಪಶ್ಚಿಮಘಟ್ಟ ಶ್ರೇಣಿಗಳ ಕಾಡು ಕೂಡ ಇದ್ದು, ಇಲ್ಲಿ ಹುಲಿ, ಕಾಡೆಮ್ಮೆ, ನವಿಲು, ಮೊಲ ಸೇರಿದಂತೆ ವನ್ಯಜೀವಿಗಳು ಕೂಡ ಆಕರ್ಷಣೆಗೆ ಪಾತ್ರವಾಗಿದೆ.