ಬೆಂಗಳೂರು, ಸೆ. ೨೪: ಇಂದಿನಿAದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಜರುಗಲಿರುವ ವಿಶ್ವಕಾಫಿ ಸಮ್ಮೇಳನಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ಇದೇ ಮೊದಲ ಬಾರಿಗೆ ಏಷ್ಯಾ ಖಂಡದಲ್ಲಿ ಆಯೋಜಿತ ವಿಶ್ವಕಾಫಿ ಸಮ್ಮೇಳನದಲ್ಲಿ ೮೦ ಕ್ಕೂ ಅಧಿಕ ದೇಶಗಳ ೨ ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡು ಕಾಫಿ ಕೃಷಿ, ಉದ್ಯಮದ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಸಂಜೆ ೩ ಗಂಟೆಗೆ ೫ ನೇ ವಿಶ್ವಕಾಫಿ ಸಮ್ಮೇಳನವನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಲಿದ್ದು, ನ್ಯೂಜಿನಿವ ದೇಶದ ಕಾಫಿ ಸಚಿವಾಲಯದ ಸಚಿವ ಜಾಯಿ ಕುಲಿ ಸೇರಿದಂತೆ ವಿಶ್ವದ ವಿವಿಧೆಡೆಯ ಕಾಫಿ ಉದ್ಯಮ ಕ್ಷೇತ್ರದ ದಿಗ್ಗಜರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂಗ್ಲೆAಡ್ನಲ್ಲಿರುವ ಅಂತರರಾಷ್ಟಿçÃಯ ಕಾಫಿ ಕೌನ್ಸಿಲ್ ಸಂಸ್ಥೆಯು ಜಗತ್ತಿನಲ್ಲಿ ಕಾಫಿ ಬೆಳೆಯುವ ೨೦ ದೇಶಗಳನ್ನು ಒಗ್ಗೂಡಿಸಿ ಲಂಡನ್ನಲ್ಲಿ ಕಾಫಿ ಕೃಷಿಯ ಬಗ್ಗೆ ಮೊದಲ ಬಾರಿಗೆ ೨೦೦೧ ರಲ್ಲಿ ವಿಶ್ವಕಾಫಿ ಸಮ್ಮೇಳನ ಆಯೋಜಿಸಿತ್ತು. ತರುವಾಯ ಬ್ರೆಜಿಲ್ (೨೦೦೫), ಗ್ಯಾಟೆಮಾಲ (೨೦೧೦), ಇಂಡೋನೇಷಿಯ (೨೦೧೬) ದೇಶಗಳಲ್ಲಿ ಕಾಫಿ ಸಮ್ಮೇಳನ ಯಶಸ್ವಿಯಾಗಿ ಆಯೋಜನೆಗೊಂಡು ಇದೀಗ ಭಾರತದ ಪಾಲಿಗೆ ೫ನೇ ವಿಶ್ವ ಕಾಫಿ ಸಮ್ಮೇಳನ ಆಯೋಜಿಸುವ ಅವಕಾಶ ದೊರಕಿದೆ.
ಏಷ್ಯಾ ಖಂಡ, ಭಾರತ ದೇಶ ಮತ್ತು ಕರ್ನಾಟಕಕ್ಕೆ ಮೊದಲ ಬಾರಿಗೆ ವಿಶ್ವಕಾಫಿ ಸಮ್ಮೇಳನದಂತಹ ವಿನೂತನ ಸಮ್ಮೇಳನ ಆಯೋಜಿಸುವ ಅವಕಾಶ ದೊರಕಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗ ದೊಂದಿಗೆ ಕಾಫಿ ಮಂಡಳಿಯು ಸಿಇಓ ಜಗದೀಶ್ ನೇತೃತ್ವದಲ್ಲಿ ಈ ಸಮ್ಮೇಳನದ ಯಶಸ್ವಿಗಾಗಿ ಒಂದು ವರ್ಷದಿಂದಲೇ ಎಲ್ಲಾ ರೀತಿಯ ತಯಾರಿ ಕೈಗೊಂಡಿದೆ. ೧೭ ಸಮಿತಿಗಳನ್ನು ರಚಿಸಿದ್ದು ಭಾರತದ ವಿವಿಧೆಡೆಗಳಿಂದ ಮತ್ತು ಜಗತ್ತಿನ ವಿವಿಧ ದೇಶಗಳಿಂದ ಬರುವ ಪ್ರತಿನಿಧಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಬೆಂಗಳೂರಿನ ಪ್ರತಿಷ್ಠಿತ ಅರಮನೆ ಯಲ್ಲಿನ ಪಂಚತಾರಾ ವ್ಯವಸ್ಥೆಯುಳ್ಳ ಸಭಾಂಗಣಗಳಲ್ಲಿ ಇಂದು ಸಂಜೆಯಿAದ ತಾ. ೨೮ ರ ತನಕ ಕಾಫಿ ಸಮ್ಮೇಳನ ನಡೆಯಲಿದೆ. ಅರಮನೆ ಆವರಣದಲ್ಲಿನ ೩೦ ಸಾವಿರ ಚ.ಕಿ.ಮೀ. ವಿಶಾಲವಾದ ಜಾಗದಲ್ಲಿ ಕಾಫಿಯ ಜಗತ್ತು ಅನಾವರಣಗೊಳ್ಳಲಿದೆ.
ಕಾಫಿ ಕೃಷಿ ಹಾಗೂ ಬೆಳೆಗೆ ಸಂಬAಧಿಸಿದ ತಾಂತ್ರಿಕತೆಯ ಉಪಕರಣಗಳು, ಹೊಸ ಆವಿಷ್ಕಾರ ಗಳು, ಕಾಫಿ ಉದ್ಯಮದ ಭವಿಷ್ಯಕ್ಕೆ ಸಂಬAಧಿಸಿದAತೆ ವಿದೇಶಗಳಲ್ಲಿನ ಪ್ರಗತಿ ಬಿಂಬಿಸುವ ೨೦೦ ಕ್ಕೂ ಅಧಿಕ ಮಳಿಗೆಗಳು ಅರಮನೆ ಆವರಣದಲ್ಲಿ ವೀಕ್ಷಕರ ಗಮನ ಸೆಳೆಯಲಿದೆ.
ಎರಡೂವರೆ ಸಾವಿರಕ್ಕೂ ಅಧಿಕ ಪ್ರತಿನಿಧಿಗಳಿಗಾಗಿ ಸಮ್ಮೇಳನ ನೋಂದಾಯಿಸಲ್ಪಟ್ಟಿದ್ದರೆ. ನಾಲ್ಕು ದಿನಗಳ ಕಾಲ ಕಾಫಿ ಸಮ್ಮೇಳನ ವೀಕ್ಷಿಸಲು ಹಲವೆಡೆಗಳಿಂದ ೧ ಲಕ್ಷಕ್ಕೂ ಅಧಿಕ ಆಸಕ್ತ ಜನರು ಕಾಫಿ ಸಮ್ಮೇಳನಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಜಗತ್ತಿನ ಕಾಫಿ ಬೆಳೆಗಾರ ದೇಶಗಳಲ್ಲಿ ದೊರಕುವ ವೈವಿಧ್ಯಮಯ ಕಾಫಿ ಮತ್ತು ಕಾಫಿಯಿಂದ ತಯಾರಿಸಲ್ಪಟ್ಟ ವಿವಿಧ ಪೇಯ, ಕಾಫಿಯನ್ನು ಬಳಸಿ ಉತ್ಪಾದನೆ ಯಾಗುವ ಖಾದ್ಯಗಳನ್ನೂ ಇಲ್ಲಿನ ‘ಫುಡ್ ಕೌಂಟರ್’ ಹೊಂದಿದೆ. ಕಾಫಿಗೆ ಸಂಬAಧಿಸಿದAತೆ
ವಿಶ್ವಾದ್ಯಂತದ ೧೨೦ ಪರಿಣಿತರು ೫೦ ಸಭೆಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.
ಈ ಬಾರಿಯ ವಿಶೇಷ ಎಂಬAತೆ ಬ್ಯುಸಿನೆಸ್ ಟು ಬ್ಯುಸಿನೆಸ್
(ಬಿ.ಟು.ಬಿ) ಸಮ್ಮೇಳನದ ಪ್ರಾಂಗಣ ದಲ್ಲಿ ಕಂಡುಬರಲಿದೆ. ಅಂದರೆ ಸ್ಟಾರ್ಟ್ ಅಪ್ ಸಂಸ್ಥೆಗಳು ಸೇರಿದಂತೆ ಕಾಫಿ ಉದ್ಯಮದಲ್ಲಿರುವವರು ವಿದೇಶದ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರತಿನಿಧಿಗಳೊಂದಿಗೆ ತಮ್ಮ ವಹಿವಾಟಿನ ಬಗ್ಗೆ ಮುಕ್ತ ಚರ್ಚೆ ನಡೆಸಲು ಇಲ್ಲಿ ಅವಕಾಶ ಇದೆ. ಹೀಗಾಗಿ ಇದು ಭಾರತೀಯ ವಿಶೇಷವಾಗಿ ಕರ್ನಾಟಕದ ಕಾಫಿ ಉದ್ಯಮಿಗಳಿಗೆ ಬಹಳ ಅನುಕೂಲ ಒದಗಿಸಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಎಚ್.ಡಿ. ಮೋಹನ್ಕುಮಾರ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.
ಅಂತೆಯೇ, ಕಾಫಿ ಸಮ್ಮೇಳನವು ಕಾಫಿ ಬೆಳೆಗಾರ ದೇಶಗಳಲ್ಲಿನ ಕಾಫಿ ಕೃಷಿ ಮತ್ತು ಕಾಫಿ ಉದ್ಯಮದ ಯಶೋಗಾಥೆಯ ಮೇಲೂ ಪರಿಣಾಮಕಾರಿಯಾಗಿ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ವಿಶ್ವದಲ್ಲಿಯೇ ಬ್ರೆಜಿಲ್ ದೇಶ ಅರೆಬಿಕಾ ಕಾಫಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಇತ್ತೀಚಿನ ವರ್ಷಗಳಲ್ಲಿ ವಿಯೆಟ್ನಾಂ ದೇಶವು ತನ್ನಲ್ಲಿನ ಕಾಡು ಪ್ರದೇಶಗಳನ್ನು ಕಡಿದು ಹಾಕಿ ಕಾಫಿ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ಎಕರೆಗೆ ೩ ಟನ್ ಗಳಷ್ಟು ಕಾಫಿ ಬೆಳೆದು ಜಗತ್ತಿನಲ್ಲಿಯೇ ಹೊಸದೊಂದು ಕಾಫಿ ಕ್ರಾಂತಿಗೆ ಕಾರಣವಾಗಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ಅಲ್ಲಿನ ಕಾಫಿ ಬೆಳೆಗಾರರು ಸಮಾವೇಶದಲ್ಲಿ ಮಾಹಿತಿ ನೀಡಿ ಇತರರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಭಾರತದ ಕಾಫಿ ಬ್ರಾö್ಯಂಡ್ಗಳಿಗೆ ಇಲ್ಲಿನ ಉದ್ಯಮಗಳಿಗೆ, ಕಾಫಿ ಕೆಫೆಗಳಿಗೆ, ರಪ್ತುದಾರರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಕಾಫಿ ಬೆಳೆಗಾರರಿಗೆ ನವ ಅವಕಾಶಗಳ ಬಾಗಿಲನ್ನು ವಿಶ್ವಕಾಫಿ ಸಮ್ಮೇಳನದಿಂದ ತೆರೆಯಲಿದೆ ಎಂದು ಡಾ. ಮೋಹನ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಕಾಫಿ ಸಮ್ಮೇಳನವನ್ನು ಯಾವುದೇ ಲಾಭದ ಉದ್ದೇಶದಿಂದ ಕಾಫಿ ಮಂಡಳಿ, ಸರ್ಕಾರ ಆಯೋಜಿಸಿಲ್ಲ. ಒಂದು ದಿನ ಸಮ್ಮೇಳನಕ್ಕೆ ಬರುವವರಿಗೆ ರೂ.೧೮೦೦ ಶುಲ್ಕ ವಿಧಿಸಲಾಗಿದೆ. ನಾಲ್ಕೂ ದಿನ ಪಾಲ್ಗೊಳ್ಳುವವರಿಗೆ ಊಟ ಮತ್ತು ಸ್ಮರಣಿಕೆ ಸೇರಿ ರೂ. ೩೫೦೦ ನಿಗದಿಮಾಡಲಾಗಿದೆ. ಎಲ್ಲಾ ವ್ಯವಸ್ಥೆಗಳೂ ಅಂತರರಾಷ್ಟಿçÃಯ ಗುಣಮಟ್ಟಕ್ಕೆ ತಕ್ಕಂತೆ ಇರಲಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮಡಿಕೇರಿಯ ಕೆ.ಕೆ. ವಿಶ್ವನಾಥ್ ‘ಶಕ್ತಿ’ಗೆ ಮಾಹಿತಿ ನೀಡಿದರು.
ವಿದೇಶಗಳಿಂದ ಬರುವ ನೂರಾರು ಕಾಫಿ ರಂಗದ ಪ್ರತಿನಿಧಿಗಳಿಗೂ ಭಾರತದ ಕಾಫಿ ಬೆಳೆಯ ಬಗ್ಗೆ ಸಮಗ್ರವಾಗಿ ತಿಳಿಯಲು ಅವಕಾಶವಿದ್ದು, ಎರಡು ದಿನಗಳ ಕಾಲ ಈ ಪ್ರತಿನಿಧಿಗಳು ಕೊಡಗು ಸೇರಿದಂತೆ ಸಕಲೇಶಪುರ, ಚಿಕ್ಕಮಗಳೂರಿನ ಕಾಫಿ ತೋಟಗಳಿಗೆ ಭೇಟಿ ನೀಡಿ ಇಲ್ಲಿನ ಸ್ಥಿತಿಗತಿ ಪ್ರತ್ಯಕ್ಷವಾಗಿ ತಿಳಿಯಲಿದ್ದಾರೆ ಎಂದೂ ಅವರು ಹೇಳಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ೪, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ೧೦ ಸೇರಿದಂತೆ ೨೪ ವಿವಿಧ ಕಾಫಿ ಸಂಬAಧಿತ ಸಂಘಟನೆಗಳು ಇವೆ. ಈ ಪೈಕಿ ಬಹುತೇಕ ಸದಸ್ಯರು ವಿಶ್ವಕಾಫಿ ಸಮ್ಮೇಳನದಲ್ಲಿ ಸಂಭ್ರಮದಿAದ ಪಾಲ್ಗೊಂಡು ಕಾಫಿ ಕೃಷಿ ಮತ್ತು ಉದ್ಯಮದ ಬಗೆಗಿನ ಮಾಹಿತಿ ಪಡೆಯಲಿದ್ದಾರೆ. ವಿಶ್ವಕಾಫಿ ಸಮ್ಮೇಳನದ ಮೂಲಕ ಜಗತ್ತಿನ ಕಾಫಿ ಲೋಕವೇ ಈಗ ಕರುನಾಡಿನ ಮನೆಯಂಗಳಕ್ಕೆ ಬಂದAತಾಗಿದೆ.