ಮಡಿಕೇರಿ, ಸೆ. ೨೩: ಕುಟ್ಟ ಕ್ಲಸ್ಟರ್‌ನಲ್ಲಿ ನಡೆದ ೨೦೨೩-೨೪ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಜೆ.ಸಿ. ಪ್ರಾಥಮಿಕ ಶಾಲೆ ಶ್ರೀಮಂಗಲ ಹಾಗೂ ಜೆ.ಸಿ. ಪ್ರೌಢಶಾಲೆ ಕಾಕೂರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಕೆ. ತಾಶ ತಿಮ್ಮಯ್ಯ ಒಂದನೇ ತರಗತಿ (ಕತೆ ಹೇಳುವುದು), ಏಳನೇ ತರಗತಿಯ ಸಫಾ (ಧಾರ್ಮಿಕ ಪಠಣ: ಅರೇಬಿಕ್), ಆರನೇ ತರಗತಿಯ ಜಿತನ್ ಬೋಪಣ್ಣ (ಚಿತ್ರಕಲೆ) ಹಾಗೂ ಪ್ರೌಢಶಾಲೆಯ ವಿಭಾಗದಲ್ಲಿ ಕ್ವಿಜಾ, ಕನ್ನಡ ಭಾಷಣ ಸ್ಪರ್ಧೆ (ಅರೇಬಿಕ್ ಧಾರ್ಮಿಕ ಪಠಣ)ಗಳಲ್ಲಿ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.