ಸಿದ್ದಾಪುರ : ಮಾಲ್ದಾರೆ ಗ್ರಾ. ಪಂ ವ್ಯಾಪ್ತಿಯ ಮೈಲಾತ್‌ಪುರದ ಶ್ರೀ ಸಿದ್ದಪಾಜಿ ದೇವಸ್ಥಾನದಲ್ಲಿ ಗೌರಿ ಗಣೇಶ ಉತ್ಸವ ಆಚರಿಸಲಾಯಿತು. ಈ ಸಂದರ್ಭ ದೇವಾಲಯದ ಪ್ರಮುಖರಾದ ಬಾಲು ಪೂಜಾರಿ, ಗಣೇಶ ಇನ್ನಿತರರು ಹಾಜರಿದ್ದರು.ಮಡಿಕೇರಿ : ಸ್ಥಳೀಯ ದೇಚೂರಿ ನಲ್ಲಿ ಶ್ರೀ ವಿದ್ಯಾವಾರಿಧಿ ಯುವಕ ಸಂಘದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುವ ಗೌರಿ ಗಣೇಶೋತ್ಸವ ವಿಜೃಂಭಣೆಯಿAದ ನಡೆಯಿತು.

ಬೆಳಿಗ್ಗೆ ೬ ಗಂಟೆಗೆ ಶ್ರೀ ಗಣಪತಿ ಹೋಮ ನಂತರ ಗೌರಿ ಮತ್ತು ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ನೆರದಿದ್ದ ಭಕ್ತಾಧಿ ಗಳಿಗೆ ಅನ್ನದಾನ ನೆರವೇರಿತು.

ಪೂಜಾ ಕಾರ್ಯಗಳನ್ನು ಅರ್ಚಕರಾದ ಆದರ್ಶ ಭಟ್ ಅವರು ನೆರವೇರಿಸಿದರು. ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಗೌರಿಕೆರೆಯಲ್ಲಿ ವಿಸರ್ಜಿಸಲಾಯಿತು.ಹೇರೂರು : ಹೇರೂರು ಮತ್ತು ಹಾದ್ರೆ ಹೇರೂರಿನಲ್ಲಿ ೨ನೇ ವರ್ಷದ ಗಣೇಶೋತ್ಸವವನ್ನು ನೆರವೇರಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿಜೃಂಭಣೆಯಿAದ ಗಣೇಶ ಮೂರ್ತಿಯನ್ನು ಹಾರಂಗಿ ಹಿನ್ನೀರಿನಲ್ಲಿ ಸಂಜೆ ವಿಸರ್ಜಿಸಲಾಯಿತು.ಜೋಡಿ ಬಸವೇಶ್ವರ

ಯುವಕ ಮಂಡಳಿ

ಕುಶಾಲನಗರ : ಕುಶಾಲನಗರದ ಮಾದಪಟ್ಟಣದಲ್ಲಿ ಜೋಡಿ ಬಸವೇಶ್ವರ ಯುವಕ ಮಂಡಳಿ ಮತ್ತು ನ್ಯೂ ಫ್ರೆಂಡ್ಸ್ ಯುವಕ ಮಂಡಳಿ ವತಿಯಿಂದ ಗಣೇಶ ಪ್ರತಿಷ್ಠಾಪಿಸಲಾಯಿತು.ಬ್ಯಾಡಗೊಟ್ಟ ಪುನರ್ವಸತಿ ಶಿಬಿರ

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಶಿಬಿರದಲ್ಲಿ ಗೌರಿ ಗಣೇಶೋತ್ಸವ ಆಚರಣೆ ನಡೆಯಿತು. ವಿನಾಯಕ ಗೆಳೆಯರ ಬಳಗ ಹಾಗೂ ವನವಾಸಿ ಕಲ್ಯಾಣ ವೇದಿಕೆ ಆಶ್ರಯದಲ್ಲಿ ಮಂಗಳವಾರ ಗಣಪತಿ ಪ್ರತಿಷ್ಠಾಪನೆ ನಡೆಸಲಾಯಿತು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪೂಜೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಅಪ್ಪಚ್ಚು ರಂಜನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಕೂಡಿಗೆ ಗ್ರಾ.ಪಂ. ಅಧ್ಯಕ್ಷ ಗಿರೀಶ್, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಕೃಷ್ಣ, ವನವಾಸಿ ಕಲ್ಯಾಣ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಣ್ಣ, ಕಾರ್ಯದರ್ಶಿ ಎಂ. ಹರ್ಷ, ಖಜಾಂಚಿ ಅನೀಶ್, ಆರ್.ಎಸ್.ಎಸ್. ಸಹ ಕಾರ್ಯವಾಹಕ ರಮೇಶ್ ಬೊಟ್ಟುಮನೆ, ತಾಲೂಕು ಸೇವಾ ಪ್ರಮುಖ ಮುರಳೀಧರ್, ಹಿಂಜಾವೇ ಯ ರಾಜೀವ್, ಪ್ರವೀಣ್, ಪ್ರದೀಪ್, ಶಿಬಿರದ ನಿವಾಸಿಗಳಾದ ರವಿ, ಸಿದ್ದ ಮಂಜೇಶ್, ಸುಬ್ರಮಣಿ ಇದ್ದರು.ಐಗೂರು : ಏಕದಂತ ಗೆಳೆಯರ ಬಳಗದ ಆಶ್ರಯದಲ್ಲಿ ಐಗೂರು ಬಸ್ ನಿಲ್ದಾಣದಲ್ಲಿ ಗಣೇಶ ಪ್ರತಿಷ್ಠಾಪನೆ ನಡೆಯಿತು. ಬಳಗದ ಅಧ್ಯಕ್ಷ ವಿಶ್ವ ಎಡವಾರೆ, ಉಪಾಧ್ಯಕ್ಷ ಅಶೋಕ, ಕಾರ್ಯದರ್ಶಿ ಯತೀಶ, ಪ್ರಮುಖರಾದ ಅಪ್ಪಚ್ಚು ಭರತ (ಸಜಿ) ಹರೀಶ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಹೊದ್ದೂರು : ಹೊದ್ದೂರು ಶ್ರೀ ಪ್ರಸನ್ನ ಗಣಪತಿ ಸಂಘದ ಆಶ್ರಯದಲ್ಲಿ ೧೭ನೇ ವರ್ಷದ ಅದ್ಧೂರಿಯ ಗೌರಿ-ಗಣೇಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಶಾಸ್ತ-ಈಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಬೆಳಿಗ್ಗೆ ೧೦ ಗಂಟೆಗೆ ದೇವಾಲಯದ ಅರ್ಚಕ ಅಮಿತ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಶ್ರೀ ಶಾಸ್ತ-ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಸಂಘದ ಸದಸ್ಯರುಗಳಿಗೆ ಶಾಲನ್ನು ನೀಡಿ ಗೌರವಿಸಿ ಮಾತನಾಡಿ, ಇಂದು ಸಮಾಜದಲ್ಲಿ ಸಂಸ್ಕಾರಯುತ ಜೀವನ ಮರೆಯಾಗುತ್ತಿದ್ದು, ಧರ್ಮ ರಕ್ಷಣೆಗಾಗಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆಯಿಂದ ಶ್ರಮಿಸುವಂತಾಗಬೇಕೆAದು ಕರೆ ನೀಡಿದರು.

ಮಧ್ಯಾಹ್ನದ ನಂತರ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಬಲಮುರಿ ಕಾವೇರಿ ಹೊಳೆಯಲ್ಲಿ ಬಾಗಿನ ಅರ್ಪಿಸಿ ವಿಸರ್ಜಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ಕಾರ್ಯದರ್ಶಿ ಎಂ.ಆರ್. ರಘು, ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.ಕುಶಾಲನಗರ : ಡ್ರೀಮ್ ಸ್ಟಾರ್ ಡ್ಯಾನ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಕೊಡವ ಸಮಾಜ ಆವರಣದ ಕಚೇರಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಶರಣ್, ಪವನ್, ಆದಿತ್ಯ, ಚೈತನ್ಯ, ಪಲ್ಲವಿ, ವಿನುತ ಮತ್ತಿತರರು ಇದ್ದರು.ಹೊದ್ದೂರು : ಹೊದ್ದೂರು ಶ್ರೀ ಪ್ರಸನ್ನ ಗಣಪತಿ ಸಂಘದ ಆಶ್ರಯದಲ್ಲಿ ೧೭ನೇ ವರ್ಷದ ಅದ್ಧೂರಿಯ ಗೌರಿ-ಗಣೇಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಶ್ರೀ ಶಾಸ್ತ-ಈಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಬೆಳಿಗ್ಗೆ ೧೦ ಗಂಟೆಗೆ ದೇವಾಲಯದ ಅರ್ಚಕ ಅಮಿತ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಶ್ರೀ ಶಾಸ್ತ-ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಸಂಘದ ಸದಸ್ಯರುಗಳಿಗೆ ಶಾಲನ್ನು ನೀಡಿ ಗೌರವಿಸಿ ಮಾತನಾಡಿ, ಇಂದು ಸಮಾಜದಲ್ಲಿ ಸಂಸ್ಕಾರಯುತ ಜೀವನ ಮರೆಯಾಗುತ್ತಿದ್ದು, ಧರ್ಮ ರಕ್ಷಣೆಗಾಗಿ ಹಬ್ಬದ ಆಚರಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ನಿಸ್ವಾರ್ಥ ಸೇವೆಯಿಂದ ಶ್ರಮಿಸುವಂತಾಗಬೇಕೆAದು ಕರೆ ನೀಡಿದರು.

ಮಧ್ಯಾಹ್ನದ ನಂತರ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಬಲಮುರಿ ಕಾವೇರಿ ಹೊಳೆಯಲ್ಲಿ ಬಾಗಿನ ಅರ್ಪಿಸಿ ವಿಸರ್ಜಿಸಲಾಯಿತು.

ಸಂಘದ ಅಧ್ಯಕ್ಷ ಬಿ.ಕೆ. ಚಂದ್ರಶೇಖರ್, ಕಾರ್ಯದರ್ಶಿ ಎಂ.ಆರ್. ರಘು, ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.ಮೂರ್ನಾಡು : ಮೂರ್ನಾಡಿನ ವಿವಿಧೆಡೆಯಲ್ಲಿ ತಾ. ೧೯ರಂದು ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಅದ್ಧೂರಿ ಗೌರಿ-ಗಣೇಶೋತ್ಸವವನ್ನು ಆಚರಿಸಲಾಯಿತು.

ಮೂರ್ನಾಡಿನಲ್ಲಿ ೩೩ನೇ ವರ್ಷದ ಗೌರಿ-ಗಣೇಶೋತ್ಸದ ಅಂಗವಾಗಿ ಶ್ರೀ ವಿನಾಯಕ ಯುವ ಮಂಡಳಿಯ ವತಿಯಿಂದ ವೆಂಕಟೇಶ್ವರ ಕಾಲೋನಿ ಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ೩೦ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಟಿ. ಜಂಕ್ಷನ್‌ನ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ೨೫ನೇ ಗೌರಿ-ಗಣೇಶೋತ್ಸವದ ಅಂಗವಾಗಿ ಶ್ರೀ ವಿನಾಯಕ ಸೇವಾ ಸಮಿತಿಯ ವತಿಯಿಂದ ಟೌನ್‌ನಲ್ಲಿರುವ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ೨೦ನೇ ವರ್ಷದ ಗೌರಿ-ಗಣೇಶೋತ್ಸವದ ಅಂಗವಾಗಿ ಭದ್ರಕಾಳಿ ಕಾಂಪ್ಲೆಕ್ಸ್ನಲ್ಲಿ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಅದೇ ದಿನ ಮೂರ್ನಾಡಿನ ಮುಖ್ಯ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಮೆರವಣಿಗೆಯ ಮೂಲಕ ಸಾಗಿ ಬಲಮುರಿಯ ಕಾವೇರಿ ಹೊಳೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.

೩೧ನೇ ವರ್ಷದ ಗೌರಿ-ಗಣೇಶೋತ್ಸದ ಅಂಗವಾಗಿ ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ ಗಾಂಧಿನಗರದ ಶ್ರೀರಾಮ ಮಂದಿರದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ೧೪ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಕೋಡಂಬೂರು ಗ್ರಾಮದ ಶ್ರೀ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮತ್ತು ವಿ. ಜಂಕ್ಷನ್‌ನ ಹನುಮಾನ್ ಟ್ರೇರ‍್ಸ್ನಲ್ಲಿ ೪ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶ್ರೀ ಗಜೇಂದ್ರ ಯುವ ಶಕ್ತಿ ಸಂಘದಿAದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ೭ ದಿನಗಳ ಕಾಲ ವಿವಿಧ ಪೂಜೆ ಹವನಾದಿಗಳ ಮೂಲಕ ಮಹಾಗಣಪತಿಯ ಉತ್ಸವ ಮೂರ್ತಿಗಳನ್ನು ಪೂಜಿಸಿ ತಾ. ೨೫ರಂದು ಅಲಂಕೃತ ಮಂಟಪದಲ್ಲಿ ಅದ್ಧೂರಿ ಶೋಭಯಾತ್ರೆಯೊಂದಿಗೆ ಮೂರ್ನಾಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಬಲಮುರಿಯ ಕಾವೇರಿ ಹೊಳೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಗುವುದು.