ಕೂಡಿಗೆ, ಸೆ. ೨೫ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗು ಸೈನಿಕ ಶಾಲೆ ಸಮೀಪದ ಕೃಷಿ ಕ್ಷೇತ್ರದ ಆವರಣದಲ್ಲಿರುವ ತೋಟಗಾರಿಕಾ ಇಲಾಖೆ ಜಾಗದಲ್ಲಿರುವ ತೋಡನ್ನು ಸ್ವಚ್ಛಗೊಳಿಸಲಾಯಿತು.

ನೀರಿನಲ್ಲಿ ಮೊಸಳೆ ಕಂಡುಬAದ ದೂರಿನ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಕೆರೆ ಸುತ್ತಲಿನ ಕಾಡನ್ನು ತೆರವುಗೊಳಿಸಿ ಶುಚಿಗೊಳಿಸಲಾಯಿತು.

ಕೆಲ ದಿನಗಳ ಹಿಂದೆ ಈ ಭಾಗದಲ್ಲಿ ಮೇಯಲು ಬಿಟ್ಟಿದ್ದ ಕುರಿ, ಆಡುಗಳು ಕಾಣೆಯಾಗುತ್ತಿದ್ದ ಬಗ್ಗೆ ದೂರು ಬರುತಿತ್ತು. ನಾಯಿಗಳು ಬೇಟೆಯಾಡಿ ಕೊಂದಿರಬಹುದೆAದು ಎಲ್ಲರೂ ಭಾವಿಸಿದ್ದರು. ಆದರೆ ಇತ್ತೀಚೆಗೆ ಕೆಲವರು ಈ ಗುಂಡಿಯೊಳಗೆ ಮೊಸಳೆ ಇರುವುದು ಗಮನಿಸಿದ್ದಾರೆ. ಸೈನಿಕ ಶಾಲೆಯ ಸಿಬ್ಬಂದಿಗಳಿಗೆ ಕೂಡ ಮೊಸಳೆ ಕಂಡುಬAದ ಹಿನ್ನೆಲೆಯಲ್ಲಿ ಮೊಸಳೆ ಇರುವುದು ಖಾತ್ರಿಯಾಗಿ ಗುಂಡಿ ಸುತ್ತಲೂ ಕಾಡನ್ನು ಸ್ವಚ್ಛ ಗೊಳಿಸಲಾಗಿದೆ.

ಮೊಸಳೆ ಹಿಡಿಯಲು ಬೋನ್ ಅಳವಡಿಸಲು ಕೋರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಲಾಗಿದೆ ಎಂದು ಗಾ.್ರಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದ್ದಾರೆ. ಈ ಸಂದರ್ಭ ಗ್ರಾಪಂ ಸದಸ್ಯೆ ಫಿಲೋಮಿನಾ, ಅಭಿವೃದ್ಧಿ ಅಧಿಕಾರಿ ಸಂತೋಷ್ ಇದ್ದರು