ಮಡಿಕೇರಿ, ಸೆ. ೨೪: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರ‍್ಯಾಗಿಂಗ್ ತಡೆಗಟ್ಟುವ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪಾಲ್ಗೊಂಡು ರ‍್ಯಾಗಿಂಗ್ ಕೃತ್ಯದ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ರ‍್ಯಾಗಿಂಗ್ ಒಂದು ಅಪರಾಧವಾಗಿದ್ದು, ರ‍್ಯಾಗಿಂಗ್ ಮಾಡಿದರೆ ಅದಕ್ಕೆ ನೀಡಲಾಗುವ ಶಿಕ್ಷೆಯ ಪ್ರಮಾಣ, ದಂಡದ ಬಗ್ಗೆ ಮಾಹಿತಿಯಿತ್ತರು. ರ‍್ಯಾಗಿಂಗ್ ವಿದ್ಯಾರ್ಥಿಯ ಭವಿಷ್ಯದ ಆಕಾಂಕ್ಷೆಗಳ ಮೇಲೆ ಪರಿಣಾಮಗಳನ್ನು ಉಂಟು ಮಾಡುವುದರ ಜೊತೆಗೆ ಕಾಲೇಜಿಗೂ ಕೆಟ್ಟ ಹೆಸರು ತರಲಿದ್ದು ಯಾವುದೇ ವಿದ್ಯಾರ್ಥಿಯು ಕೂಡ ರ‍್ಯಾಗಿಂಗ್ ಮಾಡಬಾರದು ಎಂದು ಸಲಹೆಯಿತ್ತರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ ಭಾರತೀಯ ವೈದ್ಯಕೀಯ ಮಂಡಳಿಯ ರ‍್ಯಾಗಿಂಗ್ ವಿರೋಧಿ ನೀತಿಯ ಬಗ್ಗೆ ವಿವರಿಸಿದರು.
ಸಂಸ್ಥೆಯ ರ‍್ಯಾಗಿಂಗ್ ವಿರೋಧಿ ಸಮಿತಿಯ ಸಮನ್ವಯಾಧಿಕಾರಿ ಡಾ. ಉಮೇಶ್‌ಬಾಬು ಮಾತನಾಡಿದರು.
ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರ‍್ಯಾಗಿಂಗ್ ಕೃತ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಕಿರು ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಸ್ವಾಮಿ, ನ್ಯಾಯ ವೈದ್ಯ ಶಾಸ್ತç ವಿಭಾಗದ ಮುಖ್ಯಸ್ಥ ಡಾ. ಉಮೇಶ್ ಬಾಬು, ಅಕಾಡೆಮಿಕ್ ರಿಜಿಸ್ಟಾçರ್ ಡಾ. ರವಿಕಿರಣ ಕಿಸಾನ್, ನರ್ಸಿಂಗ್ ಪ್ರಾಂಶುಪಾಲರಾದ ಮಂಜುಳ ಸೇರಿದಂತೆ ಬೋಧಕ ವರ್ಗದವರು ಮತ್ತು ಎಂಬಿಬಿಎಸ್ ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.