ಮಡಿಕೇರಿ, ಸೆ. ೨೩ : ಅರಕಲಗೋಡಿನಿಂದ ಭಾಗಮಂಡಲದತ್ತ ಜಲ್ಲಿ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವಿಫಲಗೊಂಡು ಅವಘಡಕ್ಕೀಡಾದ ಘಟನೆ ತಾಳತ್ತಮನೆ ಸಮೀಪ ಸಂಭವಿಸಿದೆ. ಬ್ರೇಕ್ ವಿಫಲಗೊಂಡ ಪರಿಣಾಮ ಲಾರಿ ರಸ್ತೆಯ ಬಲಬದಿಯ ಬರೆಗೆ ಅಪ್ಪಳಿಸಿದ್ದು ಲಾರಿ ಚಾಲಕ ವರದರಾಜು ಎಂಬಾತ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾನೆ.
ಅವಘಡ ಉಂಟಾದ ಸಂದರ್ಭ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
(ಮೊದಲ ಪುಟದಿಂದ) ಲಾರಿಯಲ್ಲಿದ್ದ ಕ್ಲೀನರ್ ಶರತ್ ಎಂಬಾತ ಅಪಾಯ ದಿಂದ ಪಾರಾಗಿದ್ದು, ಲಾರಿಯ ಬಲಬದಿ ಸಂಪೂರ್ಣ ಜಖಂಗೊAಡ ಪರಿಣಾಮ ಚಾಲಕ ವರದರಾಜು ಲಾರಿಯ ಒಳಗೆ ಸಿಲುಕಿಕೊಂಡಿದ್ದ. ನಂತರ ಸ್ಥಳಕ್ಕಾಗಮಿಸಿದ ಮಡಿಕೇರಿ ನಗರ ಸಂಚಾರಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು, ವಾಹನ ಸವಾರರು ಸತತ ಪ್ರಯತ್ನ ನಡೆಸಿ ಕ್ರೇನ್‌ಗಳನ್ನು ಬಳಸಿ ಲಾರಿ ಒಳಗೆ ಸಿಲುಕಿದ್ದ ಚಾಲಕ ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂದರ್ಭ ಕೆಲಕಾಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸ್ಥಳದಲ್ಲಿ ಸಂಚಾರಿ ಠಾಣಾಧಿಕಾರಿ ಶ್ರೀಧರ್, ಸಹಾಯಕ ಠಾಣಾಧಿಕಾರಿ ನಂದ, ಸಿಬ್ಬಂದಿ ಹಾಜರಿದ್ದರು.